ಚಲಿಸುವ ಬಸ್ಸನ್ನು ಓಡಿಹೋಗಿ ಹತ್ತಲು ಹೋಗಿ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ : ವಿಡಿಯೋ ಈಗ ವೈರಲ್
ಚಲಿಸುವ ಬಸ್ಸನ್ನು ಓಡಿಹೋಗಿ ಹತ್ತಲು ಹೋಗಿ ಬಸ್ ನಿಂದ ವಿದ್ಯಾರ್ಥಿಯೋರ್ವ ಕೆಳಗೆ ಬಿದ್ದ ವಿಡಿಯೋ ಈಗ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಬಸ್ ನಿಲ್ದಾಣದಿಂದ ಹೊರಟ ಬಸ್ಸನ್ನು ಓಡಿ ಹೋಗಿ ಹತ್ತಲು ವಿದ್ಯಾರ್ಥಿ ಯತ್ನಿಸಿದ್ದಾನೆ. ಆದರೆ ಬಸ್ಸು ಸ್ಪೀಡ್ ಇದ್ದಿದ್ದರಿಂದ ವಿದ್ಯಾರ್ಥಿಗೆ ಹತ್ತಲು ಸಾಧ್ಯವಾಗದೆ ಕೆಳಗೆ ಬಿದ್ದಿದ್ದಾನೆ. ಕಾರ್ಗಲ್ ನ ಇಡುವಾಣಿಯ ಚಿಪ್ಪಲಮಕ್ಕಿಯ ಒಂಭತ್ತನೇ ತರಗತಿ ವಿದ್ಯಾರ್ಥಿ ವೈಭವ್ ಎಂಬಾತ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ….