ಮೇಗರವಳ್ಳಿ: ಲಸಿಕಾಕರಣವೇ ಮುಳುವಾಗುವ ಸಾಧ್ಯತೆ..!!
ಮೇಗರವಳ್ಳಿ: ಇಂದು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೪೫ ವರ್ಷ ಮೇಲ್ಪಟ್ಟವರಿಗೆ 2 ನೆಯ ಡೋಸ್ ಲಸಿಕಾ ಅಭಿಯಾನ ನಡೆಯಿತು.. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯ ವರೆಗೆ ನೂರಕ್ಕೂ ಹೆಚ್ಚು ಜನ ಬಂದು ಜಮಾಯಿಸಿದ್ದರು. ಆಸ್ಪತ್ರೆಯ ಮುಂಬಾಗದಲ್ಲಿರುವ ಚಿಕ್ಕ ಸ್ಥಳದಲ್ಲಿ ಸೇರಿದ್ದ ನೂರಾರು ಜನರಿಗೆ ಸಾಮಾಜಿಕ ಅಂತರದ ಪರಿವೇ ಇರಲಿಲ್ಲ. ಕೇವಲ 50 ಲಸಿಕೆಗಳು ಸರಬರಾಜಾಗಿತ್ತು ಆದ್ದರಿಂದ ಸಾಮಾನ್ಯವಾಗಿ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಯಿತು. 9 ಗಂಟೆಗೆ ಹಾಜರಾದ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯ ಬಾಗಿಲು ತೆರೆಯಲು ಹರಸಾಹಸ…