ರಿಪ್ಪನ್ ಪೇಟೆ: ಫಲಿತಾಂಶಕ್ಕೆ ಹೆದರಿ SSLC ವಿಧ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಬಂದ ವಿಧ್ಯಾರ್ಥಿ ಅಂಕಗಳು ಕಡಿಮೆ ಬರಬಹುದೆಂದು ಹೆದರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ  ಎಸ್ಎಸ್ಎಲ್ ಸಿ ವ್ಯಾಸಾಂಗ ಮಾಡುತ್ತಿದ್ದ ಕೆಂಚನಾಲದ ವಿಧ್ಯಾರ್ಥಿನಿಯೊಬ್ಬಳು ಇಂದು ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದು  ಮನೆಗೆ ತೆರಳಿ  ಫಲಿತಾಂಶದಲ್ಲಿ ಕಡಿಮೆ ಅಂಕ ಬರಬಹುದು ಎಂದು ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಕೂಡಲೇ ಸಂಬಂಧಿಕರು ರಿಪ್ಪನ್ ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ…

Read More

ಕೊರೊನಾ ನಡುವೆ ಯಶಸ್ವಿಯಾಗಿ ನಡೆದ ಮೊದಲ ಹಂತದ SSLC ಪರೀಕ್ಷೆ :

ಆನಂದಪುರ: ಕೊರೋನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದು ಮೊದಲನೇ ದಿನ ಯಶಸ್ವಿಯಾಗಿ ನೆರವೇರಿತು. ಸರ್ಕಾರ ಪರೀಕ್ಷೆ ನಡೆಸಬೇಕೋ ನಡೆಸಬಾರದೋ ಎಂಬ ಗೊಂದಲದಿಂದ ಅಂತೂ ದಿನಾಂಕವನ್ನು ಫಿಕ್ಸ್ ಮಾಡಿ ಪರೀಕ್ಷೆಯನ್ನು ನಡೆಸಿತು. ಸಾಗರ ತಾಲ್ಲೂಕ್ ಹಾಗೂ ಹೊಸನಗರ ತಾಲೂಕಿನಾದ್ಯಂತ ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳಿಗೆ ಬೆಳಿಗ್ಗೆನೇ ವೈದ್ಯಕೀಯ ಪರೀಕ್ಷೆ ನಡೆಸಿ ಥರ್ಮಲ್ ಸ್ಕ್ಯಾನಿಂಗ್ ನೊಂದಿಗೆ ಮಾಸ್ಕ್ ವಿತರಿಸಿ ಪ್ರತಿ ಕೊಠಡಿಗೆ ಹನ್ನೆರಡು ವಿದ್ಯಾರ್ಥಿಗಳಂತೆ ಪರೀಕ್ಷೆ ಬರೆಸಲಾಯಿತು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ನೀರಿನ…

Read More

ಕರ್ನಾಟಕ ದಲ್ಲಿ SSLC ಪರೀಕ್ಷೆ :ಸಾಗರದ ವಿದ್ಯಾರ್ಥಿಗಳಿಗೆ ಶಾಸಕ ಹರತಾಳು ಹಾಲಪ್ಪ ರವರಿಂದ ಮಾಸ್ಕ್ ಕೊಟ್ಟು ‌ಶುಭ ಹಾರೈಕೆ

ಸಾಗರ : ಎಸ್ಎಸ್ಎಲ್ಸಿ‌ ಪರೀಕ್ಷೆ ಆರಂಭಗೊಂಡಿದ್ದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ  ಶುಭ ಹಾರೈಸಿದ ಶಾಸಕರಾದ ಹರತಾಳು ಹಾಲಪ್ಪ ರವರು ಸಾಗರದ ಸರ್ಕಾರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಿ ಸ್ವಾಗತಿಸಿ ಗಮನ ಸೆಳೆದಿದ್ದಾರೆ. ಕೋವಿಡ್ ಬಗ್ಗೆ ಪರೀಕ್ಷಾರ್ಥಿಗಳು‌ ಅಂಜಿಕೊಳ್ಳುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಆರೋಗ್ಯ ದಲ್ಲಿ ಏರುಪೇರು ಇದ್ದರೆ ಕೂಡಲೆ ಶಾಲೆ ಮುಖ್ಯಸ್ಥರ ಗಮನಕ್ಕೆ ತನ್ನಿ ನಾವು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡುತ್ತೇವೆ ಸಾಗರ ಶಾಸಕ ಹರತಾಳು ಹಾಲಪ್ಪ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ನೀಡಿ,…

Read More

ಎಡೆಬಿಡದೆ ಸುರಿದ ಮಳೆಗೆ ಕೋಡಿ ಹರಿದು ಜಮೀನುಗಳು ಜಲಾವೃತ !!

