ಸೊರಬ: ಇಂದು ಮಾನ್ಯ ಶಾಸಕರು ಮತ್ತು ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿ ಅಧ್ಯಕ್ಷರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರು ಚಂದ್ರಗುತ್ತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಿದರು.
ದ್ಯಾವಾಸ ಗ್ರಾಮದಲ್ಲಿನ ಸಮುದಾಯ ಭವನದ ಗುದ್ದಲಿ ಪೂಜೆ ಅಂದಾಜು ಮೊತ್ತ 15 ಲಕ್ಷ ರುಪಾಯಿಗಳು, ತೆಲಗುಂದ್ಲಿ ಗ್ರಾಮದ ಊರೊಳಗಿನ ರಸ್ತೆ ಅಭಿವ್ರುದ್ಧಿ ಕಾಮಗಾರಿಯ ಉದ್ಘಾಟನೆ ಅಂದಾಜು ಮೊತ್ತ 100 ಲಕ್ಷ ರುಪಾಯಿಗಳು, ಹಾಗೂ ಕ್ರಿಯಾತ್ಮಕ ನಲ್ಲಿ ಸಂಪರ್ಕ ಕಾಮಗಾರಿಯ ಗುದ್ದಲಿ ಪೂಜೆ ಅಂದಾಜು 41 ಲಕ್ಷ ರುಪಾಯಿಗಳು, ಬೆನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆನ್ನೂರು- ಅಂಬಲಿಕೊಪ್ಪ ವರೆಗಿನ ರಸ್ತೆ ಅಭಿವ್ರುದ್ಧಿ ಕಾಮಗಾರಿಯ ಉದ್ಘಾಟನೆ ಅಂದಾಜು 200 ಲಕ್ಷ ರುಪಾಯಿಗಳು, ಹಾಗೂ ಓ.ಹೆಚ್.ಟಿ ಕಾಮಗಾರಿಯ ಗುದ್ದಲಿ ಪೂಜೆ ಅಂದಾಜು 19 ಲಕ್ಷ ರುಪಾಯಿಗಳು,ಹಾಗೂ ಬೆನ್ನೂರು ಗ್ರಾಮದಲ್ಲಿ ಕಾಳಿಕಾಂಬ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ಅಂದಾಜು 30 ಲಕ್ಷ ರುಪಾಯಿಗಳು, ಮತ್ತು ಬೆನ್ನೂರು ಗ್ರಾಮಕ್ಕೆ ಕ್ರಿಯಾತ್ಮಕ ನಲ್ಲಿ ಸಂಪರ್ಕ ಕಾಮಗಾರಿಯ ಗುದ್ದಲಿ ಪೂಜೆಅಂದಾಜು 37 ಲಕ್ಷ ರುಪಾಯಿಗಳು, ಚಂದ್ರಗುತ್ತಿ ಗ್ರಾಮದ ಹನುಮಂತ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ಅಂದಾಜು 30 ಲಕ್ಷ ರುಪಾಯಿಗಳು, ಚಂದ್ರಗುತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಳೆ ಮರೂರು ಗ್ರಾಮದ ಈಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ಕಾಮಗಾರಿಯ ಗುದ್ದಲಿ ಪೂಜೆ ಅಂದಾಜು 20 ಲಕ್ಷ ರುಪಾಯಿಗಳು,
ಸೊರಬ- ಸಿದ್ದಾಪುರ ಮುಖ್ಯ ರಸ್ತೆಯಿಂದ ಅಂದವಳ್ಳಿ ಮುಖಾಂತರ ಚಂದ್ರಗುತ್ತಿ ಸೇರುವ ರಸ್ತೆ ಅಭಿವ್ರುದ್ಧಿ ಕಾಮಗಾರಿಯ ಗುದ್ದಲಿ ಪೂಜೆ ಅಂದಾಜು 125 ಲಕ್ಷ ರುಪಾಯಿಗಳು, ಬಾಡದಬೈಲು ಗ್ರಾಮದ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ಅಂದಾಜು 20 ಲಕ್ಷ ರುಪಾಯಿಗಳು, ಮುಟುಗುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಟುಗುಪ್ಪೆ ಗ್ರಾಮದ 180 ಮನೆಗಳಿಗೆ ಕ್ರಿಯಾತ್ಮಕ ನಲ್ಲಿ ಸಂಪರ್ಕ ಹಾಗೂ ಒ.ಹೆಚ್.ಟಿ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ಅಂದಾಜು ಮೊತ್ತ 100 ಲಕ್ಷ ರುಪಾಯಿಗಳು, ಮುಟುಗುಪ್ಪೆ ಗ್ರಾಮ ಪಂಚಾಯತಿಯ ಕಕ್ಕರಸಿ – ಗೊಗ್ಗೆಹಳ್ಳಿ ಮುಖಾಂತರ ಮುಟುಗುಪ್ಪೆ ಸೇರುವ ಸಂಪರ್ಕ ರಸ್ತೆ ಕಾಮಗಾರಿಯ ಉದ್ಘಾಟನೆ ನೆರೆವೇರಿಸಿದರು.
ಆಯಾ ಗ್ರಾಮದವರ ಅಹವಾಲುಗಳನ್ನು ಸ್ವೀಕರಿಸಿ ಮೂಲಭೂತವಾಗಿ ಪ್ರತಿ ಗ್ರಾಮಕ್ಕೂ ರಸ್ತೆ ಕುಡಿಯುವ ನೀರು ವಿದ್ಯುತ್ ಆಸ್ಪತ್ರೆ ವ್ಯವಸ್ತೆ ಮಾಡುವುದು ಜನ ಪ್ರತಿನಿಧಿಗಳ ಕರ್ತವ್ಯವಾಗಿದ್ದು ನಾವು ಆ ನಿಟ್ಟಿನಲ್ಲಿ ಕೆಸರು ರಸ್ತೆ ಇಲ್ಲದ ಸೊರಬ ತಾಲ್ಲೂಕು ಮಾಡುವುದು ನನ್ನ ಗುರಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, AEE PRED , PWD AEE ರವರು, AEE ದಂಡಾವತಿ ರವರು, ಚಂದ್ರಗುತ್ತಿ ಗ್ರಾ. ಪಂ ಸದಸ್ಯರಾದ ಬಾಡದಬೈಲು ತಿರುಪತಿರವರು, ಸಲಿಂ ರವರು, ಚಂದ್ರಗುತ್ತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮುಖಂಡರಾದ ಈಶ್ವರ ಚನ್ನಪಟ್ಟಣ ರವರು, ಶಿವಕುಮಾರ್ ಕಡಸೂರು,ಪ್ರಸನ್ನ ಶೇಟ್ ರಾಜು ಕೆಂಚಿಕೊಪ್ಪ, ಮಣ್ಣತ್ತಿ ಪರಮೇಶ್ವರ ರವರು, ಆರಾಧನ ಸಮಿತಿ ಸದಸ್ಯರಾದ ಕೊಟ್ಟ್ರೇಶ್ ಗೌಡ್ರು ಚಿಕ್ಕಸವಿ , ವಸುಂಧರ ಭಟ್ ರವರು, ಮಾವಲಿ ಬೋಗೆಶ್ ರವರು, ಉಮೇಶ್ ಗುಂಜನೂರು ರವರು, ಯಲಸಿ ಜಾನಕಪ್ಪರವರು, ಹುಲ್ತಿಕೊಪ್ಪ ಅನಿಲ್ ರವರು, ಕಲ್ಲಂಬಿ ಕನಕದಾಸ್ ರವರು, ಕಮರೂರು ದೇವರಾಜ್ ರವರು, ರಾಜು, ರಮೇಶ್ ಮಾವಿನಬಳ್ಳಿಕೊಪ್ಪ, ನವೀನ್ ರವರು, ಕೇಶವ ರವರು ಹಾಗೂ ಗ್ರಾಮಸ್ಥರು ಹಾಜರಿದ್ದರು…..
ವರದಿ: ವೆಂಕಟೇಶ್ ಚಂದ್ರಗುತ್ತಿ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..