January 11, 2026

ರಿಪ್ಪನ್ ಪೇಟೆ:ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ಗುರುಸ್ಮರಣೆ

ರಿಪ್ಪನ್ ಪೇಟೆ : ಇಲ್ಲಿಯ ಗೌಡಸಾರಸ್ವತ ಕಲ್ಯಾಣ ಮಂದಿರದಲ್ಲಿ ಮಂಗಳವಾರದಂದು ಗೌಡ ಸಾರಸ್ವತ ಸಮಾಜ ಬಾಂಧವರು ಸಭೆ ಸೇರಿ ಸೋಮವಾರ ಹರಿಪಾದ ಸೇರಿದ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ  ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ಒಡೆರ್ ಸ್ವಾಮೀಜಿಯವರ ಪುಣ್ಯಸ್ಮರಣ ಕಾರ್ಯಕ್ರಮ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ  ಮಂಜುನಾಥ ಕಾಮತ್ ರಿಪ್ಪನ್ ಪೇಟೆ ಗೌಡ ಸಾರಸ್ವತ ಸಮಾಜ ಸ್ಥಾಪನೆಗೆ  ಪೂಜ್ಯರು ಕಾರಣರಾಗಿದ್ದನ್ನು ಸ್ಮರಿಸಿದರು. ಪೂಜ್ಯರ ಮಠಕ್ಕೂ ರಿಪ್ಪನ್ ಪೇಟೆ ಗೌಡ ಸಾರಸ್ವತ ಸಮಾಜಕ್ಕೂ ಅನೇಕ ಕಾಲದಿಂದಲೂ ಇರುವ ಸಂಬಂಧವನ್ನು ಸ್ಮರಿಸಿದರು.

 ಗುರುಪರಂಪರೆ, ಆಚಾರ- ವಿಚಾರ, ಧರ್ಮನಿಷ್ಠೆ ಬಗ್ಗೆ ಪೂಜ್ಯರ ಬದ್ಧತೆ ಬಗ್ಗೆ ಆರ್ ಉಮೇಶ್ ಅವರು ಮಾತನಾಡಿದರು.

 ಸಭೆಯಲ್ಲಿ ಗಣೇಶ್ ಕಾಮತ್, ಡಿ.ನರಸಿಂಹ ಕಾಮತ್, ರಮೇಶ್ ಶಾನುಭಾಗ್, ಹರೀಶ್ ಸರಾಫ್, ಹರೀಶ್ ಪ್ರಭು, ರಾಮದಾಸ್ ನಾಯಕ್, ಸುಧೀಂದ್ರಪ್ರಭು, ಸತೀಶ್ ಕಿಣಿ, ಸತೀಶ್ ಹೆಗಡೆ. ರಾಜೇಶ್ ಪ್ರಭು. ಗಿರೀಶ್ ಪ್ರಭು ಮುಂತಾದವರು ಭಾಗವಹಿಸಿ ಗುರುವರ್ಯರಿಗೆ ಅಂತಿಮ ಭಕ್ತಿಪೂರ್ವಕ ಪ್ರಣಾಮವನ್ನು ಸಲ್ಲಿಸಿದರು.

ವರದಿ : ಸಬಾಸ್ಟಿನ್ ಮ್ಯಾಥ್ಯೂಸ್‌


ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

About The Author

Leave a Reply

Your email address will not be published. Required fields are marked *