ಶಿವಮೊಗ್ಗ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾದ ವಿಮಾನ ನಿಲ್ದಾಣವು ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ 2ನೇ ಅತಿ ಉದ್ದದ ರನ್ ವೇ ಹೊಂದಿರುವಂತ ವಿಮಾನ ನಿಲ್ದಾಣ ಇದಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸಂಸದ ಬಿ.ವೈ.ರಾಘವೇಂದ್ರ, ಇಂದು ಕೇಂದ್ರ ನಾಗರಿಕ ವಿಮಾನ ಖಾತೆಯ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಇವರನ್ನು ಭೇಟಿ ಮಾಡಿದ್ದೇನೆ.
ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ, ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ ಎರಡನೇ ಅತಿ ಉದ್ದ ವಿರುವ ರನ್ ವೇ ಹೊಂದಿದ್ದು, ಶಿವಮೊಗ್ಗ ಜಿಲ್ಲೆ ಕರ್ನಾಟಕ ಭೂಪಟದ ಮಧ್ಯಭಾಗದಲ್ಲಿ ಇರುತ್ತದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆದಷ್ಟು ಬೇಗ ಮಲ್ಟಿ ಡಿಸಿಪ್ಲೆನರಿ ಟೀಮ್ ಕೂಡಲೇ ಕಳುಹಿಸಿಕೊಡುವಂತೆ ಕೋರಲಾಗಿದೆ. Electrical Equipment Funding ಮತ್ತು RCS UDAN-4.2 ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಜನರಿಗೆ ದೇಶದ ಮಹಾನಗರಗಳಿಗೆ ಹೋಗಿಬರಲು ಮತ್ತು ವ್ಯಾಪಾರ ಹಾಗೂ ಪ್ರವಾಸೋದ್ಯಮ ಸಲುವಾಗಿ ಬರುವ ಪ್ರಯಾಣಿಕರನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಇನ್ನೂ ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ದೇಶದ 11 ಪ್ರಮುಖ ನಗರಗಳ ವಿಮಾನ ನಿಲ್ದಾಣಕ್ಕೆ ಜೋಡಣೆ ಮಾಡುವ ಮಾರ್ಗವಾಗಲಿದೆ.
1. Mumbai -Shimogga- Mumbai
2. Mumbai-Shimogga- Mangalore
3. Mumbai-Shimogga- Chennai
4. Mumbai-Shimogga- Tirupati
5. Shimogga-Gulbarga- Hyderabad
6. Shimogga-Gulbarga-Delhi
7. Bangalore-Shimogga- Belgaum,
8. Bangalore-Shimogga- Delhi
9. Cochin- Shimogga-Delhi
10. Bangalore-Shimogga- Goa
11. Hyderabad-Shimogga- Cochin
ಈ ಮೇಲಿನ ಮಾರ್ಗಗಳನ್ನು ಕೂಡಲೇ ಟೆಂಡರ್ ಕರೆಯುವ ಮೂಲಕ ವಿಮಾನ ಸಂಚರಿಸಲು ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಲು ಮಾನ್ಯ ಕೇಂದ್ರ ಮಂತ್ರಿಗಳನ್ನು ಈ ಸಂದರ್ಭದಲ್ಲಿ ಕೋರಿರೋದಾಗಿ ತಿಳಿಸಿದ್ದಾರೆ.