ಶಿವಮೊಗ್ಗ: ನಾಡ ಹಬ್ಬ ದಸರಾ ಪ್ರಯುಕ್ತ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರನ್ನು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಅದರಂತೆ ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ದೇಹಾದಾರ್ಢ್ಯ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕಟ್ಟುಮಸ್ತಾದ ದೇಹವನ್ನು ಪ್ರದರ್ಶಿಸಿದರು. ರಾಜ್ಯ ಮಟ್ಟದ ದೇಹಾದಾರ್ಢ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಶರವಣಂ ಅವರಿಗೆ ಮಿಸ್ಟರ್ ಕರ್ನಾಟಕ ಅವಾರ್ಡ್ ನೀಡಿ ಗೌರವಿಸಲಾಯಿತು.
55 ರಿಂದ 85 ಕೆಜಿ ಕೆಟಗಿರಿಯ ಒಟ್ಟು 7 ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ನೂರಾರು ಯುವಕರು ಭಾಗವಹಿಸಿದ್ದರು. ಉತ್ತಮ ದೇಹಾದಾರ್ಢ್ಯ ಪಟುಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಯಿತು. ಒಟ್ಟಾರೆ ಕಳೆದೆರೆಡು ವರ್ಷಗಳಿಂದ ಮರೆಯಾಗಿದ್ದ ಸಾಂಸ್ಕೃತಿಕ ವೈಭವ ಹಾಗೂ ಕ್ರೀಡಾ ಉತ್ಸವಗಳು ಈ ಬಾರಿಯ ದಸರಾದಲ್ಲಿ ನೋಡುಗರ ಗಮನ ಸೆಳೆಯುತ್ತಿವೆ.
ಪ್ರಶಸ್ತಿ ವಿವರ:
# ದೇಹಾದಾರ್ಢ್ಯ ಸ್ಪರ್ಧೆಯಲ್ಲಿ ಮಿಸ್ಟರ್ ಕರ್ನಾಟಕ ಅವಾರ್ಡ್ ಬೆಂಗಳೂರಿನ ಶರವಣಂ ಮುಡಿಗೆ.
# ಮಿಸ್ಟರ್ ಕರ್ನಾಟಕ ಅವಾರ್ಡ್ ರನ್ನರ್ ಆಪ್ ಆಗಿ ಮಂಗಳೂರಿನ ನಿತ್ಯಾನಂದ ಕೊಟ್ಯಾನ್ ಬಹುಮಾನ ಪಡೆದರು.
# ದೇಹಾದಾರ್ಢ್ಯ ಸ್ಪರ್ಧೆಯ ಮಿಸ್ಟರ್ ಕರ್ನಾಟಕ ಬೆಸ್ಟ್ ಪೋಸರ್ ಅವಾರ್ಡ್ ಅನ್ನು ಗಂಗಾವತಿಯ ಉಮೇಶ್ ಗಂಗಾಣಿ ಸ್ವೀಕರಿಸಿದರು.