Headlines

ಸಾಗರದಲ್ಲಿ ಪ್ರತಿಭಟನಾ ನಿರತ “ಬ್ಯಾಂಕ್ ಮಿತ್ರ” ಉದ್ಯೋಗಿ ಆತ್ಮಹತ್ಯೆಗೆ ಯತ್ನ : ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬ್ಯಾಂಕ್ ಮಿತ್ರ ಉದ್ಯೋಗಿಗಳ ಪ್ರತಿಭಟನೆ

ಸಾಗರ ತಾಲ್ಲೂಕಿನ ಕೆಳದಿಯಲ್ಲಿ ಬ್ಯಾಂಕ್ ಮಿತ್ರರ ಸಂಘ ಮತ್ತು ಮಾನವ ಹಕ್ಕುಗಳ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ದೀವರ ಯುವ ವೇದಿಕೆ ಸಹಯೋಗದೊಂದಿಗೆ ಕೆಳದಿ ಕೆನರಾ ಬ್ಯಾಂಕ್ ನಿಂದ ಬ್ಯಾಂಕ್ ಮಿತ್ರರನ್ನು ವಜಾಗೊಳಿಸಿರುವ ನೀತಿ ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.


ಶುಕ್ರವಾರ ಪ್ರತಿಭಟನಾ ನಿರತ ಬ್ಯಾಂಕ್ ಮಿತ್ರ ಉದ್ಯೋಗಿ ಶಕುಂತಲಾ ಎಂಬುವವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಕೂಡಲೇ
ಸಹೋದ್ಯೋಗಿಗಳು ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿಲಾಗಿತ್ತು,ಈಗ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.


ಘಟನೆಯ ಹಿನ್ನಲೆ :
ಕಾರ್ಪೊರೇಟ್ ಕಂಪೆನಿಗಳ ಮೂಲಕ ಬ್ಯಾಂಕ್ ಮಿತ್ರ ರನ್ನು ನೇಮಕ ಮಾಡಿಕೊಂಡು ಅವರನ್ನು ಶೋಷಣೆ ಮಾಡಲಾಗುತ್ತಿದೆ ಕನಿಷ್ಠ ವೇತನ ಕೂಡ ಕೊಡುತ್ತಿಲ್ಲ ಜೀವನ ಭದ್ರತೆಯೂ ಇಲ್ಲ ಇಲ್ಲದೆ ಬ್ಯಾಂಕ್ ಮಿತ್ರರು ಅಭದ್ರತೆಯ ನೆರಳಿನಲ್ಲಿ ಬದುಕುವಂತಾಗಿದೆ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಅಂಥ ಬ್ಯಾಂಕ್ ಮಿತ್ರರನ್ನು ವಜಾಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರುತ್ತಿದ್ದರು.


ಬ್ಯಾಂಕ್ ಮಿತ್ರ ರನ್ನು ನೇಮಕ ಮಾಡಿಕೊಳ್ಳುವ ಕಾರ್ಪೋರೇಟ್ ಕಂಪನಿಗಳು 3 ವರ್ಷಕ್ಕೊಮ್ಮೆ ಬದಲಾಗುತ್ತದೆ. ಹೊಸ ಹೊಸ ಕಂಪೆನಿಗಳು ಮತ್ತೊಂದು ನೀತಿ ತಂದು ಬ್ಯಾಂಕ್ ಮಿತ್ರರ ಶೋಷಣೆಗೆ ಇಳಿದಿದೆ. ಹಿಂದಿನ ಮಿಷನ್ ಇಂಡಿಯಾ ಕಂಪೆನಿ ಬ್ಯಾಂಕ್ ಮಿತ್ರರಿಂದ ಐವತ್ತು ಸಾವಿರ ಡೆಪಾಸಿಟ್ ಪಡೆದಿತ್ತು ಆದರೆ ತಮ್ಮ ವಾಯಿದೆ ಮುಗಿದ ನಂತರ ಬ್ಯಾಂಕ್ ಮಿತ್ರರಿಗೆ ಡೆಪಾಸಿಟ್ ಹಣ ವಾಪಸ್ ಕೊಟ್ಟಿಲ್ಲ, ಹೊಸ ಕಂಪೆನಿ ಗ್ರಾಮ ತರಂಗ ಇನ್ನೊಂದಿಷ್ಟು ಡಿಪಾಸಿಟ್ ನೀಡಲು ಒತ್ತಾಯಿಸುತ್ತಿದೆ ಬಡ ಬ್ಯಾಂಕ್ ಮಿತ್ರರು ಹಣ ಪಾವತಿ ಮಾಡಲಾಗದೆ ಪರದಾಡುವ ಸ್ಥಿತಿಯಿದೆ. ಕೆಳದಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬ್ಯಾಂಕ್ ಮಿತ್ರರ ಆಗಮಿಸುತ್ತಿದ್ದು ತಕ್ಷಣ ಸಮಸ್ಯೆ ಬಗೆಹರಿಸದೇ ಹೋದಲ್ಲಿ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗುತ್ತದೆ ಎಂದು ಬ್ಯಾಂಕ್ ಮಿತ್ರರ ಸಂಘದ ರಾಜ್ಯಾಧ್ಯಕ್ಷ ಡೋಂಗ್ರೆ ಎಚ್ಚರಿಕೆ ನೀಡಿದ್ದರು.

ಹೋರಾಟ ಉಗ್ರ ಸ್ವರೂಪಕ್ಕೆ ಹೋಗುವ ಮುಂಚೆ ಸರ್ಕಾರ ಮಧ್ಯ ಪ್ರವೇಶಿಸಿ ಬಡ ಬ್ಯಾಂಕ್ ಮಿತ್ರರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.

Leave a Reply

Your email address will not be published. Required fields are marked *