ಅತಿವೃಷ್ಟಿ ಮಳೆಗೆ ಸಾಗರ ತಾಲ್ಲೂಕಿನಲ್ಲಿ 50 ಕೋಟಿಗೂ ಅಧಿಕ ನಷ್ಟ: ಮಾಜಿ ಜಿಪಂ ಸದಸ್ಯೆ ಅನಿತಾ ಕುಮಾರಿ

ಆನಂದಪುರ: ತಾಲ್ಲೂಕಿನಲ್ಲಿ ಕಳೆದ ವಾರದಿಂದ ಸುರಿದ ಮಳೆಗೆ ಇದುವರೆಗೂ 50 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾಕುಮಾರಿ ಹೇಳಿದ್ದಾರೆ. ಆನಂದಪುರ ಸಮೀಪದ ಹೊಸೂರು ಗ್ರಾಮಪಂಚಾಯತಿ  ವ್ಯಾಪ್ತಿಯಲ್ಲಿ ಅತಿವೃಷ್ಟಿ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ ಸಾಗರ ತಾಲ್ಲೂಕಿನಲ್ಲಿ ಇದುವರೆಗೂ ಸುರಿದ ಮಳೆಗೆ ಐವತ್ತು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ    ಭತ್ತ ನಾಟಿ ಮಾಡಿ 500 ಹೆಕ್ಟೇರ್ ಬೆಳೆ ನಾಶವಾಗಿದೆ    ಶುಂಠಿ ಹಾಗೂ ಜೋಳ ಕೊಳೆಯುವ ಹಂತಕ್ಕೆ ಬಂದಿದೆ ಇದರಿಂದ…

Read More

ಅರಮನೆ ಹಳ್ಳ ಸೇತುವೆ: ಹಲವು ದಶಕಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ:ಹಳಿಯೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಹಲವು ದಶಕಗಳ  ಬೇಡಿಕೆಯಾದ ಅರಮನೆ ಹಳ್ಳ ಸೇತುವೆಗೆ ಹಣ ಬಿಡುಗಡೆಯಾಗಿದ್ದು ಕೆಲವೆ ದಿನಗಳಲ್ಲಿ ಕಾಮಗಾರಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ.   ಇಲ್ಲಿನ ಅರಮನೆ ಹಳ್ಳಕ್ಕೆ ಸೇತುವೆ ನಿರ್ಮಾಣ ವಿಚಾರದಲ್ಲಿ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಎಂಬ ಅಡಿಬರಹದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಮಾಡಿತ್ತು.ಈ ವರದಿಗೆ ಕೂಡಲೇ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪನವರ ಆಪ್ತ ಸಹಾಯಕರಾದ ಕೀರ್ತಿ ಗೌಡರವರು ಅರಮನೆ ಹಳ್ಳ ಸೇತುವೆಗೆ ಬಿಡುಗಡೆಯಾಗಿರುವ  ಅನುದಾನದ ಬಗ್ಗೆ ಮಾಹಿತಿ ನೀಡಿದರು.  ಈ…

Read More

ರಿಪ್ಪನ್ ಪೇಟೆ: ಕಾರ್ ಟೈರ್ ಸ್ಪೋಟ, ಚಲಿಸುತ್ತಿದ್ದ ಬಸ್ ಗೆ ಹಿಮ್ಮುಖವಾಗಿ ಡಿಕ್ಕಿ :

