ಹುಂಚ : ಇತ್ತೀಚೆಗೆ ಹುಂಚಾ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರು ಸೇರಿದಂತೆ ಐವರು ನಿರ್ದೇಶಕರು ರಾಜಿನಾಮೆ ಪ್ರಹಸನ ಸುಖಾಂತ್ಯವಾಯಿತು ಎನ್ನುವ ಮೊದಲು ಡಿಸಿಸಿ ಬ್ಯಾಂಕ್ ಈಗ ಸುಸ್ತಿದಾರ ಸೊಸೈಟಿ ಎಂದು ಘೋಷಿಸಿ ಎರಡು ಲಕ್ಷಕ್ಕೂ ಹೆಚ್ಚು ಬಡ್ಡಿ ವಿಧಿಸಿದ್ದಾರೆಂದು ತಿಳಿದು ಬಂದಿದೆ.
ಹುಂಚಾ ವ್ಯವಸಾಯ ಸಹಕಾರಿಯ ಆಡಿಟ್ ವರದಿಯಲ್ಲಿ ಐವತ್ತು ಲಕ್ಷಕ್ಕೂ ಹೆಚ್ಚೂ ವ್ಯತ್ಯಾಸವಾಗಿದೆ ಎಂಬ ಸುದ್ದಿಗೆ ಬೆದರಿ ಅಧ್ಯಕ್ಷರು ಸೇರಿದಂತೆ ಐವರು ನಿರ್ದೇಶಕರು ರಾಜಿನಾಮೆ ನೀಡಿದ್ದರು . ಉಳಿದ ನಿರ್ದೇಶಕರು ಎದ್ದು ಬಿದ್ದು ಆಡಿಟರ್ ರಿಂದ ಸರಿ ಮಾಡಿಸಿ ವರದಿ ಕೊಡಿಸುವ ವಾಗ್ದಾನ ನೀಡಿ ರಾಜಿನಾಮೆ ಪ್ರಹಸನವನ್ನು ತಣ್ಣಗಾಗಿಸಿದ್ದರು
ಆದರೆ ಇದರ ನಡುವೆ ಸಾಲ ಪಡೆದಿದ್ದ ರೈತರು ಹಣವನ್ನು ವಾಪಾಸು ಕಟ್ಟಿದ್ದು ಡಿಸಿಸಿ ಸಾಲದ ಅಕೌಂಟಗೆ ಜಮಾ ಆಗುವ ಬದಲು ಕರೆಂಟ್ ಅಕೌಂಟ್ ಗೆ ಜಮಾ ಆಗಿದ್ದು ಇನ್ನೊಂದು ರಗಳೆ ಸೃಷ್ಟಿಸಿದೆ. ಅಧ್ಯಕ್ಷರು ರಾಜಿನಾಮೆ ನೀಡಿದ್ದರಿಂದ ಸೈನಿಂಗ್ ಅಥಾರಿಟಿ ಇಲ್ಲದೆ ಸುಸ್ತಿಯಾಗಿದ್ದು ಈಗ ಎರಡು ಲಕ್ಷಕ್ಕು ಹೆಚ್ಚು ಬಡ್ದಿಯನ್ನು ಡಿಸಿಸಿ ಬ್ಯಾಂಕ್ ವಿಧಿಸಿದೆ ಎನ್ನಲಾಗುತ್ತಿದೆ.
ಈ ಬಡ್ಡಿ ಹಣಕ್ಕೆ ಅಧ್ಯಕ್ಷರ ರಾಜೀನಾಮೆ ಮತ್ತು ರಾಜೀನಾಮೆ ವಾಪಸಾತಿ ಪ್ರಕರಣದ ಕಾರಣಕ್ಕೆ ಸಂಬಂಧಿಸಿದ್ದರಿಂದ ಅಧ್ಯಕ್ಷರನ್ನು ಹೊಣೆ ಮಾಡುತ್ತಾರೊ??? ಅಥವಾ ನಿರ್ದೇಶಕರ ಮಂಡಳಿ ಹೊಣೆಯಾಗುತ್ತದೊ.?? ಇಲ್ಲಾ ಕೊನೆಗೆ ಕುರಿಯಾಗುವ ಸರದಿ ರೈತರದ್ದಾಗಿ , ಎಲ್ಲಾ ಷೇರುದಾರರಿಂದ ವಸೂಲಿ ಮಾಡಲಾಗುತ್ತದೋ ಕಾದು ನೋಡಬೇಕಿದೆ.