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚಿಕ್ಕಜೇನಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಪ್ಪಿಗ  ಹಾಗೂ ಕಲ್ಲುಗಟ್ಟ ಸಂಪರ್ಕ ರಸ್ತೆಯ ನಾರಾಯಣಯ್ಯ ಅವರ ಮನೆ ಹತ್ತಿರ ಸತತ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹತ್ತಿರದ ತಾವರೆಕೆರೆ ತುಂಬಿ ಕೋಡಿ ಹರಿದಿದ್ದು ಗದ್ದೆಗಳು ನೀರಿನಲ್ಲಿ ಮುಳುಗಿದ್ದು ಜನರು ಓಡಾಡುವ ಸಂಪರ್ಕ ರಸ್ತೆಯೂ ಸಹ ನೀರಿನಿಂದ ಜಲಾವೃತವಾಗಿದೆ.ಈ ಮಾರ್ಗದಲ್ಲಿ ಓಡಾಡುವ ಜನರು ಹಾಗೂ ಬೈಕ್ ಸವಾರರು ಈ ರಸ್ತೆಯಲ್ಲಿ  ಬಿದ್ದು ಕೈಕಾಲು ಮುರಿದುಕೊಂಡ  ಪ್ರಕರಣಗಳು ನಡೆದಿವೆ.  ಈ ಸಂಪರ್ಕ ರಸ್ತೆ ಹಾಗೂ…

Read More

ರಿಪ್ಪನ್ ಪೇಟೆಯ ಸಮೀಪದ ಅರಸಾಳು ಬಳಿ ಕಾರು ಬಸ್ಸು ಮುಖಾಮುಖಿ ಡಿಕ್ಕಿ:

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಅರಸಾಳು ಬಳಿ ಬಸ್ ಹಾಗೂ ಕಾರ್ ನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ‌. ಶಿವಮೊಗ್ಗದಿಂದ ರಿಪ್ಪನ್ ಪೇಟೆ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಕಾರ್ ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ತಿಳಿದುಬಂದಿದೆ. ಇಬ್ಬರು ಮಕ್ಕಳಿಗೆ ಗಂಭೀರವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರೂ ಸಾಗರ ಮೂಲದವರೆಂದು ತಿಳಿದುಬಂದಿದೆ. ರಿಪ್ಪನ್ ಪೇಟೆಯಿಂದ ಶಿವಮೊಗ್ಗ ಕಡೆ ತೆರಳುತ್ತಿದ್ದ…

Read More

ಗೋಡೆ ಕುಸಿತ ಪ್ರಕರಣ: 24ಕ್ಕೇರಿದ ಸಾವಿನ ಸಂಖ್ಯೆ,ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

ಮುಂಬೈ: ಮಹಾಮಳೆಯ ಕಾರಣದಿಂದ ಮುಂಬೈನ ಚೆಂಬೂರ್ ಮತ್ತು ವಿಖ್ರೋಲಿಯಲ್ಲಿ ಗೋಡೆ ಕುಸಿದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಹಲವರನ್ನು ಇದುವರೆಗೆ ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ನಗರದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜನರು ಮುಕ್ತವಾಗಿ ಹೊರಗೆ ಹೋಗದಂತೆ ಸೂಚಿಸಲಾಗಿದೆ. ಮಹಾನಗರ ಪಾಲಿಕೆ ಬಿಎಂಸಿ ಪ್ರಕಾರ ಭಾನುವಾರ ಬೆಳಿಗ್ಗೆ ವಿಖ್ರೋಲಿ ಪ್ರದೇಶದಲ್ಲಿ ಗ್ರೌಂಡ್-ಪ್ಲಸ್ ಒನ್ ವಸತಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಚೆಂಬೂರಿನ ಭಾರತ್ ನಗರ ಪ್ರದೇಶದಿಂದ ಹದಿನೈದು ಜನರನ್ನು ಮತ್ತು ವಿಕ್ರೊಲಿಯ ಸೂರ್ಯನಗರದ ಒಂಬತ್ತು…

