Headlines

ಶಿವಮೊಗ್ಗ : ಯುವಕನ ಬರ್ಬರ ಕೊಲೆ: ಅನೈತಿಕ ಸಂಬಂಧ ಶಂಕೆ

 ಶಿವಮೊಗ್ಗ : ಇಲ್ಲಿನ ಬಾಪೂಜಿ ನಗರದ ಮುಖ್ಯರಸ್ತೆ ಗಂಗಾಮತ ಸಂಘದ ವಿದ್ಯಾರ್ಥಿ ನಿಲಯದ ಎದುರು ಒಬ್ಬ ಯುವಕನನ್ನ ಬರ್ಬರ ಹತ್ಯೆ ಮಾಡಲಾಗಿದೆ. ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ನಗರದ ಟ್ಯಾಂಕ್‌ ಮೊಹಲ್ಲಾದ ತುಂಗಾ ವಿಧ್ಯಾರ್ಥಿನಿಲಯದ ಬಳಿಯಲ್ಲಿ ಮೊಬೈಲ್‌ ನಲ್ಲಿ ಮಾತನಾಡುತ್ತ ನಿಂತಿದ್ದ ಯುವಕನನ್ನು ಏಳು ಜನರ ತಂಡ ಮುಸುಕು ಧರಿಸಕೊಂಡು ಬಂದು ಏಕಾ ಏಕಿಯಾಗಿ ಮಚ್ಚು ಲಾಂಗಿನಿಂದ ಹಲ್ಲೆಮಾಡಿದ್ದಾರೆ. ಇದರ ಪರಿಣಾಮ ಯುವಕ ಸ್ಥಳದಲ್ಲಿ ಸಾವನಪ್ಪಿದ್ದು. ಕೊಲೆಯ ನಂತರ ಕೊಲೆ ಮಾಡಿದವರು ಯುವಕ ಸಾವನಪ್ಪಿದ್ದಾನೋ ಇಲ್ಲವೋ ಎನ್ನುವುದಕ್ಕ ಖಾತರಿ ಪಡಿಸಿಕೊಂಡು ನಂತರ ಸ್ಥಳದಿಂದ ಕಾಲು ಕಿತ್ತಿದ್ದಾರೆ.

ಪಿತೃಪಕ್ಷದ ಹಿನ್ನಲೆಯಲ್ಲಿ ಪರಿಚಯಸ್ಥರ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಅವೆಂಜರ್ ಬೈಕ್ ನಲ್ಲಿ ಬರುತ್ತಿದ್ದ ಸಂತೋಷ್ ನನ್ನ ಬರ್ಬರ ಹತ್ಯೆ ಮಾಡಲಾಗಿದೆ. ಪೂಜೆ ಮಾಡಿ ಇನ್ನೇನು ವಿಶ್ರಾಂತಿಗೆ ಜಾರಬೇಕು ಅಷ್ಟರೊಳಗೆ ಈ ಘಟನೆ ನಡೆದಿದೆ.

ಆರೋಪಿಗಳು 7 ಜನರೂ ಪರಾರಿಯಾಗಿದ್ದಾರೆ. ಸ್ಥಳೀಯ ಸಿಸಿ ಟಿವಿ ಕ್ಯಾಮೆರಾಗಳೆಲ್ಲಾ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಎಲ್ಲಾ ಹಾಳಾಗಿದೆ. ಈ ಹಿನ್ನಲೆಯಲ್ಲಿ ಆರೋಪಿಗಳನ್ನ ಹುಡುಕುವಲ್ಲಿ ಪೊಲೀಸರಿಗೆ ಕಷ್ಟವಾಗಿದೆ.

ಯುವಕನು ವೀರಭದ್ರೇಶ್ವರ ಚಲನಚಿತ್ರ ಮಂದಿರದ ಬಳಿ ಇರುವ ಕಾರಿನ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಗರದ ಹೊರವಲಯದಲ್ಲಿರೋ ಗಾಡಿಕೊಪ್ಪನಿವಾಸಿ ಎಂದು ತಿಳಿದುಬಂದಿದೆ.

 ಈ ಹತ್ಯೆಗೆ ಅನೈತಿಕ ಸಂಭಂದವೇ ಕಾರಣವಿರಬಹುದೆಂದು ಅಂದಾಜಿಸಲಾಗಿದೆ.

 ಶಿವಮೊಗ್ಗದ ಕೋಟೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Leave a Reply

Your email address will not be published. Required fields are marked *