Headlines

ಸಾವು ಸಾಧನೆಯಲ್ಲ, ಬದುಕಿ ಸಾಧಿಸಬೇಕು:ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ರಮ್ಯಾ

ರಿಪ್ಪನ್‌ಪೇಟೆ: ಮಹಿಳೆಯರಿಗೂ ಸಮಾಜದಲ್ಲಿ ಗೌರವಾಧಾರಗಳಿದ್ದು, ಅಂಜಿಕೊಳ್ಳುವುದನ್ನು ಬಿಟ್ಟು ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಸಮಸ್ಯೆಗಳಿಗೆ ಸಾವು ಪರಿಹಾರವೂ ಅಲ್ಲ ಸಾಧನೆಯೂ ಅಲ್ಲ. ಸಂಕಷ್ಟಗಳನ್ನು ಎದುರಿಸಿ ಬದುಕಬೇಕು ಎಂದು ಮಹಿಳಾ ಪೊಲೀಸ್  ಕಾನ್‌ಸ್ಟೇಬಲ್ ರಮ್ಯಾ ಹೇಳಿದರು.


ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕಸ್ತೂರಿ ಮಹಿಳಾ ಬಳಗ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ ಒಳ್ಳೆಯ ಶಿಕ್ಷಣ ಮಹಿಳೆಯ ಜೀವನವನ್ನು ಕಾಪಾಡುತ್ತದೆ. ಬಂಗಾರ, ಹಣ, ಬಾಂಡ್ ಮಾಡಿಸುವುದಕ್ಕಿಂತ ಉತ್ತಮ ಶಿಕ್ಷಣ ನೀಡಿದರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಮಹಿಳೆಯರು ಗುರಿಯಡೆಗೆ ಸಾಗುವಾಗ ಇತರರು ಕಾಲೆಳೆಯುವುದು ಸಹಜ. ಅದನ್ನು ಮೆಟ್ಟಿನಿಂತು ಗುರಿಯನ್ನು ಸಾಧಿಸಬೇಕು. ಹೆಣ್ಣು ಅಡಿಗೆಗೆ ಮಾತ್ರ ಸೀಮಿವೆಂಬ ಕೀಳರಿಮೆಯನ್ನು ತೊರೆದು ಸಮಾಜದಲ್ಲಿರುವ ಅವಕಾಶಗಳನ್ನು ಸದ್ಬಳಕೆಮಾಡಿಕೊಂಡು ಯಶಗಳಿಸಬೇಕು ಎಂದರು. 

ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಧನಲಕ್ಷ್ಮೀ, ಅಶ್ವಿನಿ, ವೇದಾವತಿ, ಮುಖಂಡರಾದ ಆರ್‌.ಡಿ. ಶೀಲಾ, ಸಾಜೀದಾ, ಸೀಮಾ, ಸರಸ್ವತಿ, ಗಾಯಿತ್ರಿ, ಶಾಲಿನಿ, ಶೈಲಾಪ್ರಭು, ಅಂಬಿಕಾ, ಪೊಲೀಸ್ ಪೇದೆ ಗೌರಿ ಇನ್ನಿತರರಿದ್ದರು.

Leave a Reply

Your email address will not be published. Required fields are marked *