ರಿಪ್ಪನ್ ಪೇಟೆ ಪಿಯು ಕಾಲೇಜಿನಲ್ಲಿ ಶಾಂತಿ ಸಭೆ : ಸರ್ಕಾರದ ಆದೇಶ ಪಾಲನೆಗೆ ಮನವಿ

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಸ್ಲಿಂ ಸಮುದಾಯದ ಪೋಷಕರ ಸಭೆ ಇಂದು ಕಾಲೇಜಿನಲ್ಲಿನಡೆಯಿತು. ಈ ಸಂಧರ್ಭದಲ್ಲಿ ಪಿ.ಎಸ್.ಐ ಶಿವಾನಂದಕೋಳಿ ಅವರು ಮಾತನಾಡಿ ಸರ್ಕಾರ ಹಾಗೂ ನ್ಯಾಯಾಲಯದ ಆದೇಶ ಪರಿಪಾಲನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. 


ಆ ನಿಟ್ಟಿನಲ್ಲಿ ಈಚೆಗೆ ವಿವಾದಕ್ಕೆ ಒಳಗಾಗಿರುವ ವಸ್ತ್ರಸಂಹಿತೆಯನ್ನು ಹೊರತುಪಡಿಸಿ ಶಾಲಾ-ಕಾಲೇಜಿನ ನಿಗದಿತ ಸಮವಸ್ತ್ರವನ್ನು ಧರಿಸಿ ಬರುವಂತೆ ಸೂಚಿಸಿದರು. ಶಿಕ್ಷಣದಿಂದ ಯಾವುದೇ ವಿದ್ಯಾರ್ಥಿಗಳು ವಂಚಿತರಾಗದೇ ತಮ್ಮ ಮುಂದಿನ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಆ ನಿಟ್ಟಿನಲ್ಲಿ ಪೋಷಕರೂ ಸಹ ಯಾವುದೇ ಸುಳ್ಳುಸುದ್ದಿಗಳ ವದಂತಿಗಳ ಕಡೆ ಗಮನಹರಿಸದೇ ಮಕ್ಕಳ ಅಭ್ಯುದಯಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.


 ಕಾಲೇಜಿನ ಪ್ರಾಚಾರ್ಯ ಮಂಜುನಾಥ ಎ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಈ ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯಪಿಯುಸಿಯಲ್ಲಿ ಒಟ್ಟು 605 ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದುಅದರಲ್ಲಿ 21 ಜನ ವಿದ್ಯಾರ್ಥಿನಿಯರು ಮುಸ್ಲಿಂ ಸಮುದಾಯದವರಿದ್ದಾರೆ.  ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೆ ಹಾಲಿ ಆದೇಶವನ್ನು ಪಾಲನೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ನಮ್ಮೊಂದಿಗೆ ಸಹಕರಿಸಬೇಕು.

 ಯಾವುದೇ ವಿದ್ಯಾರ್ಥಿನಿಯರೂ ಸಹ ವಸ್ತ್ರಸಂಹಿತೆಯ ಸಮಾನತೆಯನ್ನು ಉಲ್ಲಂಘಿಸುವಂತಿಲ್ಲ.ಸರ್ಕಾರದಕಟ್ಟು ನಿಟ್ಟಿನ ಆದೇಶವನ್ನು ಮೀರಿದಲ್ಲಿ ಅಂತಹವರಿಗೆ ಕಾಲೇಜು ಪ್ರವೇಶಕ್ಕೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಮುಸ್ಲಿಂ ಸಮುದಾಯದ ಬಹುತೇಕ ಪೋಷಕರು ಕಾನೂನುಪಾಲನೆಗೆ ಒಪ್ಪಿಗೆ ಸೂಚಿಸಿದ್ದು, ನ್ಯಾಯಾಲಯದ ಪೂರ್ಣ ಆದೇಶ ಬರುವವರೆಗೂ ಮಧ್ಯಂತರ ಆದೇಶ ಪಾಲನೆ ಮಾಡುವುದಾಗಿ ತಿಳಿಸಿದರು. 

ನಾಲ್ವರು ವಿದ್ಯಾರ್ಥಿನಿಯರು ಮಾತ್ರ ನಮಗೆ ಶಿಕ್ಷಣ ಹಾಗೂ ಧರ್ಮ ಎರಡೂ ಮುಖ್ಯ ಹಾಗಾಗಿ ಕಾಲೇಜಿನ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅವಕಾಶ ನೀಡಿದಲ್ಲಿ ಮಾತ್ರ ತರಗತಿಗಳಿಗೆ ಹಾಜರಾಗುವುದಾಗಿ ತಿಳಿಸಿದರು.

ಸಿ.ಡಿ.ಸಿಉಪಾಧ್ಯಕ್ಷದೇವೇಂದ್ರಪ್ಪ ನೆವಟೂರು, ಸದಸ್ಯರಾದ ವಿನೋದ ಮಂಜೋಜಿರಾವ್, ಶಾಂತಕುಮಾರ್, ಉಪನ್ಯಾಸಕವೃಂದ, ಪೋಷಕ ವರ್ಗದವರಾದ ಮಹಮ್ಮದ್ ರಫೀಕ್, ರೋಷನ್ ರಫಿ, ಮತ್ತು ಇನ್ನಿತರರಿದ್ದರು.

Leave a Reply

Your email address will not be published. Required fields are marked *