ರಿಪ್ಪನ್ ಪೇಟೆ : ಸಂಘದ ಬಾಕಿ ಹಣ ಕೇಳಲು ಹೋದ ಸಂಘದ ಮಹಿಳೆಯರ ಮೇಲೆಯೇ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಘಟನೆ ಕಮದೂರು ಗ್ರಾಮದಲ್ಲಿ ನಡೆದಿದೆ.
ಕಮದೂರು ಗ್ರಾಮದ ಭಾಗಿರಥಮ್ಮ ಎಂಬುವವರು ಶ್ರೀ ರೇಣುಕಾಂಬ ಸಂಘ ಆಲುವಳ್ಳಿ ಯ ಸದಸ್ಯೆಯಾಗಿದ್ದು ಸಾಲ ಪಡೆದಿರುತ್ತಾರೆ.ಕಳೆದ ಹಲವಾರು ದಿನಗಳಿಂದ ಸಾಲ ಮರು ಪಾವತಿ ಮಾಡುತ್ತಿಲ್ಲವೆಂದು ಸಂಘದ ಎಲ್ಲಾ ಸದಸ್ಯರು ಅವರ ಮನೆಗೆ ಸಾಲ ವಸೂಲಿಗೆ ಹೋಗಿದ್ದಾರೆ.ಈ ಸಂಧರ್ಭದಲ್ಲಿ ಭಾಗಿರಥಮ್ಮ ರವರ ಮಗ ಸತೀಶ್ ಎಂಬುವವನು ಸಾಲ ವಸೂಲಿಗೆ ಹೋಗಿದ್ದ ಮಹಿಳೆಯರಿಗೆ ಜಾತಿನಿಂದನೆ ಮಾಡಿ ನಮ್ಮ ಮನೆಗೆ ಬರಬೇಡಿ ಎಂದಿದ್ದಾನೆ.
ಆಗ ಸಂಘದ ಸದಸ್ಯರು ಜೋರಾಗಿಯೇ ಸತೀಶ್ ಗೆ ಗದರಿಸಿದ್ದಾರೆ ಹಣ ಕಟ್ಟುವ ಯೋಗ್ಯತೇ ಇಲ್ಲದಿದ್ದಲ್ಲಿ ಯಾಕೆ ಸಾಲ ಪಡೆದೆ ಎಂದಿದ್ದಾರೆ ಈ ಸಂಧರ್ಭದಲ್ಲಿ ಸತೀಶ್ ಏಕಾಏಕಿ ರೇಣುಕಾಂಬ ಸಂಘದ ಸದಸ್ಯೆಯರಾದ ಲಲಿತಮ್ಮ ಹಾಗೂ ಮಂಜುಳಾ ಎಂಬುವವರ ಮೇಲೆ ರಾಡ್ ನಿಂದ ಹಲ್ಲೆ ನಡೆಸಿರುತ್ತಾನೆ ಎಂದು ತಿಳಿದು ಬಂದಿದೆ.
ಕೂಡಲೇ ಅಲ್ಲಿದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಗಲಾಟೆಯನ್ನು ತಪ್ಪಿಸಿದ್ದಾರೆ.ತೀವ್ರವಾಗಿ ತಲೆಗೆ ಪೆಟ್ಟಾಗಿದ್ದ ಗಾಯಾಳುಗಳನ್ನು ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ದೂರು ದಾಖಲಾಗಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇👇