Headlines

ಶಾಸಕ ಹರತಾಳು ಹಾಲಪ್ಪ ವಿರುದ್ದ ಬೇಳೂರು ಗೋಪಾಲಕೃಷ್ಣ ಕೆಂಡಾಮಂಡಲ : ನಾಳೆಯೇ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಸಿದ್ದ

ಕಳೆದ ಹದಿನೈದು ದಿನಗಳಿಂದ ಸಾಗರ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಆಣೆ ಪ್ರಮಾಣದ ಜಟಾಪಟಿ ಕೊನೆಯ ಹಂತ ತಲುಪಿದ್ದು ನಾಳೆ ಧರ್ಮಸ್ಥಳದಲ್ಲಿ ಅಂತಿಮವಾಗಬಹುದೇ ?

ಇಂದು ಸಾಗರದಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಪತ್ರೀಕಾ ಹೇಳಿಕೆ ನೀಡಿದ್ದಾರೆ.

ಹರತಾಳು ಹಾಲಪ್ಪ ವಿರುದ್ದ ಬೇಳೂರು ಗೋಪಾಲಕೃಷ್ಣ ಹೇಳಿದ್ದಾದರು ಏನು??

ಶಾಸಕ ಹಾಲಪ್ಪನವರೆ ಏನ್ ಹೇಳಿದ್ರಿ ನಾನು ಪಲಾಯನವಾದಿ ಅಂತಾನ?? 
ಹೇಳೋಕೆ ಮೊದಲು ಯೋಚನೆ ಮಾಡಿ ಧರ್ಮಸ್ಥಳದ ಆಣೆಪ್ರಮಾಣಕ್ಕೆ ನೀವು ಮೋದಲು ಯಾವ ದಿನಾಂಕ ನಿಗದಿ ಮಾಡಿದ್ರಿ.? 13-2-2022 ಭಾನುವಾರ ಅಲ್ವ? ಅದನ್ನು ನಾನು ಕೂಡ ಒಪ್ಪಿದ್ದೆ. ನನ್ನ ಹತ್ತಿರದವರಿಂದ ನಿಮ್ಮ ಸೋದರ ಸಂಬಂಧಿ ಬಸರಾಣಿ ರವಿ ಅವರಿಗು ಮಾಹಿತಿ ಕೊಟ್ಟಿದ್ದೆ ಬೇಕಾದರೆ ರವಿಯವರನ್ನು ಕೇಳಿ. 

ಆದರೆ ನೀವು ದಿನ ಬದಲಾವಣೆ ಮಾಡಿದ್ರಿ‌.ನಿಮಗೆ ಮಾತ್ರ ಕೆಲಸ ಇರುತ್ತದೆ ಬೇರೆಯವರಿಗೆ ಇರಲ್ಲ ಅನ್ನೋ ಮೊಂಡುತನ ಅಲ್ವ? ನಾನು ಕೂಡ ಮಾಜಿ ಶಾಸಕ ಗೋವಾ ಚುನಾವಣೆಯಲ್ಲಿ ಭಾಗವಹಿಸಬೇಕಾಗಿತ್ತು ಹಾಗಾಗಿ 12 ಕ್ಕೆ ಧರ್ಮಸ್ಥಳಕ್ಕೆ ಬರೋಕೆ ಆಗಲ್ಲ  23-2-22 ರ ನಂತರ ಯಾವ ದಿನವಾದರು ಬರುತ್ತೇನೆ ಅಂತ ಹೇಳಿದ್ದೆ ಅಲ್ವ??

