ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಎನ್ಎಸ್ ಯುಐ ಒತ್ತಾಯ

ದೆಹಲಿಯ ಕೆಂಪು ಕೋಟೆ ಮೇಲೆ ಕೇಸರಿ ಬಾವುಟವನ್ನ ಹಾರಿಸುವುದಾಗಿ ಹೇಳಿಕೆ ನೀಡಿದ್ದ ಸಚಿವ ಈಶ್ವರಪ್ಪನವರ ಹೇಳಿಕೆಯನ್ನ ಖಂಡಿಸಿ ಎನ್ ಎಸ್ ಯುಐ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು ಮನವಿಯಲ್ಲಿ ರಾಜ್ಯದಲ್ಲಿ ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.‌ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.8 ರಂದು ರಾಷ್ಟ್ರಧ್ವಜದ ಕಂಬದಲ್ಲಿ ಕೇಸರಿ ಬಾವುಟ ಹಾರಿಸಲಾಗಿತ್ತು. ಈ ರೀತಿಯ ಬಾವುಟವನ್ನು ಹಾರಿಸಬಾರದು ಎಂದು ಹೇಳಿಕೆ ನೀಡುವ ಬದಲು ಸಚಿವ ಈಶ್ವರಪ್ಪ ದೆಹಲಿಯ ಕೆಂಪು ಕೋಟೆಯ ಮೇಲೂ ಧ್ವಜ ಹಾರಿಸಲಾಗುವುದು ಎಂದು ಹೇಳುವ…

Read More

ಹಿಜಾಬ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ…

ಶಿವಮೊಗ್ಗ: ಹಿಜಾಬ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಐಎನ್ಎ)ದಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಫೆಬ್ರವರಿ 5 ರಂದು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ, ಇದೊಂದು ಜಿಹಾದಿನ ಷಡ್ಯಂತ್ರ. ಮುಸಲ್ಮಾನ ವಿಧ್ಯಾರ್ಥಿಗಳ ಮೂಲಕ ಶಾಲಾ -ಕಾಲೇಜುಗಳನ್ನು ಉಪಯೋಗಿಸಿ…

Read More

ಶಿವಮೊಗ್ಗ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ :

ಶಿವಮೊಗ್ಗ : ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಮುತ್ತಿಗೆ ಹಿನ್ನೆಲೆ ಬಿಜೆಪಿ ಕಚೇರಿ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಕೈಗೊಂಡಿದ್ದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಬಳಿ ತೆರಳುವುದನ್ನು ತಡೆದ ಪೊಲೀಸರು, ಕಾರ್ಯಕರ್ತರನ್ನು ಬಂಧಿಸಿದರು.   ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಈಶ್ವರಪ್ಪ ಅವರನ್ನು…

Read More

ಮಲೆನಾಡಿನ ಯುವ ಪ್ರತಿಭೆಗಳಿಂದ ಅದ್ಭುತವಾದ ಕಿರುಚಿತ್ರ :

ಮಲೆನಾಡಿನಲ್ಲಿ ಯುವ ಪ್ರತಿಭೆಗಳೇನೂ ಕಡಿಮೆ ಇಲ್ಲ. ಅಂತಹ ಒಂದು ಪ್ರತಿಭೆಗಳು ತಯಾರಿಸಿರುವ ಕನ್ನಡ ಕಿರುಚಿತ್ರ “ಉದರನಿಮಿತ್ತಂ”. ಬಹು ನಿರೀಕ್ಷಿತ ಕಿರುಚಿತ್ರವನ್ನು ರಿಪ್ಪನ್ ಪೇಟೆಯ ಬಹುಮುಖ ಪ್ರತಿಭೆ ಅರುಣ ಕಾಳಾಮುಖಿ ನಿರ್ದೇಶಿಸಿದ್ದಾರೆ. ಈ ರೋಚಕ ಕಿರುಚಿತ್ರವು ಕೆಲದಿನಗಳ ಹಿಂದೆ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಉದರನಿಮಿತ್ತಮ್ ಬಹುಕೃತವೇಷಮ್ ಹೊಟ್ಟೆಪಾಡಿಗಾಗಿ ಜನರು ನಾನಾ ಉದ್ಯೋಗವನ್ನು ಆರಿಸಿಕೊಳ್ಳುತ್ತಾರೆ ನಾನಾ ವೇಷಗಳನ್ನು ತೊಡುತ್ತಾರೆ  ಉದರ ನಿಮಿತ್ತಂ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಹೊಟ್ಟೆಪಾಡಿಗಾಗಿ ಚಿತ್ರದ ನಾಯಕನು ಹೆಣ ಹೂಳುವ  ಕಾಯಕವನ್ನು ಮಾಡುತ್ತಿರುತ್ತಾನೆ ಆ  ಊರಿನಲ್ಲಿ…

Read More

ವಿಷ ಕುಡಿಯುತ್ತೇವೆ ಹೊರತು ಹಿಜಬ್ ತೆಗೆಯುವುದಿಲ್ಲ : ಕಾಲೇಜನ್ನು ಬಹಿಷ್ಕರಿಸಿ ಹೊರನಡೆದ 25 ಪಿಯು ವಿದ್ಯಾರ್ಥಿನಿಯರು

ಇಂದಿನಿಂದ ಪದವಿ ಮತ್ತು ಪದವಿ ಪೂರ್ವ ಕಾಲೇಜು  ಆರಂಭವಾದ ಬೆನ್ನಲ್ಲೇ ಶಿವಮೊಗ್ಗದ ಡಿವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿ ಕಾಲೇಜ್ ನ್ನು ಬಹಿಷ್ಕರಿಸಿ ವಾಪಾಸಾಗಿದ್ದಾರೆ. ಇಂದು ಬೆಳಿಗ್ಗೆ ಕಾಲೇಜು ಆರಂಭಗೊಳ್ಳುತ್ತಿದ್ದಂತೆ ಹಿಜಬ್ ಧರಿಸಿ ಅನೇಕ ವಿದ್ಯಾರ್ಥಿನಿಯರು ಗೇಟ್ ಒಳಗೆ ಪ್ರವೇಶಿಸಿದ್ದಾರೆ. ಆದರೆ ಕಾಲೇಜ್ ಒಳಗೆ ಹೋದವರಿಗೆ ಡಿವಿಎಸ್ ಆಡಳಿತ ಮಂಡಳಿ ಹಿಜಬ್ ಕಳಚಿ ತರಗತಿಯಲ್ಲಿ ಕೂರಲು ಸೂಚಿಸಿದ್ದಾರೆ.ಹಿಜಬ್ ಕಳಚಿ ತರಗತಿಯಲ್ಲಿ ಕೂರಲು ವಿದ್ಯಾರ್ಥಿನಿಯರು ನಿರಾಕರಿಸಿದ ಕಾರಣ 25 ಜನ ವಿದ್ಯಾರ್ಥಿನಿಯರು ವಾಪಾಸಾಗಿದ್ದಾರೆ. ಹಿಜಬ್…

Read More

ಸಮನ್ವಯ ಕವಿ ನಾಡೋಜ ಚೆನ್ನವೀರ ಕಣವಿ ನಿಧನ

 ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ನಾಡೋಜ ಚೆನ್ನವೀರ ಕಣವಿ (93), ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದಾಗಿ ಜನವರಿ 14ರಿಂದ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ನಾಡೋಜ ಚೆನ್ನವೀರ ಕಣವಿ ದಾಖಲಾಗಿ, ಪಡೆಯುತ್ತಿದ್ದರು. ನಿನ್ನೆ ಅವರ ಸ್ಥಿತಿ ಗಂಭೀರಗೊಂಡಿರೋದಾಗಿ ತಿಳಿಸಲಾಗಿತ್ತು. ಈ ಬಳಿಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಇನ್ನಿಲ್ಲವಾಗಿದ್ದಾರೆ. ಅಂದಹಾಗೇ, ಚೆನ್ನವೀರ ಕಣವಿ ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್‌ಎಂದು ಪ್ರಸಿದ್ಧಿರಾದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ…

Read More

ರಿಪ್ಪನ್ ಪೇಟೆ ಸಮೀಪ ಕ್ಯಾಂಟರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಯುವಕ ಸಾವು

ರಿಪ್ಪನ್‌ಪೇಟೆ :ಇಲ್ಲಿನ ಸಮೀಪದ ಮೂಗುಡ್ತಿ ಗ್ರಾಮದ ಕಣಬಂದೂರು ತಿರುವಿನಲ್ಲಿ ನಡೆದ ಕ್ಯಾಂಟರ್ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಹೆದ್ದಾರಿಪುರದ ಪುನೀತ್ (25) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ರಿಪ್ಪನ್‌ಪೇಟೆಯ ದೇವಿ ಕೋಳಿ ಫಾರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುನೀತ್  ರಾತ್ರಿ 9.30 ರ ವೇಳೆಗೆ ಹೆದ್ದಾರಿಪುರದ ಮನೆಗೆ ಹೋಗುವಾಗ ಮೂಗುಡ್ತಿಯ ಕಣಬಂದೂರು ತಿರುವಿನಲ್ಲಿ ಈ ಅವಘಡ ಸಂಭವಿಸಿದ್ದು ಸ್ಥಳದಲ್ಲೇ ಬೈಕ್ ಸವಾರ ಪುನೀತ್ ತಲೆ ಮೇಲೆ  ಕ್ಯಾಂಟರ್ ಲಾರಿ ಹರಿದ ಪರಿಣಾಮ ಮೃತಪಟ್ಟಿದ್ದಾನೆ….

Read More

ಪದವಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಇಚ್ಚೆಯ ಉಡುಪು ಧರಿಸಿ ಕಾಲೇಜಿಗೆ ಬರಬಹುದು : ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ

ನಾಳೆಯಿಂದ ಪದವಿ ಕಾಲೇಜು ಆರಂಭಿಸಲು ಸರಕಾರ ಬದ್ದವಾಗಿದೆ ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತಮ್ಮ ಇಷ್ಟದ ಉಡುಪನ್ನು ಧರಿಸಿಕೊಂಡು ಹೋಗಬಹುದು. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯವಿದೆ. ಆದರೆ, ಇದನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‍.ಅಶ್ವತ್ಥನಾರಾಯಣ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಿದೆ. ಹಾಗಾಗಿ, ನಿಯಮಕ್ಕೆ ಅನುಸಾರವಾಗಿಯೇ ಬರಬೇಕು. ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದೂ ಸಚಿವರು…

Read More

ರಿಪ್ಪನ್ ಪೇಟೆ ಪಿಯು ಕಾಲೇಜಿನಲ್ಲಿ ಶಾಂತಿ ಸಭೆ : ಸರ್ಕಾರದ ಆದೇಶ ಪಾಲನೆಗೆ ಮನವಿ

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಸ್ಲಿಂ ಸಮುದಾಯದ ಪೋಷಕರ ಸಭೆ ಇಂದು ಕಾಲೇಜಿನಲ್ಲಿನಡೆಯಿತು. ಈ ಸಂಧರ್ಭದಲ್ಲಿ ಪಿ.ಎಸ್.ಐ ಶಿವಾನಂದಕೋಳಿ ಅವರು ಮಾತನಾಡಿ ಸರ್ಕಾರ ಹಾಗೂ ನ್ಯಾಯಾಲಯದ ಆದೇಶ ಪರಿಪಾಲನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ.  ಆ ನಿಟ್ಟಿನಲ್ಲಿ ಈಚೆಗೆ ವಿವಾದಕ್ಕೆ ಒಳಗಾಗಿರುವ ವಸ್ತ್ರಸಂಹಿತೆಯನ್ನು ಹೊರತುಪಡಿಸಿ ಶಾಲಾ-ಕಾಲೇಜಿನ ನಿಗದಿತ ಸಮವಸ್ತ್ರವನ್ನು ಧರಿಸಿ ಬರುವಂತೆ ಸೂಚಿಸಿದರು. ಶಿಕ್ಷಣದಿಂದ ಯಾವುದೇ ವಿದ್ಯಾರ್ಥಿಗಳು ವಂಚಿತರಾಗದೇ ತಮ್ಮ ಮುಂದಿನ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಆ ನಿಟ್ಟಿನಲ್ಲಿ ಪೋಷಕರೂ ಸಹ…

Read More

ರಿಪ್ಪನ್ ಪೇಟೆಯಲ್ಲಿ ನಾಳೆ ಕಾಂಗ್ರೆಸ್ ಪಕ್ಷದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ಅಭಿಯಾನ :

ರಿಪ್ಪನ್ ಪೇಟೆ : ದಿನಾಂಕ 16 ರ ಬುಧವಾರ,ಸಮಯ ಸಂಜೆ 3:00 ಗಂಟೆಗೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ನ ಕುವೆಂಪು ಸಭಾಭವನ ದಲ್ಲಿ ಕಾಂಗ್ರೆಸ್ ಪಕ್ಷದ ಕೆರೆಹಳ್ಳಿ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯನ್ನು ಹಾಗೂ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಆಸೀಪ್ ಭಾಷಾಸಾಬ್ ಪತ್ರೀಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆರೆಹಳ್ಳಿ ಹೋಬಳಿಯ ರಿಪ್ಪನ್ ಪೇಟೆ ,ಬಾಳೂರು ,ಹರತಾಳು,ಬೆಳ್ಳೂರು , ಕೆಂಚನಾಲ , ಅರಸಾಳು ಗ್ರಾಪಂ ವ್ಯಾಪ್ತಿಯ ಎಲ್ಲಾ ಕಾರ್ಯಕರ್ತರ ಸಭೆ…

Read More