ಹಿಜಾಬ್ – ಕೇಸರಿ ಶಾಲು ಸಂಘರ್ಷ : ಇಂದು ಶಿವಮೊಗ್ಗದ ATNC ಕಾಲೇಜಿಗೆ ರಜೆ ಘೋಷಣೆ !

ಶಿವಮೊಗ್ಗ : ಹಿಜಾಬ್, ಕೇಸರಿ ಶಾಲು ಸಂಘರ್ಷದ ಬೆನ್ನಿಗೆ, ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ (ATNCC) ಒಂದು ದಿನ ತರಗತಿ ನಡೆಸದಿರಲು ಆಡಳಿತ ಮಂಡಳಿ ನಿರ್ಧರಿಸಿದೆ. ಫೆಬ್ರವರಿ 8ರಂದು ತರಗತಿ ನಡೆಯುವುದಿಲ್ಲ. ಆದರೆ ಉಪನ್ಯಾಸಕರು ಮತ್ತು ಸಿಬ್ಬಂದಿ ಕಾಲೇಜಿಗೆ ಬರಲಿದ್ದಾರೆ ಎಂದು ATNC ಕಾಲೇಜು ಪ್ರಾಂಶುಪಾಲರಾದ ಸುರೇಶ್ ಅವರು ತಿಳಿಸಿದ್ದಾರೆ. ATNC ಕಾಲೇಜು ವಿದ್ಯಾರ್ಥಿಗಳು ನಿನ್ನೆ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಹಿಜಾಬ್ ಧರಿಸುವ…

Read More

ಚಿನ್ಮನೆ ಬಳಿ ಭೀಕರ ಅಪಘಾತ : ಒಬ್ಬ ಸಾವು,ಇಬ್ಬರ ಸ್ಥಿತಿ ಗಂಭೀರ

ಚಿನ್ನಮನೆ ಗ್ರಾಮದ ಬಳಿ ಬೊಲೆರೊ ಪಿಕಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.ಅಪಘಾತವಾಗಿ ನಿಲ್ಲಿಸಿದ್ದ ಬೊಲೆರೊ ಪಿಕಪ್ ಗೆ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಆಯನೂರು ಕಡೆಯಿಂದ ಬರುತ್ತಿದ್ದ ಬೊಲೆರೊ ಪಿಕಪ್ ವಾಹನಕ್ಕೆ ಸೂಡೂರು ಕಡೆಯಿಂದ ಆಯನೂರು ಕಡೆ ಬರುತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಚಿಕ್ಕಮಚಲಿ ಗ್ರಾಮದ ನಿವಾಸಿ ಶ್ಯಾಮು (40) ಎಂಬುವವನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ನಂತರ ಹಿಂಬದಿಯಿಂದ ಬಂದು…

Read More

ಮತಾಂತರಕ್ಕೆ ಪ್ರಚೋದನೆ ಮಾಡಿದ ಪಾಸ್ಟರ್ ಅರೆಸ್ಟ್

ಶಿವಮೊಗ್ಗ: ನಗರದ ಬೊಮ್ಮನಕಟ್ಟೆಯಲ್ಲಿ ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪಾಸ್ಟರ್ ಒಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಬೊಮ್ಮನಕಟ್ಟೆ ಇ ಬ್ಲಾಕ್ ನಲ್ಲಿ ತೃತೀಯಲಿಂಗಿ ಮಧು ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದರು. ಬೊಮ್ಮನಕಟ್ಟೆ ನಿವಾಸಿಯೊಬ್ಬರ ಪುತ್ರನ ಅನಾರೋಗ್ಯವನ್ನು ದುರ್ಬಳಕೆ ಮಾಡಿಕೊಂಡು ನಿಮ್ಮ ಧರ್ಮ ಪಾಲಿಸಿದರೆ ಕಾಯಿಲೆ ವಾಸಿಯಾಗುವುದಿಲ್ಲ. ನಮ್ಮ ಧರ್ಮಕ್ಕೆ ಮತಾಂತರವಾಗಿ ಪ್ರಾರ್ಥನೆ ಮಾಡಿದರೆ ಕಾಯಿಲೆ ಗುಣವಾಗುತ್ತದೆ ಎಂದು ಹೇಳಿದ್ದು, ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಮತಾಂತರಕ್ಕೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಪಾಸ್ಟರ್ ಮಧುನನ್ನು ಪೊಲೀಸರು…

