ಪುರಾಣ ಪ್ರಸಿದ್ದ ಕೆರೆಹಳ್ಳಿಯ ಶ್ರೀರಾಮೇಶ್ವರ ದೇವರ ಪುನರ್ ಪ್ರತಿಷ್ಠಾಪನೆ
ರಿಪ್ಪನ್‌ಪೇಟೆ: ಪುರಾಣಪ್ರಸಿದ್ಧ ಕೆರೆಹಳ್ಳಿಯ ಶ್ರೀರಾಮೇಶ್ವರ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ, ನೂತನ ದೇವಸ್ಥಾನದ ಕಟ್ಟಡದಲ್ಲಿ ಫೆ. 13 ರ ಭಾನುವಾರ ನೆರವೇರಲಿದೆ. ಪುರಾಣಕಾಲದ ಐತಿಹ್ಯವನ್ನು ಹೊಂದಿರುವ ದೇವರನ್ನು ಸೀತಾರಾಮರು ವನವಾಸ ಕಾಲದ ಸಂದರ್ಭದಲ್ಲಿ ಶಿವನ ಆರಾಧನೆಗಾಗಿ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರೆಂಬ ಪ್ರತೀತಿ ಇಲ್ಲಿನ ಜನರಲ್ಲಿ ಪ್ರಚಲಿತದಲ್ಲಿದೆ. ಪ್ರಾಚೀನಕಾಲದ ಶಿಥಿಲಾವಸ್ಥೆಗೊಂಡಿದ್ದ ದೇವಸ್ಥಾನವನ್ನು ತೆರವುಗೊಳಿಸಿ ಶಿವನ ಲಿಂಗವನ್ನು ವಿಸರ್ಜಿಸಲಾಗಿತ್ತು. ಭಕ್ತರ ಅಭಿಲಾಷೆಯಂತೆ ದಾನಿಗಳ ಸಹಾಯದಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನೂತನ ದೇವಾಲಯ ರೂಪುಗೊಂಡಿದ್ದು, ಸುಸಜ್ಜಿತ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ…