Headlines

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಭತ್ತ ಬೇಸಾಯ ಯಂತ್ರ ಮತ್ತು ಭತ್ತ ಬೆಳೆಗಾರರ ಕಾರ್ಯಾಗಾರ

ರಿಪ್ಪನ್‌ಪೇಟೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸನಗರ ಇವರ ಆಶ್ರಯದಲ್ಲಿ ಯಾಂತ್ರಿಕೃತಶ್ರೀ ಪದ್ಧತಿ ಭತ್ತ ಬೇಸಾಯ ಯಂತ್ರಶ್ರೀ ಮತ್ತು ಭತ್ತ ಬೆಳೆಗಾರರ ತರಬೇತಿ ಕಾರ್ಯಾಗಾರವನ್ನು ರಿಪ್ಪನ್‌ಪೇಟೆಯ ಬಾಳೂರು ವಲಯದ ಕಾಳೇಶ್ವರ ಗ್ರಾಮದ ಹೇಮಂತ್ ರಾಜ್, ಪ್ರಕಾಶ್ ಇವರ ಜಮೀನಿನಲ್ಲಿ ತಾಲೂಕು ಯೋಜನಾಧಿಕಾರಿಯಾದ ಬೇಬಿ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.



ನಂತರ ಮಾತನಾಡಿದ ಅವರು, ಮಲೆನಾಡಿನಲ್ಲಿ ಭತ್ತ ವ್ಯವಸಾಯವು ಪ್ರಮುಖ ಬೆಳೆಯಾಗಿದ್ದು ಹೆಚ್ಚಿನ ಜನರು ಈ ವ್ಯವಸಾಯದಲ್ಲಿ ತೊಡಗಿದ್ದಾರೆ, ಆಧುನಿಕ ಯಂತ್ರಗಳ ಮತ್ತು ತಂತ್ರಜ್ಞಾನಗಳ ನೆರವನ್ನು ಪಡೆದು ಭತ್ತಗಳನ್ನು ಬೆಳೆದರೆ ಉತ್ತಮ ಫಸಲನ್ನು ಪಡೆಯಬಹುದು ಹಾಗೆ ಭತ್ತ ಬೆಳೆದ ಬೆಳೆಗಾರರು ಆರ್ಥಿಕ ಅಭಿವೃದ್ಧಿಯನ್ನು ಹೊಂದಬಹುದು ಎಂದರು.



ಈ ಸಂದರ್ಭದಲ್ಲಿ ತಾಲೂಕು ಯೋಜನಾ ಕೃಷಿ ಅಧಿಕಾರಿಯಾದ ಶಶಿಧರ್, ಯಂತ್ರಧಾರೆ ಮೇಲ್ವಿಚಾರಕರಾದ ಸುದರ್ಶನ್, ವಲಯ ಮೇಲ್ವಿಚಾರಕರಾದ ಪೂರ್ಣಿಮಾ ವಿ, ಸೇವಾ ಪ್ರತಿನಿಧಿಯಾದ ಶುಭ, ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ, ಒಕ್ಕೂಟದ ಪದಾಧಿಕಾರಿಗಳಾದ ಹೇಮಂತ್ ರಾಜ್, ಪ್ರಕಾಶ್, ಉಮೇಶ್, ರವೀಂದ್ರ ಕೆರೆಹಳ್ಳಿ ಹಾಗೂ ರೈತರಾದ ಹುಚ್ಚಪ್ಪ, ನಾಗರಾಜಪ್ಪ, ಸುರೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.


ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *