w
Headlines
Home » ರಿಪ್ಪನ್ ಪೇಟೆ ಸಮೀಪ ಕ್ಯಾಂಟರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಯುವಕ ಸಾವು

ರಿಪ್ಪನ್ ಪೇಟೆ ಸಮೀಪ ಕ್ಯಾಂಟರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಯುವಕ ಸಾವು

ರಿಪ್ಪನ್‌ಪೇಟೆ :ಇಲ್ಲಿನ ಸಮೀಪದ ಮೂಗುಡ್ತಿ ಗ್ರಾಮದ ಕಣಬಂದೂರು ತಿರುವಿನಲ್ಲಿ ನಡೆದ ಕ್ಯಾಂಟರ್ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಹೆದ್ದಾರಿಪುರದ ಪುನೀತ್ (25) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.


ರಿಪ್ಪನ್‌ಪೇಟೆಯ ದೇವಿ ಕೋಳಿ ಫಾರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುನೀತ್  ರಾತ್ರಿ 9.30 ರ ವೇಳೆಗೆ ಹೆದ್ದಾರಿಪುರದ ಮನೆಗೆ ಹೋಗುವಾಗ ಮೂಗುಡ್ತಿಯ ಕಣಬಂದೂರು ತಿರುವಿನಲ್ಲಿ ಈ ಅವಘಡ ಸಂಭವಿಸಿದ್ದು ಸ್ಥಳದಲ್ಲೇ ಬೈಕ್ ಸವಾರ ಪುನೀತ್ ತಲೆ ಮೇಲೆ  ಕ್ಯಾಂಟರ್ ಲಾರಿ ಹರಿದ ಪರಿಣಾಮ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.