ರಸ್ತೆ ಮೇಲೆ ಹರಿಯುವ ಮಳೆ ನೀರು..!ರಸ್ತೆ ತಡೆದು ಪ್ರತಿಭಟನೆಯ ಎಚ್ಚರಿಕೆ:ಗ್ರಾಪಂ ಸದಸ್ಯ ಸುಂದರೇಶ್ ಟಿ.

ರಿಪ್ಪನ್ ಪೇಟೆ: ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಾಗರ ರಸ್ತೆ ಯಲ್ಲಿ ಮಳೆ ನೀರು ರಸ್ತೆಯ ಇಕ್ಕೆಲದ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ, ರಸ್ತೆಯ ತುಂಬ ಹೊಂಡದಂತೆ ತುಂಬಿಕೊಂಡು ಸಾರ್ವಜನಿಕರು, ವಿದ್ಯಾರ್ಥಿಗಳು ಫಜೀತಿಗೊಳಗಾಗುತ್ತಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರಾದ ಸುಂದರೇಶ್ ರವರು ಸ್ಥಳಕ್ಕೆ ಭೇಟಿ ನೀಡಿ ಸಾಗರ ರಸ್ತೆಯ ಕಾಲೇಜ್ ಬಳಿ ಚರಂಡಿ ನೀರು ರಸ್ತೆಗೆ  ಹರಿಯುತಿರುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಯಾಗುತ್ತಿದೆ ಇದರ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಚರಂಡಿಯ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಮನವಿ ಪತ್ರ ಕೂಡ ಕಳೆದ ವರ್ಷ ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲ ಹಾಗಾಗಿ ಚರಂಡಿ ವ್ಯವಸ್ಥೆಯ ಬಗ್ಗೆ ತುರ್ತು ಕ್ರಮ ಕೈಗೊಳ್ಳದೆ ಇದ್ದರೆ ಸಾಗರ- ರಿಪ್ಪನ್ ಪೇಟೆ ರಸ್ತೆಯನ್ನು ತಡೆದು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಈ ಬಗ್ಗೆ ಕೂಡಲೇ ಸುಂದರೇಶ್ ರವರಿಗೆ ಸ್ಪಂದಿಸಿರುವ  ಪಿಡಬ್ಲ್ಯೂಡಿ ಅಧಿಕಾರಿಗಳಾದ  ರಾಜು ಹೆಚ್ ರವರು ಚರಂಡಿ ಸಮಸ್ಯೆಯನ್ನು ಇನ್ನೂ 3 ದಿನಗಳೊಳಗೆ ಬಗೆಹರಿಸಿ ಕೊಡುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಸುಂದರೇಶ್ ರವರು ಮೂರು ದಿನಗಳೊಳಗೆ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಸರಿ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಾಗರ – ರಿಪ್ಪನ್ ಪೇಟೆ ರಸ್ತೆಯನ್ನು  ತಡೆದು ಉಗ್ರವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ವರದಿ : ರಾಮನಾಥ್ ರಿಪ್ಪನ್ ಪೇಟೆ

ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..



Leave a Reply

Your email address will not be published. Required fields are marked *