ಹೊಂಬುಜ ಜೈನ ಮಠದಲ್ಲಿ ಅದ್ದೂರಿಯ ವಿಜಯದಶಮಿ :
ರಿಪ್ಪನ್ ಪೇಟೆ : ಜೈನರ ದಕ್ಷಿಣದ ಕಾಶಿಯಾಗಿರುವ ಹೊಂಬುಜ ಕ್ಷೇತ್ರದಲ್ಲಿ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪದ್ಮಾವತಿ ದೇವಿಗೆ ನವರಾತ್ರಿಯ ಒಂಬತ್ತು ದಿನಗಳು ಬೇರೆ ಬೇರೆ ರೀತಿಯಲ್ಲಿ ಅಲಂಕರಿಸಿ ಪ್ರತಿ ದಿನ ವೈಭವದಿಂದ ಆಚರಿಸಲಾಯಿತು. ಕೆಟ್ಟದ್ದರಿಂದ ನಮ್ಮನ್ನು ರಕ್ಷಿಸುವ ಮಾತೆಯಾಗಿ ದೇವಿಯನ್ನು ಈ ದಿನಗಳಲ್ಲಿ ಕಾಣಲಾಗುತ್ತದೆ.ನವರಾತ್ರಿಯ ಕೊನೆಯ ದಿನವಾದ ಶುಕ್ರವಾರದಂದು ಹೊಂಬುಜ ಕ್ಷೇತ್ರದಿಂದ ಆನೆ ಮತ್ತು ಅಶ್ವ ದೊಂದಿಗೆ ಪಲ್ಲಕ್ಕಿಯ ರಾಜಬೀದಿ ಉತ್ಸವವು ಬನ್ನಿ ಮಂಟಪಕ್ಕೆ ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಬನ್ನಿ ಮುರಿದು ಭಕ್ತರಿಗೆ ಪ್ರಸಾದ…