ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಳೆಬಾಗಿಲು ಸಮೀಪದ ಕಣಿಕೆ ಗ್ರಾಮದಲ್ಲಿ ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿ ತೆಪ್ಪ ಮಗುಚಿದ ಕಾರಣ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ ವೇಳೆಗೆ ಯಲ್ಲಪ್ಪ ( 55 ) ಮೀನು ಹಿಡಿಯಲು ಕಣಿಕೆ ಗ್ರಾಮದ ಶರಾವತಿ ಹಿನ್ನೀರಿಗೆ ತೆರಳಿದ್ದಾರೆ.ದುರದೃಷ್ಟವಶಾತ್ ಮೀನು ಹಿಡಿಯಲು ಹೋದಾಗ ತೆಪ್ಪ ಮಗುಚಿ ಬಿದ್ದಿದ್ದರಿಂದ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇಂದು ಬೆಳಿಗ್ಗೆ ಕಣಿಕೆ ಗ್ರಾಮದ ಬಳಿ ಶವ ತೇಲಿ ಬಂದಿದೆ.
ಸಾಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.