Read More

ಪೋಸ್ಟ್ ಮ್ಯಾನ್ ನ್ಯೂಸ್ ನ ಬಿಗ್ ಇಂಪ್ಯಾಕ್ಟ್:

ಆನಂದಪುರ: ಮೂರು ದಿನಗಳ ಹಿಂದೆ ಪೋಸ್ಟ್ ಮ್ಯಾನ್ ನ್ಯೂಸ್   ಸಾಗರ ತಾಲ್ಲೂಕು ಆನಂದಪುರದ ಪೊಲೀಸ್ ವಸತಿ ಗೃಹಗಳು  ಪಾಳುಬಿದ್ದಿವೆ ಎಂದು ಸುದ್ದಿ ಪ್ರಸಾರ ಮಾಡಿತ್ತು.ಈ ಜಾಗ ಅಕ್ರಮ ಚಟುವಟಿಕೆಗಳ ತಾಣವೂ ಆಗಿತ್ತು .ಬಾನೆತ್ತರಕ್ಕೆ ಗಿಡಗಂಟಿಗಳು ಬೆಳೆದಿತ್ತು ಎಂದು ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಇದೀಗ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡಿದ್ದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೀಗ ಜಾಗವನ್ನು ಸ್ವಚ್ಛಗೊಳಿಸಿ ಗಿಡಗಂಟಿಗಳನ್ನು ಕಡಿದು ಇದೀಗ ಆ ಜಾಗಕ್ಕೆ ಹೊಸ ಕಳೆ ನೀಡುತ್ತಿದ್ದಾರೆ. ವಸತಿ ಗೃಹದ ಒಳಗಡೆಯೂ ಸಹ ಸ್ವಚ್ಚಗೊಳಿಸಿ ಹೊರಗಡೆಯಿಂದ…

Read More

ಸೇವಾ ನಿವೃತ್ತಿ ಹೊಂದಿದ ಆರ್. ಉಮೇಶ್ ರವರ ಸೇವೆ ಎಲ್ಲರಿಗೂ ಪ್ರೇರಣೆ : ಜೇನಿ ಗ್ರಾ.ಪಂ ಅಧ್ಯಕ್ಷೆ ಶಾರದಾ

ರಿಪ್ಪನ್ ಪೇಟೆ : ಇಲ್ಲಿನ ಚಿಕ್ಕಜೇನಿ ಪ್ರೌಢಶಾಲೆ ಮುಖ್ಯಶಿಕ್ಷಕರಾಗಿ ಉತ್ತಮ ಕರ್ತವ್ಯ ನಿರ್ವಹಿಸಿ, ವಯೋನಿವೃತ್ತಿ  ಹೊಂದಿದ  ಆರ್ ಉಮೇಶ ರವರ ಸೇವೆ ಪ್ರಶಂಸನೀಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಶಾರದಾ ರವರು ಹೇಳಿದರು. ಅವರು ಶುಕ್ರವಾರ ಇಲ್ಲಿಗೆ ಸಮೀಪದ ಚಿಕ್ಕಜೇನಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿ ನಿವೃತ್ತರಾದ ಆರ್. ಉಮೇಶ್ ರವರಿಗೆ ಸನ್ಮಾನಿಸಿ ನೀಡಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಹೇಳಿದರು.  ತಾಲ್ಲೂಕಿನಲ್ಲಿಯೇ ಪ್ರೌಢಶಾಲೆಗೆ ಒಳ್ಳೆಯ ಹೆಸರು ತರುವಲ್ಲಿ ಉಮೇಶ್ ಅವರ ಪಾತ್ರ ಮಹತ್ವದ್ದು ಎಂದು ಹೇಳಿದರು.  ಕ್ಷೇತ್ರ…

Read More

ಭ್ರಷ್ಟಾಚಾರದಿಂದ ತುಂಬಿತುಳುಕುತ್ತಿರುವ ರಿಪ್ಪನ್ ಪೇಟೆಯ ನಾಡಕಚೇರಿ! ಗ್ರಾಮಸ್ಥರ ಆಕ್ರೋಶ.

