ದೆಹಲಿಯ ಕೆಂಪು ಕೋಟೆ ಮೇಲೆ ಕೇಸರಿ ಬಾವುಟವನ್ನ ಹಾರಿಸುವುದಾಗಿ ಹೇಳಿಕೆ ನೀಡಿದ್ದ ಸಚಿವ ಈಶ್ವರಪ್ಪನವರ ಹೇಳಿಕೆಯನ್ನ ಖಂಡಿಸಿ ಎನ್ ಎಸ್ ಯುಐ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು ಮನವಿಯಲ್ಲಿ ರಾಜ್ಯದಲ್ಲಿ ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಬಾಪೂಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.8 ರಂದು ರಾಷ್ಟ್ರಧ್ವಜದ ಕಂಬದಲ್ಲಿ ಕೇಸರಿ ಬಾವುಟ ಹಾರಿಸಲಾಗಿತ್ತು. ಈ ರೀತಿಯ ಬಾವುಟವನ್ನು ಹಾರಿಸಬಾರದು ಎಂದು ಹೇಳಿಕೆ ನೀಡುವ ಬದಲು ಸಚಿವ ಈಶ್ವರಪ್ಪ ದೆಹಲಿಯ ಕೆಂಪು ಕೋಟೆಯ ಮೇಲೂ ಧ್ವಜ ಹಾರಿಸಲಾಗುವುದು ಎಂದು ಹೇಳುವ ಮೂಲಕ ಘಟನೆಗೆ ಪ್ರಚೋದನೆ ನೀಡಿದ್ದಾರೆ.
ಇದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದಲ್ಲದೆ ಈಶ್ವರಪ್ಪನವರು ರಾಷ್ಟ್ರದ್ರೋಹಿಗಳಾಗಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದನ್ನು ಖಂಡಿಸಿ ಈಶ್ವರಪ್ಪನವರ ಮೇಲೆ ಕೇಸು ದಾಖಲಿಸಬೇಕು ಹಾಗೂ ಸದನದಲ್ಲಿ ಈ ವಿಚಾರವನ್ನು ಉಚ್ಚರಿಸಲು ನಡವಳಿ ಪ್ರಕಟಿಸಬೇಕೆಂದು ಸ್ಪೀಕರ್ ಗೆ ಒತ್ತಾಯಿಸಿದ್ದರು.
ಆದರೆ ಸ್ಪೀಕರ್ ಅವರು ಪಕ್ಷಪಾತವಾಗಿ ಯಾವುದೇ ನಿಲುವಳಿಗೆ ಅವಕಾಶವಿಲ್ಲ,ಹಾಗೂ ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸುವ ಮೂಲಕ ಸ್ಪೀಕರ್ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಎನ್ ಎಸ್‌ಯುಐ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎನ್ ಎಸ್ ಯು ಐ ನ ರಾಜ್ಯ ಕಾರ್ಯದರ್ಶಿ ಬಾಲಾಜಿ ಶಿವಮೊಗ್ಗ ನಗರ ಮಾಜಿ ಶಾಸಕರಾದ ಶ್ರೀ ಕೆ. ಬಿ. ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆ ಸದಸ್ಯ ಹೆಚ್. ಸಿ. ಯೋಗೆಶ್, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಶ್ರೀಮತಿ ಪಲ್ಲವಿ, ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಅಧ್ಯಕ್ಷ ಮಹಮ್ಮದ್ ನಿಹಾಲ್, ದೀಪಕ್ ಸಿಂಫ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಾಬಣ್ಣ, ಯುವ ಕಾಂಗ್ರೆಸ್ ನ ಜಿಲ್ಲಾ ಕಾರ್ಯದರ್ಶಿ ಪುರ್ಲೆ ಮಂಜು, ಯುವ ಮುಖಂಡರಾದ ಸಂದೀಪ್ ಮಂಜುನಾಥ್, ಇತರರು ಹಾಜರಿದ್ದರು