Read More

ಕಾಲೇಜು ಆವರಣದಲ್ಲಿ ಹಿಜಾಬ್, ಕೇಸರಿ ಶಾಲು ನಡೆಯಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಏನೇನೋ ವೇಷ ಧರಿಸಿಕೊಂಡು ಬರುತ್ತೇವೆ, ನನ್ನ ಧರ್ಮ ಇದು, ನನ್ನ ಧರ್ಮ ಅದು ಎಂದು ಹೇಳಿದರೆ ಆಗಲ್ಲ. ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವುದು ಕಾಲೇಜು ಆವರಣದಲ್ಲಿ ನಡೆಯವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕಾಲೇಜು ಆಡಳಿತ ನಿರ್ಧರಿಸಿರುವ ಸಮವಸ್ತ್ರವನ್ನೇ ಕಾಲೇಜಿನಲ್ಲಿ ಧರಿಸಬೇಕು. ಇದನ್ನು ಕಡ್ಡಾಯ ಮಾಡಿ ಶಿಕ್ಷಣ ಇಲಾಖೆ ನಿನ್ನೆ ಆದೇಶ ಹೊರಡಿಸಿದೆ. ಈ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ…

Read More

ಶಿವಮೊಗ್ಗಕ್ಕೂ ಕಾಲಿಟ್ಟ ಹಿಜಾಬ್​ ವಿವಾದ: ಕೇಸರಿ ಶಾಲು ಧರಿಸಿ ಬಂದ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು

 ಶಿವಮೊಗ್ಗಕ್ಕೂ ಹಿಜಾಬ್ ಹಾಗೂ ಕೇಸರಿ ಶಾಲು​ ವಿವಾದ ಕಾಲಿಟ್ಟಿದ್ದು, ಇಂದು ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಶಿವಮೊಗ್ಗದ ವಿದ್ಯಾನಗರದಲ್ಲಿರುವ ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಹಿಜಾಬ್​​ಗೆ ಅವಕಾಶ ನೀಡದಂತೆ, ಹಾಗೂ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳ ಹೊರಗಿಡುವಂತೆ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಮನವೊಲಿಸಲು ಕಾಲೇಜಿನ ಪ್ರಾಂಶುಪಾಲರು ಪ್ರಯತ್ನಿಸಿದ್ದು, ಈ ವೇಳೆ ವಿದ್ಯಾರ್ಥಿಳು ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಹ್ಯಾದ್ರಿ ವಾಣಿಜ್ಯ…

Read More

ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರ ತೀರ್ಥಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ಕೇಸರಿ ಶಾಲು-ಹಿಜಾಬ್ ಸಂಘರ್ಷ ..!!

ಕರಾವಳಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾರಕಕ್ಕೇರಿರುವ ಕೇಸರಿ ಶಾಲು,ಹಿಜಾಬ್ ಧರಿಸುವ ಕುರಿತಾದ ಪ್ರಕರಣ ಇದೀಗ ರಾಜ್ಯದ ಗೃಹ ಸಚಿವರಾಗಿರುವ ಅರಗ ಜ್ಞಾನೇಂದ್ರ ತವರು ಕ್ಷೇತ್ರ ತೀರ್ಥಹಳ್ಳಿ ಬಾಳೆಬೈಲು ಸರ್ಕಾರಿ  ಡಿಗ್ರಿ ಕಾಲೇಜಿಗೂ ತಟ್ಟಿದೆ. ಇಂದು ಬೆಳಗ್ಗೆ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿಕೊಂಡು ಹೊಂದಿದ್ದು ಶಾಲೆಯ ಆಡಳಿತ ಇದಕ್ಕೆ ಅವಕಾಶ ಕಲ್ಪಿಸಿಲ್ಲ ಕೂಡಲೆ ವಿದ್ಯಾರ್ಥಿಗಳು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಯನ್ನು ನೀಡಿದ್ದು ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕೂರುತ್ತಿರುವುದರಿಂದ…

Read More

ಪಂಚಭೂತಗಳಲ್ಲಿ ಲೀನರಾದ ಗಾನಕೋಗಿಲೆ ಲತಾ ಮಂಗೇಶ್ಕರ್…

ಗಾನ ಕೋಗಿಲೆ ಭಾರತ ರತ್ನ ಲತಾ ಮಂಗೇಶ್ಕರ್  ಭಾನುವಾರ ಮುಂಜಾನೆ 8.12ರ ಸುಮಾರಿಗೆ ಇಹಲೋಕ ತ್ಯಜಿಸಿದ್ದು ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಲತಾ ಮಂಗೇಶ್ಕರ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಅವರು ನಮ್ಮನ್ನಗಲಿದ್ದಾರೆ ಎಂದು ಅವರ ಆರೋಗ್ಯದ ಉಸ್ತುವಾರಿ ಹೊತ್ತಿದ್ದ ಡಾ.ಪ್ರತಿತ್ ಸಮ್ದಾನಿ ತಿಳಿಸಿದರು. ಲತಾ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ…

