Headlines

ಕರ್ತವ್ಯ ನಿರತವಾಗಿದ್ದಲೇ ವಿದ್ಯುತ್ ಪ್ರವಹಿಸಿ, ಲೈನ್ ಮ್ಯಾನ್ ಸಾವು

ಶಿವಮೊಗ್ಗ: ಟ್ರಾನ್ಸ್ ಫಾರ್ಮರ್ ತೊಂದರೆಯಿಂದಾಗಿ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಂತ ಸಂದರ್ಭದಲ್ಲಿಯೇ ವಿದ್ಯುತ್ ಪ್ರವಹಿಸಿ, ಲೈನ್ ಮ್ಯಾನ್ ಸಾವನ್ನಪ್ಪಿರೋ ಘಟನೆ, ಸೊರಬ ತಾಲೂಕಿನ ಉಳವಿ ಹತ್ತಿರದ ದೂಗೂರು ಬಳಿಯ ಭದ್ರಾಪುರದಲ್ಲಿ ನಡೆದಿದೆ.

ಸೊರಬ ತಾಲೂಕಿನ ದೂಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭದ್ರಾಪುರದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ನಿನ್ನೆ ಟ್ರಾನ್ಸ್ ಫಾರ್ಮರ್ ಬಳಿಯಲ್ಲಿ ಉಳವಿ ಮೆಸ್ಕಾಂ ಶಾಖೆಯ ಲೈನ್ ಮ್ಯಾನ್, ಗದಗ ಜಿಲ್ಲೆಯ ಗಜೇಂದ್ರಗಡದ ರವಿ ಬೀರಪ್ಪ ಚವ್ಹಾಣ್ (32) ಕೆಲಸ ನಿರತರಾಗಿದ್ದರು.


ಈ ವೇಳೆ 11 ಕೆವಿ ಮಾರ್ಗದ ವಿದ್ಯುತ್ ಶಾಕ್ ಹೊಡೆದಿದೆ. ಕೂಡಲೇ ಅವರನ್ನು ಸಾಗರ ಆಸ್ಪತ್ರೆಗೆ ಸಾಗಿಸಲಾಗಿದೆ ಆದ್ರೂ, ಮಾರ್ಗ ಮಧ್ಯೆ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಅವಘಡಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ.

ಮೃತ ರವಿ ಬೀರಪ್ಪ ಚವ್ಹಾಣ್ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಅವರ ಅಗಲಿಕೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *