ಜಮೀರ್ ಮೊದಲು ಯಡಿಯೂರಪ್ಪ ಮನೆ ಮುಂದೆ ವಾಚಮ್ಯಾನ್ ಕೆಲಸ ನಿರ್ವಹಿಸಲಿ..
ದಾವಣಗೆರೆ: ಜಮೀರ್ ಅಹಮ್ಮದ್, ಗುಜರಿ ಅಹಮ್ಮದ್ ಮೊದಲು ವಾಚ್‍ಮೆನ್ ಡ್ರೆಸ್ ಹಾಕಿಕೊಂಡು, ಲಾಠಿ ಹಿಡಿದು, ಯಡಿಯೂರಪ್ಪನವರ ಮನೆ ವಾಚ್ ಮೆನ್ ಆಗಿ ಎಂದು ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ಬಳಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಲಿ ಸಿಎಂ ಅಲ್ಲ ಭಾವಿ ಸಿಎಂ ಎಂಬ ಜಮೀರ್ ಆಹ್ಮದ್ ಹೇಳಿದ್ದಾರೆ. ಜಮೀರ್ ಮೊದಲು ಸಿಎಂ ಮನೆ ವಾಚ್ ಮನ್ ಆಗಲಿ. ಆ ನಂತರ ಮುಂದಿನ ರಾಜಕೀಯದ ಬಗ್ಗೆ ಯೋಚನೆ ಮಾಡಿ…