Read More

ರೈತ ಪರ ಹೋರಾಟಗಾರ ಮೃತ ಕಗ್ಗಲಿ ವೀರಭದ್ರಪ್ಪ ಗೌಡ ರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಹಿರಿಯರು,ರೈತ ಹೋರಾಟಗಾರರಾದ ಕೆ ಸಿ ವೀರಭದ್ರಪ್ಪ ಗೌಡ (88) ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ರವರು ಮೃತ ಕಗ್ಗಲಿ ವೀರಭದ್ರಪ್ಪ ಗೌಡರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಈ ಸಂಧರ್ಭದಲ್ಲಿ ಮೃತರ ಪತ್ನಿ ಪಿತಾಂಬರಮ್ಮ ಹಾಗೂ ಪುತ್ರರಾದ ಕಗ್ಗಲಿ ಲಿಂಗಪ್ಪ , ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಎಂ ಪರಮೇಶ್ ,ಕಾಂಗ್ರೆಸ್ ರಿಪ್ಪನ್…

Read More

ಅಪ್ರಾಪ್ತ ನಾದಿನಿಯನ್ನ ಲೈಂಗಿಕವಾಗಿ ಬಳಸಿ ವಿಕೃತಿ ಮೆರೆದ ಕ್ರೂರಿ ಬಾವ! ಪ್ರಸವಪೂರ್ವ ಹೆರಿಗೆಯಾದ ಮಗು ಸಾವು

ನಾದಿನಿ ಮೇಲೆ ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿ ಮಗು ಕರುಣಿಸಿದ್ದ ಕ್ರೂರಿ ಬಾವನನ್ನು ಪೊಲೀಸರು ಬಂದಿಸಿದ್ದಾರೆ. ದುರಾದೃಷ್ಟವಶಾತ್ ಪ್ರಸವಪೂರ್ವ ಹೆರಿಗೆಯಾದ ಬಳಿಕ ಮಗು ಮೃತಪಟ್ಟಿದೆ. ಕುಂಸಿ ಗ್ರಾಪಂ ವ್ಯಾಪ್ತಿಯ ಕ್ಯಾಂಟೀನ್‌ವೊಂದರ ಮಾಲೀಕ ಪ್ರವೀಣ್ ಬಂಧಿತ ಆರೋಪಿ. ಪತ್ನಿ ಮನೆಯಲ್ಲಿ ಇಲ್ಲದಾಗ ಆಕೆಯ ತಂಗಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ಅಪ್ರಾಪ್ತೆ 6ನೇ ತರಗತಿಯಿಂದ ಅಕ್ಕನ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು. ಎಸ್ಸೆಸ್ಸೆಲ್ಸಿವರೆಗೆ ಓದಿದ್ದ ಅಪ್ರಾಪ್ತೆ ಮೇಲೆ ಬಾವನ ಕಣ್ಣು ಬಿದ್ದಿತ್ತು. ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ. ತದನಂತರ…

Read More

ನೆಟ್ ವರ್ಕ್ ಅರಸುತ್ತಾ ಮನೆ ಬಿಟ್ಟಿದ್ದ ಯುವತಿಯ ಮೊಬೈಲ್ ಕಳ್ಳತನ !!!

ರಾಜ್ಯದ ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ಕೊರತೆಯಿಂದ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ಮಲೆನಾಡಿನ ಮಹಿಳೆಯರು ಹೊಸದೊಂದು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆ. ತುಮರಿ ಗ್ರಾಪಂ ವ್ಯಾಪ್ತಿಯ ಮಾರಲಗೋಡು ಗ್ರಾಮದ ಯುವತಿ ಆನ್ ಲೈನ್ ಶಿಕ್ಷಣ ಪಡೆಯುವ ಸಲುವಾಗಿ ಮೊಬೈಲ್ ಅನ್ನು ಅವಲಂಬಿಸಿದ್ದಳು.ಗ್ರಾಮದಲ್ಲಿ ಇಂಟರ್ನೆಟ್ ಸಂಪರ್ಕದ ಸಮಸ್ಯೆಯಿಂದಾಗಿ ತರಗತಿಗಳಿಗೆ ಹಾಜರಾಗುವುದೇ ದುಸ್ತರವಾಗಿತ್ತು. ಹೀಗಾಗಿ ಇಂಟರ್ನೆಟ್ ಸಂಪರ್ಕ ಸಿಗುವ ಪ್ರದೇಶಕ್ಕಾಗಿ ಮನೆಯಿಂದ ಹೊರಗೆ ಹುಡುಕಬೇಕಾಗಿದ್ದಿತು. ಈ ವೇಳೆ ಯುವತಿಯನ್ನು ಓರ್ವ ಯುವಕ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಹೊಂಚು ಹಾಕಿ…

Read More