ರಿಪ್ಪನ್ ಪೇಟೆ : ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯ ಕಾರಣದಿಂದ ಕಡೆ ಗೆದ್ದೆ ಪಿಕಪ್ ನಾಲೆಯಿಂದ ಕೋಣನ ಜಡ್ಡು ಮಾರ್ಗವಾಗಿ ಬಸವಪುರ ಗ್ರಾಮದಲ್ಲಿರುವ ನಾಲೆಯು ಕುಸಿದಿದ್ದು ಬಸವಪುರ ಗ್ರಾಮದ ನೂರಾರು ಎಕರೆ ಜಮೀನುಗಳಿಗೆ ನೆಟ್ಟಿ ಮಾಡಲು ನೀರು ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ.
ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾನಗೋಡು ಉಮಾಕರ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಲಗೋಡು ರತ್ನಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ದೂರವಾಣಿಯಲ್ಲಿ ಕರೆ ಮಾಡಿ ತುರ್ತಾಗಿ ದುರಸ್ಥಿ ಪಡಿಸಬೇಕೆಂದು ಹೇಳಿದರು.
ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೆ ಗೆದ್ದ ಪಿಕಪ್ ನಾಲೆ ಯಿಂದ ಹರಿವ ನೀರು ಬಸವಪುರ ಗ್ರಾಮದ ಮಳೆ ಆಧಾರಿತ ನೂರಾರುಎಕರೆ ಜಮೀನುಗಳಿಗೆ ವ್ಯವಸಾಯ ಮಾಡಲು ತುಂಬಾ ಅನುಕೂಲಕರವಾಗಿತ್ತು ಹಾಗೆ ಜಾನುವಾರುಗಳಿಗೆ ಮತ್ತು ಕಾಡು ಪ್ರಾಣಿಗಳಿಗೂ ಸಹ ನೀರನ್ನು ಒದಗಿಸುವ ಒಂದು ಮೂಲವಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಹೊಸನಗರ ತಾಲ್ಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪ ಗೌಡ ಹಾಗೂ ಅರಸಾಳು ಗ್ರಾಮಪಂಚಾಯಿತಿ ಸದಸ್ಯರುಗಳಾದ ಯೋಗೇಂದ್ರ ಪ್ಪ ದೇವರಾಜ್.ಉಮೇಶ್ ಹಾಗೂ ಪಿಡಿಓ ಗಣೇಶ್ ಇನ್ನಿತರರಿದ್ದರು.
ವರದಿ: ಸಬಾಸ್ಟಿನ್ ಮ್ಯಾಥ್ಯೂಸ್ ರಿಪ್ಪನ್ ಪೇಟೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..