ಮಲೆನಾಡಿನಲ್ಲಿ ಯುವ ಪ್ರತಿಭೆಗಳೇನೂ ಕಡಿಮೆ ಇಲ್ಲ. ಅಂತಹ ಒಂದು ಪ್ರತಿಭೆಗಳು ತಯಾರಿಸಿರುವ ಕನ್ನಡ ಕಿರುಚಿತ್ರ “ಉದರನಿಮಿತ್ತಂ”.
ಬಹು ನಿರೀಕ್ಷಿತ ಕಿರುಚಿತ್ರವನ್ನು ರಿಪ್ಪನ್ ಪೇಟೆಯ ಬಹುಮುಖ ಪ್ರತಿಭೆ ಅರುಣ ಕಾಳಾಮುಖಿ ನಿರ್ದೇಶಿಸಿದ್ದಾರೆ. ಈ ರೋಚಕ ಕಿರುಚಿತ್ರವು ಕೆಲದಿನಗಳ ಹಿಂದೆ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಉದರನಿಮಿತ್ತಮ್ ಬಹುಕೃತವೇಷಮ್ ಹೊಟ್ಟೆಪಾಡಿಗಾಗಿ ಜನರು ನಾನಾ ಉದ್ಯೋಗವನ್ನು ಆರಿಸಿಕೊಳ್ಳುತ್ತಾರೆ ನಾನಾ ವೇಷಗಳನ್ನು ತೊಡುತ್ತಾರೆ ಉದರ ನಿಮಿತ್ತಂ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಹೊಟ್ಟೆಪಾಡಿಗಾಗಿ ಚಿತ್ರದ ನಾಯಕನು ಹೆಣ ಹೂಳುವ ಕಾಯಕವನ್ನು ಮಾಡುತ್ತಿರುತ್ತಾನೆ ಆ ಊರಿನಲ್ಲಿ ಯಾರಾದರೂ ಸತ್ತಾಗ ಮಾತ್ರ ಅವನ ಹಾಗೂ ಅವನ ಕುಟುಂಬದ ಹೊಟ್ಟೆ ತುಂಬುತ್ತಿರುತ್ತದೆ ಸ್ಮಶಾನಕ್ಕೆ ಶವಗಳು ಬಂದಾಗ ಅವರು ಸಂಭ್ರಮಿಸುವ ರೀತಿ ಶವಗಳು ಬರದಿದ್ದಾಗ ತಲ್ಲಣಿಸುವ ಬಗ್ಗೆ ನಿರ್ದೇಶಕರು ನಿರೂಪಿಸಿದ ರೀತಿ ಆಕರ್ಷಕವಾಗಿದೆ.
ಇಂದಿನ ಆಧುನಿಕ ಯುಗದಲ್ಲಿ ಈ ರೀತಿಯ ಕಥಾವಸ್ತು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದು ಒಂದು ರೀತಿಯಲ್ಲಿ ಸವಾಲೇ ಸರಿ,, ಕತೆಯು ತುಂಬಾ ವೇಗವಾಗಿ ಸಾಗಿದ್ದು ಆತುರ ಆತುರವಾಗಿ ಕಥೆಯನ್ನು ಮುಗಿಸಿದ್ದಾರೆ ಅಯನೂರಿನ ಅಡಗಡಿಯ ಸ್ಮಶಾನದ ಸುತ್ತ ಮುತ್ತ ಚಿತ್ರೀಕರಣ ನಡೆಸಿದ್ದಾರೆ.
ತಾರಾಗಣದಲ್ಲಿ ರಂಗ ನಿರ್ದೇಶಕ ಗಣೇಶ್ ಕೆಂಚನಾಲ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಾಲನಟಿಯಾಗಿ ಅಭಿನಯಿಸಿರುವ ತಾರಿಣಿ ಕಾಳಾಮುಖಿ ಅಭಿನಯ ಮನೋಜ್ಞವಾಗಿದೆ. ರಂಗನಟಿ ಲಕ್ಷ್ಮೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಠ್ಠಲ್ ರಂಗದೋಳ್ ಸಂಗೀತವನ್ನು ನೀಡಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಒಟ್ಟಾರೆಯಾಗಿ ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೇ ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿರುವ ಈ ಕಿರುಚಿತ್ರದ ಕೆಲ ಸನ್ನಿವೇಶ ಸ್ವಲ್ಪ ಅತಿರೇಕ ಅನ್ನಿಸಿದರೂ ಆ ಪಾತ್ರಗಳಲ್ಲಿನ ನೈಜತೆಯನ್ನು ತೋರಿಸುವ ಉದ್ದೇಶದಿಂದ ನಿರ್ದೇಶಕ ಅರುಣ ಕಾಳಾಮುಖಿ ಕಥೆಯನ್ನು ಎಳೆದಿದ್ದಾರೆ.
[[ಅರುಣ ಕಾಳಾಮುಖಿ.ಉದರ ನಿಮಿತ್ತಂ ನಿರ್ದೇಶಕರು]]
ಒಮ್ಮೆ ನೋಡಿ ಮಲೆನಾಡಿನ ಬಹುಮುಖ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ…
ಕಿರುಚಿತ್ರದ ಯೂಟ್ಯೂಬ್ ಲಿಂಕ್ ಇಲ್ಲಿದೆ 👇👇👇👇
ಕಿರುಚಿತ್ರವನ್ನು ಇಲ್ಲಿ ವೀಕ್ಷಿಸಿ👇👇👇👇