ರಿಪ್ಪನ್ ಪೇಟೆ : ರಿಪ್ಪನ್ ಪೇಟೆ ಯಿಂದ ತೀರ್ಥಹಳ್ಳಿ ಕಡೆ ಹೋಗುತಿದ್ದ ರಾಜಲಕ್ಷ್ಮಿ ಬಸ್ ಗೆ ಅದೇ ದಿಕ್ಕಿನಲ್ಲಿ ಹೋಗುತಿದ್ದ ಕಾರಿನ ಟೈರ್ ಸ್ಫೋಟಗೊಂಡು ಬಸ್ ಗೆ ಹಿಮ್ಮುಖ ವಾಗಿ ಡಿಕ್ಕಿ ಹೊಡೆದಿದೆ.. ಬಸ್ ಚಾಲಕನ ಸಮಯ ಪ್ರಜ್ಞೆ ಯಿಂದ ಸಂಭವಿಸಬಹುದಾಗಿದ್ದ ಬಾರಿ ಅನಾಹುತ ತಪ್ಪಿದೆ. ಕಾರ್ ನಲಿದ್ದ ಮೂವರು ಸುರಕ್ಷಿತ ರಾಗಿದ್ದಾರೆ.. ಕಾರ್ ನ ಮುಂಬಾಗ ಸಂಪೂರ್ಣ ಜಖಂಗೊಂಡಿದೆ. ವರದಿ : ರಾಮನಾಥ್ ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು…

Read More

ಮನೆ ಕಳ್ಳತನ ಆರೋಪಿ ಬಂಧನ:ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭರಣ ವಶ:

ಭದ್ರಾವತಿ: ಹೊರ ಜಿಲ್ಲೆಗಳಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು  ಪಟ್ಟಣದ ಪೊಲೀಸರು ಬಂಧಿಸಿ ಕಳವು ಮಾಡಿದ್ದ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಿ ಪ್ರಸಾದ್ ಮತ್ತು ಮಾನ್ಯ ಹೆಚ್ಚುವರಿ ಅಧೀಕ್ಷಕರಾದ ಶೇಖರ್ ಹೆಚ್ ಟಿ ರವರ ಮಾರ್ಗದರ್ಶನದಲ್ಲಿ ಭದ್ರಾವತಿ ಉಪವಿಭಾಗದ ಎಎಸ್ಪಿ ಯವರಾದ ಸಾಹಿಲ್ ಬಾಗ್ಲಾ ರವರ ನೇತೃತ್ವದ ಪೊಲೀಸ್ ತಂಡ ಹೊರ ಜಿಲ್ಲೆಯಲ್ಲಿ ಬೀಗ ಹಾಕಿದ ಮನೆ ಕಳ್ಳತನ ಮಾಡುತ್ತಿದ್ದ ಭದ್ರಾವತಿ ಸತ್ಯಸಾಯಿ…

Read More

ಹಲವು ದಶಕದ ಸಮಸ್ಯೆ ಕೇವಲ ಭರವಸೆಯಲ್ಲೆ ಕಳೆಯಿತು:ಸೇತುವೆ ಇಲ್ಲದೇ ಹಳಿಯೂರು ಗ್ರಾಮಸ್ಥರ ನರಕಯಾತನೆ

ರಿಪ್ಪನ್ ಪೇಟೆ: ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಗವಟೂರು ಗ್ರಾಮದ ಹಳಿಯೂರು (ಮತ್ತಿಮನೆ, ಸಂಪಳ್ಳಿ ಸಂಪರ್ಕ)ಭಾಗದ ಜನರು ಕಳೆದ 60 ವರ್ಷಗಳಿಂದ ಸೇತುವೆ ಇಲ್ಲದೆ ಮಳೆಗಾಲದ ಸಂದರ್ಭದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.  ದಿನ ನಿತ್ಯದ ವಸ್ತುಗಳನ್ನು ಖರೀದಿಸುವರು, ಶಾಲೆಗೆ ಹೋಗುವ ಮಕ್ಕಳು, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗೋಕೆ ಆಗದೇ ಪರದಾಡುತ್ತಿರುವ ಊರಿನ ಜನರು, ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಗೊಬ್ಬರ ಇತ್ಯಾದಿ ಮೂಲಭೂತ ಸೌಕರ್ಯಗಳ ಸಮಯಕ್ಕೆ ಸರಿಯಾಗಿ ಪಡೆಯಲು ಕೃಷಿಕರು ಸೇತುವೆ ಇಲ್ಲದೆ ಸಂಕಟಪಡುತ್ತಿದ್ದಾರೆ. ಗ್ರಾಮಸ್ಥರು ಸೇತುವೆ ರಸ್ತೆ ಇಲ್ಲದೆ ಬೇಸತ್ತು…

