ಪುರಲೆ ಕೆರೆಗೆ ಹಾರಿದ ಯುವಕ!: ಮಳೆಯ ನಡುವೆ ಶೋಧ ಕಾರ್ಯಾಚರಣೆ.

ಶಿವಮೊಗ್ಗ:ಕಿಡ್ನಿ ಸಮಸ್ಯೆ ಯಿಂದ ಬಳಲುತಿದ್ದ ಯುವಕನೊಬ್ಬ ಪುರಲೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ವೇಳೆ ನಡೆದಿದೆ. ಪುರಲೆ ನಿವಾಸಿ ಹರೀಶ್ (26) ಕೆರೆಗೆ ಹಾರಿದ್ದು ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಕರೆಸಿದ್ದಾರೆ.ಅಗ್ನಿ ಶಾಮಕ ದಳದ ಸಿಬ್ಬಂದಿ ಶೋದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ ಆರ್ ಅಶೋಕ್ ನೇತೃತ್ವದಲ್ಲಿ ಕಾರ್ಯಾಚರಣೆ ನೆಡೆಯುತ್ತಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳ ಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು…

Read More

ತೀರ್ಥಳ್ಳಿ ತಾಲೂಕಿನ 10000 ಕಟ್ಟಡ ಕಾರ್ಮಿಕರಿಗೆ ಕಿಟ್ ಗಳ ವಿತರಣೆ : ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ :ಕಾರ್ಮಿಕ ಕಲ್ಯಾಣ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಸುಮಾರು 10000ಸಂಖ್ಯೆಯ ಆಹಾರ ಕಿಟ್ ಗಳನ್ನು ಕ್ಷೇತ್ರದ64 ಗ್ರಾಮ ಪಂಚಾಯಿತಿ ಗಳಲ್ಲಿ 58 ಗ್ರಾಮಪಂಚಾಯಿತಿಗಳಲ್ಲಿ ವಿತರಿಸಲಾಗಿದ್ದು ಇನ್ನುಳಿದ ಆರು ಗ್ರಾಮ ಪಂಚಾಯಿತಿಗಳಿಗೆ ಇನ್ನೆರಡು ದಿನಗಳಲ್ಲಿ ವಿತರಿಸಲಾಗುವುದೆಂದು ತೀರ್ಥಹಳ್ಳಿ  ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಗೃಹ ಮಂಡಳಿಯ ಅಧ್ಯಕ್ಷರಾದ  ಆರಗ ಜ್ಞಾನೇಂದ್ರ ಹೇಳಿದರು  ಗುರುವಾರ ಹೆದ್ದಾರಿಪುರ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ಟು ಗಳನ್ನು ವಿತರಿಸಿ ಮಾತನಾಡಿದ ಅವರು ದೇಶದಲ್ಲಿನ ಮೋದಿ ಸರ್ಕಾರವು ರಾಜ್ಯದಲ್ಲಿನ…

Read More

ಕಸದ ತೊಟ್ಟಿಯಾದ ಉಳವಿ ಬಸ್ ನಿಲ್ದಾಣ: ಗಾಢ ನಿದ್ರೆಯಲ್ಲಿ ಗ್ರಾಮಾಡಳಿತ.!

ಸೊರಬ: ಇಲ್ಲಿನ ಸಮೀಪದ ಉಳವಿಯ ಬಸ್ ನಿಲ್ದಾಣಕ್ಕೆ ಕಾಲಿಡಲು ಹೆದರುವ ಪರಿಸ್ಥಿತಿ ಪ್ರಯಾಣಿಕರದ್ದು,ಪಟ್ಟಣದಲ್ಲಿರುವ ಬಸ್‌ ನಿಲ್ದಾಣ ಹಾಳು ಕೊಂಪೆಯಂತಾಗಿದ್ದು, ಇದ್ದೂ ಇಲ್ಲದಂತಾಗಿದೆ.  ಸೊರಬಕ್ಕೆ ಹೊಂದಿರುವ ಪಟ್ಟಣಕ್ಕೆ ಅಗತ್ಯ ತಕ್ಕಂತೆ ಬಸ್‌ ನಿಲ್ದಾಣ ಅವಶ್ಯಕತೆ ಇದೆ. ಬೆಳೆಯುತ್ತಿರುವ ಪಟ್ಟಣಕ್ಕೆ ಬಸ್‌ ನಿಲ್ದಾಣದ ಭಾಗ್ಯ ಯಾವಾಗ ಕೂಡಿ ಬರುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಬಸ್ ನಿಲ್ದಾಣದ ಸುತ್ತ ಕಸ ಕಡ್ಡಿ ಹುಲ್ಲು ಬೆಳೆದಿದ್ದು,ಬಸ್ ನಿಲ್ದಾಣಕ್ಕೆ ಹೋಗಲು ಮಾರ್ಗವೇ ಇಲ್ಲದಾಗಿದೆ,ಒಳಗೆ ಬಾಟಲಿ ಕಸ ಕಡ್ಡಿ ಕೆಸರು ತುಂಬಿದೆ, ಬಣ್ಣವಿಲ್ಲದೆ‌ ಸೊರಗುತ್ತಿದೆ,ಪ್ರಯಾಣಿಕರು ಶಾಲಾ…

Read More

ಬಸವಪುರ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ನಾಲೆ ಕುಸಿತ:

ರಿಪ್ಪನ್ ಪೇಟೆ : ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯ ಕಾರಣದಿಂದ ಕಡೆ ಗೆದ್ದೆ ಪಿಕಪ್ ನಾಲೆಯಿಂದ ಕೋಣನ ಜಡ್ಡು ಮಾರ್ಗವಾಗಿ ಬಸವಪುರ ಗ್ರಾಮದಲ್ಲಿರುವ ನಾಲೆಯು ಕುಸಿದಿದ್ದು ಬಸವಪುರ ಗ್ರಾಮದ ನೂರಾರು ಎಕರೆ ಜಮೀನುಗಳಿಗೆ ನೆಟ್ಟಿ ಮಾಡಲು ನೀರು ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ.  ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾನಗೋಡು ಉಮಾಕರ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಲಗೋಡು ರತ್ನಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ…

Read More

ರಿಪ್ಪನ್ ಪೇಟೆ: ಜನಪ್ರತಿನಿಧಿಗಳಿಗೆ ಇಚ್ಛಾ ಶಕ್ತಿ ಇದ್ದರೆ ಹಿಡಿದ ಕೆಲಸ ಪೂರ್ಣಗೊಳಿಸಬಹುದೆಂದು ನಿದರ್ಶಿಸಿದ ಗ್ರಾಪಂ ಸದಸ್ಯ ಸುಂದರೇಶ್:

ರಿಪ್ಪನ್ ಪೇಟೆ: ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಾಗರ ರಸ್ತೆಯ ಕಾಲೇಜು ಬಳಿ ಮಳೆ ನೀರು ರಸ್ತೆಯ ಇಕ್ಕೆಲದ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ, ರಸ್ತೆಯ ತುಂಬ ಹೊಂಡದಂತೆ ತುಂಬಿಕೊಂಡು ಸಾರ್ವಜನಿಕರು, ವಿದ್ಯಾರ್ಥಿ ಗಳಿಗೆ ತುಂಬಾ ತೊಂದರೆಯಾಗುತ್ತಿತ್ತು. .       :ಪೋಸ್ಟ್ ಮ್ಯಾನ್ ನ್ಯೂಸ್ ವರದಿಯ ಮೊದಲು;        ಗ್ರಾಮ ಪಂಚಾಯತ್ ಸದಸ್ಯರಾದ ಸುಂದರೇಶ್ ರವರು ಸ್ಥಳಕ್ಕೆ ಭೇಟಿ ನೀಡಿ ಸಾಗರ ರಸ್ತೆಯ ಕಾಲೇಜ್ ಬಳಿ ಚರಂಡಿ ನೀರು ರಸ್ತೆಗೆ  ಹರಿಯುತಿರುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ…

Read More

ರಿಪ್ಪನ್ ಪೇಟೆ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆ

ರಿಪ್ಪನ್ ಪೇಟೆ. ಜು.21: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಇಂದು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಸರಕಾರದ ಹೊಸ ಮಾರ್ಗಸೂಚಿಯಂತೆ ರಿಪ್ಪನ್ ಪೇಟೆ ಹಾಗೂ ಕೆಂಚನಾಲ,ಗರ್ತಿಕೆರೆ,ಎಣ್ಣೆನೊಡ್ಲು,ಗಾಳಿಬೈಲು ಮಸೀದಿಗಳಲ್ಲಿ ಬಕ್ರೀದ್ ಹಬ್ಬ ಆಚರಿಸಲಾಯಿತು. ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮಥ್ರ್ಯಕ್ಕೆ ಅನುಗುಣವಾಗಿ ಶೇ.50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಜ್ ನೆರವೇರಿತು. ಮುಸ್ಲಿಂ ಭಾಂಧವರು ಜಗತ್ತಿನಲ್ಲಿ ವ್ಯಾಪಿಸಿರುವ ಕೊರೊನಾ ಮಹಮಾರಿ ಶೀಘ್ರ ರೋಗಮುಕ್ತವಾಗಬೇಕು,ಜಗತ್ತಿನಲ್ಲೆಡೆ ಶಾಂತಿ ಪಸರಿಸಬೇಕು ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಬೇಕು ಎಂದು ವಿಶೇಷ ಪ್ರಾರ್ಥನೆ…

Read More

ರಸ್ತೆ ಮೇಲೆ ಹರಿಯುವ ಮಳೆ ನೀರು..!ರಸ್ತೆ ತಡೆದು ಪ್ರತಿಭಟನೆಯ ಎಚ್ಚರಿಕೆ:ಗ್ರಾಪಂ ಸದಸ್ಯ ಸುಂದರೇಶ್ ಟಿ.