ರಿಪ್ಪನ್ ಪೇಟೆ :ಇಲ್ಲಿನ ನಾಡಕಛೇರಿ ರೈತಸ್ನೇಹಿಯಾಗಿರದೇ ಸುಲಿಗೆಕೋರರ ತಾಣವಾಗಿದೆ ಎಂದು ರಿಪ್ಪನ್ ಪೇಟೆಯ ಗ್ರಾಮಸ್ಥರು ಪಟ್ಟಣದ ನಾಡಕಛೇರಿ ಎದುರು ಇಂದು ಪ್ರತಿಭಟನೆ ನಡೆಸಿದರು. ಗವಟೂರು ಗ್ರಾಮದ ಸರ್ವೇ ನಂಬರ್ 413 ರ 11ಈ ನಕ್ಷೆ ನಾವಿಕರಣ ಕ್ಕೆ 30000 ಸಾವಿರ ರೂಪಾಯಿಗಳನ್ನು ಲಂಚ ತೆಗೆದುಕೊಂಡ ಸರ್ವೆ ಸುಪ್ರವೈಸರ್ ಅಧಿಕಾರಿ ಮಲ್ಲಿಕಾರ್ಜುನ್ ನವೀಕರಣ ಮಾಡದೇ ಮೋಸ ಮಾಡಿದ್ದಾರೆ ಎಂದು ರೈತ ಈಶ್ವರಪ್ಪ ಆರೋಪಿಸಿದ್ದಾರೆ. ನಾಡಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಜೆಡಿಎಸ್ ಮುಖಂಡ ಆರ್ ಎನ್ ಮಂಜುನಾಥ್ ರಿಪ್ಪನ್…

Read More

ಅವೈಜ್ಞಾನಿಕ ಚರಂಡಿ ಕಾಮಗಾರಿ: ನಾಲ್ಕು ರಸ್ತೆಯ ನೀರು,ಹೊಟೇಲ್ ತ್ಯಾಜ್ಯ ರೈತರ ಜಮೀನಿಗೆ::

ರಿಪ್ಪನ್ ಪೇಟೆ :ಅವೈಜ್ಞಾನಿಕ ಚರಂಡಿಯಿಂದ ಪಟ್ಟಣ ದ ನಾಲ್ಕು ರಸ್ತೆಯ ನೀರು,ಹೋಟೆಲ್ ನ ತ್ಯಾಜ್ಯಗಳು ಹೊಸನಗರ ರಸ್ತೆಯಲ್ಲಿರುವ ಚಿಪ್ಪಿಗರ ಕೆರೆಯ ಎದುರಿನ ರೈತರ ಜಮೀನಿಗೆ ಹೋಗುತ್ತಿದೆ.ಸ್ಥಳೀಯ ನಿವಾಸಿಗಳು ಹಾಗೂ ರೈತರು ಹಲವಾರು ಬಾರಿ ದೂರು ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಪರದಾಡುವಂತಾಗಿದೆ. ಚರಂಡಿಯಿಂದ ಹರಿಯುತ್ತಿರುವ, ಮಳೆ ನೀರು,ಹೋಟೆಲ್ ಗಳ ತ್ಯಾಜ್ಯ, ಮಧ್ಯದ ಬಾಟಲಿಗಳು ಸಂಪೂರ್ಣವಾಗಿ ಕೃಷಿ ಭೂಮಿ ಸೇರುತ್ತಿವೆ.ರಿಪ್ಪನ್ ಪೇಟೆ ಹೊಸನಗರ ರಸ್ತೆಯ ಕೂಗಳತೆ ದೂರದಲ್ಲಿ ಇರುವ ಚಿಪ್ಪಿಗರ ಕೆರೆಯ ಸಮೀಪ ಈ ಚರಂಡಿಯ…

Read More