Read More

ಜೆಡಿಎಸ್ ಮುಖಂಡ ಅರ್ ಎ ಚಾಬುಸಾಬ್ ಗೆ ಮಾತೃ ವಿಯೋಗ:

ರಿಪ್ಪನ್ ಪೇಟೆ: ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ರವರ ತಾಯಿ ಆಯಿಶಾಬೀ (95) ರವರು ವಯೋಸಹಜ ಕಾಯಿಲೆಯಿಂದ ರಿಪ್ಪನ್ ಪೇಟೆಯ ಸ್ವಗೃಹ ದಲ್ಲಿ  ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ರಿಪ್ಪನ್ ಪೇಟೆಯ ಖಬರ್ ಸ್ಥಾನ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.ಮೃತರು ಅರ್ ಎ ಚಾಬುಸಾಬ್ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.

Read More

ಮುಖ್ಯಮಂತ್ರಿಗಳಿಂದ ಸಾಗರ ತಾಲ್ಲೂಕಿನಲ್ಲಿ 459.19 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

ಸಾಗರ:ತಾಲ್ಲೂಕಿನ ಹಲವು ಕಾಮಗಾರಿಗಳಿಗೆ ವರ್ಚ್ಯುಯಲ್ ಹೋಸ್ಟಿಂಗ್ ಮೂಲಕ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ರವರು ಚಾಲನೆ ನೀಡಿದರು.   ಅವರು ಇಲ್ಲಿನ ಗಾಂಧಿಮಂದಿರದ ಹೊರಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ಹೋಸ್ಟಿಂಗ್ ಮೂಲಕ ಈ ಕೆಳಗಿನ ಕಾಮಗಾರಿಗಳಿಗೆ ಚಾಲನೆ ನೀಡಿದರು.  ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯ 155-00 ಕೋಟಿ ರೂಪಾಯಿಗಳು, ಜೋಗ ಅಭಿವೃದ್ಧಿ ಕಾಮಗಾರಿಗಳಿಗೆ 165-00ಕೋಟಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206 (69) ತುಮಕೂರು ಹೊನ್ನಾವರ ರಸ್ತೆಯ ಕಿ.ಮೀ. 278 ರಿಂದ 286.40ರವರೆಗೆ ಸಾಗರ ನಗರ ವ್ಯಾಪ್ತಿಯಲ್ಲಿ…

Read More

ಜೀವನದ ಕೊನೆ ಕ್ಷಣದವರೆಗೂ ಸಮಾಜ ಸೇವೆಗೆ ಸಿದ್ಧ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಆನಂದಪುರಂ: ಇಲ್ಲಿನ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ  ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ಜೀವನದ ಕೊನೆ ಕ್ಷಣದವರೆಗೂ ಸಮಾಜಸೇವೆ ಮಾಡಲು ಸಿದ್ಧ.ಕೊವಿಡ್ ಸಂದರ್ಭದಲ್ಲಿ ಸರ್ಕಾರ ಅತೀ  ಹೆಚ್ಚಿನ ಗಮನ ಕೊಡಬೇಕಿತ್ತು, ಸರ್ಕಾರ ಅತಿ ಹೆಚ್ಚಿನ ಒತ್ತು ಕೊಟ್ಟಿಲ್ಲ , ಆದ್ದರಿಂದ ಹಲವರು ನೊಂದಿದ್ದಾರೆ,ಕಷ್ಟದಲ್ಲಿದ್ದಾರೆ. ಸಮಾಜದಲ್ಲಿ ಇನ್ನೂ ಕಡುಬಡವರಿದ್ದಾರೆ. ಅಂತಹವರನ್ನು ಗುರುತಿಸುವ ಕಾರ್ಯ ನಡೆಯಬೇಕು ಎಂದರು. ಕರೋನದ ಫ್ರಂಟ್ ಲೈನ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,…

