ಇಂದಿನಿಂದ ಪದವಿ ಮತ್ತು ಪದವಿ ಪೂರ್ವ ಕಾಲೇಜು ಆರಂಭವಾದ ಬೆನ್ನಲ್ಲೇ ಶಿವಮೊಗ್ಗದ ಡಿವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿ ಕಾಲೇಜ್ ನ್ನು ಬಹಿಷ್ಕರಿಸಿ ವಾಪಾಸಾಗಿದ್ದಾರೆ.
ಇಂದು ಬೆಳಿಗ್ಗೆ ಕಾಲೇಜು ಆರಂಭಗೊಳ್ಳುತ್ತಿದ್ದಂತೆ ಹಿಜಬ್ ಧರಿಸಿ ಅನೇಕ ವಿದ್ಯಾರ್ಥಿನಿಯರು ಗೇಟ್ ಒಳಗೆ ಪ್ರವೇಶಿಸಿದ್ದಾರೆ. ಆದರೆ ಕಾಲೇಜ್ ಒಳಗೆ ಹೋದವರಿಗೆ ಡಿವಿಎಸ್ ಆಡಳಿತ ಮಂಡಳಿ ಹಿಜಬ್ ಕಳಚಿ ತರಗತಿಯಲ್ಲಿ ಕೂರಲು ಸೂಚಿಸಿದ್ದಾರೆ.ಹಿಜಬ್ ಕಳಚಿ ತರಗತಿಯಲ್ಲಿ ಕೂರಲು ವಿದ್ಯಾರ್ಥಿನಿಯರು ನಿರಾಕರಿಸಿದ ಕಾರಣ 25 ಜನ ವಿದ್ಯಾರ್ಥಿನಿಯರು ವಾಪಾಸಾಗಿದ್ದಾರೆ.
ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಡಿವಿಎಸ್ ಕಾಲೇಜಿನಿಂದ ವಾಪಾಸಾಗಿದ್ದಾರೆ. ಹಿಜಬ್ ನೊಂದಿಗೆ ಕ್ಲಾಸ್ ನಲ್ಲಿ ಕೂರಲು ಅವಕಾಶವಿಲ್ಲದ ಕಾರಣ ಹೊರಗೆ ಬಂದು ಮಾಧ್ಯಮಗಳಿಗೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು ನಾನು ವಿಷ ಕುಡಿದು ಸಾಯುತ್ತೇನೆಯೇ ಹೊರತು ಹಿಜಬ್ ತೆಗೆಯುವುದಿಲ್ಲ ಎಂದು ತಿಳಿಸಿದ್ದಾಳೆ.
ಕಾಲೇಜಿನ ಮುಂಭಾಗದಲ್ಲಿ ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಈ ರೀತಿ ವಾಪಾಸ್ ಕಳುಹಿಸುವುದು ಸರಿ ಎನ್ನ ಬಹುದು ಆದರೆ ಖಾಸಗಿ ಕಾಲೇಜಿನಲ್ಲಿ ಈ ರೀತಿ ವಿದ್ಯಾರ್ಥಿನಿಯರನ್ನ ವಾಪಾಸು ಕಳುಹಿಸುವುದು ಎಷ್ಟು ಸರಿ. ಲಕ್ಷಾಂತರ ರೂ ಫ಼ೀಸ್ ಕಟ್ಟಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