ರಿಪ್ಪನ್ ಪೇಟೆ: ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಾಗರ ರಸ್ತೆ ಯಲ್ಲಿ ಮಳೆ ನೀರು ರಸ್ತೆಯ ಇಕ್ಕೆಲದ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ, ರಸ್ತೆಯ ತುಂಬ ಹೊಂಡದಂತೆ ತುಂಬಿಕೊಂಡು ಸಾರ್ವಜನಿಕರು, ವಿದ್ಯಾರ್ಥಿಗಳು ಫಜೀತಿಗೊಳಗಾಗುತ್ತಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾದ ಸುಂದರೇಶ್ ರವರು ಸ್ಥಳಕ್ಕೆ ಭೇಟಿ ನೀಡಿ ಸಾಗರ ರಸ್ತೆಯ ಕಾಲೇಜ್ ಬಳಿ ಚರಂಡಿ ನೀರು ರಸ್ತೆಗೆ  ಹರಿಯುತಿರುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಯಾಗುತ್ತಿದೆ ಇದರ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಚರಂಡಿಯ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಮನವಿ…

Read More

ಮರ ಬಿದ್ದು ರಸ್ತೆ ಸಂಚಾರ ಹಾಗೂ ವಿದ್ಯುತ್ ಸಂಪರ್ಕ ಕಡಿತ:

ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಪೂಜಾರದಿಂಬ ಎಂಬಲ್ಲಿ  ರಸ್ತೆ ಮೇಲೆ ಮರ ಬಿದ್ದು ಬಟ್ಟೆಮಲ್ಲಪ್ಪ ರಿಪ್ಪನ್ ಪೇಟೆ ರಸ್ತೆಸಂಪರ್ಕ ಕಡಿತಗೊಂಡಿದೆ.  ಮರ ಬಿದ್ದ ಸ್ಥಳದಲ್ಲಿ ವಿದ್ಯುತ್ ಕಂಬವಿದ್ದು, ವಿದ್ಯುತ್ ವಯರ್ ಗಳು ತುಂಡಾಗಿ ಬಿದ್ದಿದ್ದು ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ಸಂಬಂಧಪಟ್ಟ ಇಲಾಖೆ ಸೂಕ್ತಕ್ರಮ ಕೈಗೊಂಡು ವಿದ್ಯುತ್ ಸಂಪರ್ಕ ಸರಿಪಡಿಸುವುದರೊಂದಿಗೆ, ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ವರದಿ: ದೇವರಾಜ್ ರಿಪ್ಪನ್ ಪೇಟೆ ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ…

Read More

ರಿಪ್ಪನ್ ಪೇಟೆ:ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ಗುರುಸ್ಮರಣೆ

ರಿಪ್ಪನ್ ಪೇಟೆ : ಇಲ್ಲಿಯ ಗೌಡಸಾರಸ್ವತ ಕಲ್ಯಾಣ ಮಂದಿರದಲ್ಲಿ ಮಂಗಳವಾರದಂದು ಗೌಡ ಸಾರಸ್ವತ ಸಮಾಜ ಬಾಂಧವರು ಸಭೆ ಸೇರಿ ಸೋಮವಾರ ಹರಿಪಾದ ಸೇರಿದ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ  ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ಒಡೆರ್ ಸ್ವಾಮೀಜಿಯವರ ಪುಣ್ಯಸ್ಮರಣ ಕಾರ್ಯಕ್ರಮ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ  ಮಂಜುನಾಥ ಕಾಮತ್ ರಿಪ್ಪನ್ ಪೇಟೆ ಗೌಡ ಸಾರಸ್ವತ ಸಮಾಜ ಸ್ಥಾಪನೆಗೆ  ಪೂಜ್ಯರು ಕಾರಣರಾಗಿದ್ದನ್ನು ಸ್ಮರಿಸಿದರು. ಪೂಜ್ಯರ ಮಠಕ್ಕೂ ರಿಪ್ಪನ್ ಪೇಟೆ ಗೌಡ ಸಾರಸ್ವತ ಸಮಾಜಕ್ಕೂ ಅನೇಕ ಕಾಲದಿಂದಲೂ…

Read More

ಜಿಲ್ಲಾ ಪಂಚಾಯತ್ ಚುನಾವಣೆ2021:ರಿಪ್ಪನ್ ಪೇಟೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧ : ಎನ್.ಸತೀಶ್.

 ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಪಂಚಾಯತಿ ಕ್ಷೇತ್ರವಾದ ರಿಪ್ಪನ್ ಪೇಟೆಯಿಂದ ಈ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಆಸಕ್ತಿಯನ್ನು ಹೊಂದಿದ್ದೇನೆ ಎಂದು ಸಮಾಜ ಸೇವಕ ಹಾಗೂ ರಿಪ್ಪನ್ ಪೇಟೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತೀಶ್ ಹೇಳಿದ್ದಾರೆ.  ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಬಾರಿ ರಿಪ್ಪನ್ ಪೇಟೆ ಜಿಲ್ಲಾ ಪಂಚಾಯತಿ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿದ್ದು ನಾನು ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದು ಬಿಜೆಪಿ…

Read More