Read More

ತುರ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ದರಾಗಿರಿ: ಕುಮಾರ್ ಬಂಗಾರಪ್ಪ

ಸೊರಬ: ತಾಲೂಕಿನಲ್ಲಿ ಅತಿವೃಷ್ಟಿ ನಿಮಿತ್ತ ಮಾನ್ಯ ಶಾಸಕರು ಇಂದು ತಾಲೂಕು ಕಚೇರಿ ಸೊರಬದಲ್ಲಿ ತುರ್ತು ಸಭೆಯನ್ನು ನಡೆಸಿದರು. ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು  ಈ ಸಂದರ್ಭದಲ್ಲಿ ತಾಲೂಕ ಆಡಳಿದ ತುರ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿರಲು ಸೂಚಿಸಿದರು. ಈ ಸಂದರ್ಭದಲ್ಲಿ  ತಹಶೀಲ್ದಾರ್ ಸೊರಬ, ಪುರಸಭೆ ಅಧ್ಯಕ್ಷರು ಹಾಗೂ ಎಲ್ಲ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ಸೊರಬ ವಿಧಾನಸಭಾ ಕ್ಷೇತ್ರದ ಸೊರಬ ಪಟ್ಟಣದ ದಂಡಾವತಿ ಸೇತುವೆ, ಹಳೆಸೊರಬ ಗ್ರಾಮದ ಕೆರೆ ತೀರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ವಿಷಯ…

Read More

ಸೊರಬ ತಾಲೂಕಿನಲ್ಲಿ ಮಳೆಯ ಅಬ್ಬರ : ಹಲವೆಡೆ ಪ್ರವಾಹ

ಸೊರಬ:ತಾಲ್ಲೂಕಿನಲ್ಲಿ ಇಂದು ವರುಣನ ಅಬ್ಬರ ಹೆಚ್ವಾಗಿದ್ದು ಹಲವು ಭಾಗಗಳಲ್ಲಿ ಮನೆ, ಕೃಷಿ ಭೂಮಿ ಹಾಗೂ ರಸ್ತೆಗಳು ಜಲಾವೃತಗೊಂಡಿದ್ದು ಇಡೀ ತಾಲ್ಲೂಕಿನಲ್ಲಿ ಪ್ರವಾಹವನ್ನು ಸ್ರಷ್ಟಿಸಿದೆ. ಚಂದ್ರಗುತ್ತಿಯ ವರದಾನದಿ,ಸೊರಬದ ಗೌರಿ ಕೆರೆ,ಚನ್ನಪಟ್ಟಣ ಸೇತುವೆ,ಕಡಸೂರ್ ರಸ್ತೆ,ಕತವಾಯಿ ಸೇತುವೆ ಮುಳುಗಡೆಯಾಗಿವೆ, ಇದರಿಂದ ಸಂಪರ್ಕ ರಸ್ತಗಳು ಸಂಪೂರ್ಣವಾಗಿ ಬಂದ್ ಆಗಿ ರಸ್ತೆಗಳಮೇಲೆ  ಅಪಾಯದಮಟ್ಟ  ಮೀರಿ ನೀರು ಹರಿಯುತ್ತಿದ್ದು ವಾಹನಗಳು ಸಂಚರಿಸದಂತೆ  ಸೊರಬ ಪೋಲೀಸ್ ಇಲಾಖೆಯವರು ರಸ್ತೆಗೆ ಅಡ್ಡವಾಗಿ  ಬ್ಯಾರಿಕೇಡ್ ಅಳವಡಿಸಿದ್ದಾರೆ, ಹಾಗೂ ಯಾವುದೇ ರೀತಿಯ  ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ…

Read More