ನೀವೇನ್ ಅಂದ್ರಿ? ಭಾಷೆ ಬರದೆ ಚುನಾವಣೆಗೆ ಹೋಗ್ತಾರೆ ಅಂತ ಅಪಹಾಸ್ಯ ಮಾಡಿದ್ರಿ ಆದರೆ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ ನಿಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ, ಅಮಿತ್ ಷಾ ಅವರಿಗೆ ಕ‌ನ್ನಡ ಬರುತ್ತ? ಯಾಕಂದ್ರೆ ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರ ಮಾಡಿ ಹೋಗ್ತಾರಲ್ವ?? ಸಿಟಿ ರವಿ ತಮಿಳುನಾಡು ಉಸ್ತುವಾರಿ ಅಲ್ವ ಅವರಿಗೆ ತಮಿಳು ಬರುತ್ತಾ ? ಹೇಗೆ ತೊದಲ, ಬದಲ ಮಾತನಾಡಿದ್ರು ನೆನಪಿದ್ಯ? ಅದೆ ನಿಮ್ಮ ಪಕ್ಷದ ಕರ್ನಾಟಕ ಉಸ್ತುವಾರಿ ಅವರಿಗೆ ಕನ್ನಡ ಬರುತ್ತ? ಭಾಷೆ ಮುಖ್ಯ ಅಲ್ಲ ಹಾಲಪ್ಪನವರೆ ಮಾಡೋಕ್ ಹೋಗಿರೋ ಕೆಲಸ ಮುಖ್ಯ ? ಜನರಿಗೆ ಅಷ್ಟು ಗೊತ್ತಾಗಲ್ವ ಬಂದಿರೋದು ಚುನಾವಣೆಗೆ ಮತ ಕೇಳೋಕೆ ಅಂತ  ನಿಮಗೆ ಅಷ್ಟು ಗೊತ್ತಿಲ್ಲದ ಬಫೂನ್ ಆಗ್ಬಿಟ್ರಲ್ಲ ಹಾಲಪ್ಪನವರೆ….

ಹೌದು ಹಾಲಪ್ಪನವರೆ ಗೋವಾ ಚುನಾವಣೆ ಯಾವಾಗ?? 14-2-22 ರಂದು ಅಲ್ವ?ಬಹಿರಂಗ ಪ್ರಚಾರ ಮುಗಿಯೋದು 12-2-22 ರ ಸಂಜೆಗೆ  ಅಲ್ವ? ಅಂದರೆ ಇನ್ನು ಒಂದ್ ದಿನ ಟೈಮ್ ಇದೆ ಅಲ್ವ??  ಮೂರ್ ಬಾರಿ ಎಂಎಲ್ಎ, ಒಂದ್ ಬಾರಿ ಸಚಿವ ಆಗಿದ್ದ್ರು ಸರಿಯಾಗಿ ಮಾಹಿತಿ ಇಲ್ದೆ ಮಾತಾಡಿ ದೊಡ್ಡ ಮೇದಾವಿ ತರ ಶೊ ಕೊಡ್ತಿರಲ್ಲ ಹಾಲಪ್ಪನವರೆ…

ಏನು ಮಜಾ ಮಾಡೋಕೆ ಗೋವಾ ಹೋಗ್ತಾರಾ??ಅಂದ್ರೆ ಗೋವಾ ಹೋಗೋರೆಲ್ಲ ಮಜಾ ಮಾಡೋಕೆ ಅಂದಂಗಾಯ್ತು ನೀವು ಕೂಡ ಗೋವಾ, ಮಹಾರಾಷ್ಟ್ರ ಹಾಗೆ ಹೀಗೆ ಬೇರೆ ಬೇರೆ ರಾಜ್ಯಕ್ಕೆ ಹೋಗ್ತಿರಲ್ಲ ಅದು ಮಜಾ ಮಾಡೋಕೆನ?? ಯಾಕ್ ಹಾಲಪ್ಪನವರೆ ನೀವ್ ಮಾಡೋದ್ನೆಲ್ಲ ಬೇರೆಯವರು ಮಾಡ್ತಾರೆ ಅಂತ ಅನ್ಕೋತೀರ? 
ನೀವ್ ಬಿಡಿ ನಿಮ್ ಬಗ್ಗೆ ಮಾತಾಡೋ ಹಾಗೆನೆ ಇಲ್ಲ.
ಎಲ್ರು ನಿಮ್ತರ ಇರೋಕ್ ಆಗುತ್ಯೇ ಹೇಳಿ.

ನಾನು ಗೋವಾ ಚುನಾವಣೆಗೆ ಹೋಗುವ ಕಾರ್ಯಕ್ರಮವನ್ನು ರದ್ದು ಮಾಡಿ ನೀವು ಕೊಟ್ಟ ದಿನಾಂಕದಂದೆ ಧರ್ಮಸ್ಥಳಕ್ಕೆ ಬರ್ತೀನಿ ನೀವು ಬನ್ನಿ..

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇


Leave a Reply

Your email address will not be published. Required fields are marked *