ಹೊಸನಗರ ತಾಲೂಕ್ ವೀರಶೈವ-ಲಿಂಗಾಯತ ಪರಿಷತ್ ನ ಅಧ್ಯಕ್ಷರಾಗಿ ಆನಂದ್ ಮೆಣಸೆ ಆಯ್ಕೆ :

ಹೊಸನಗರ : ತಾಲ್ಲೂಕು ವೀರಶೈವ-ಲಿಂಗಾಯತ ಪರಿಷತ್ ನ ಸರ್ವ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ವೀರಶೈವ-ಲಿಂಗಾಯತ ಪರಿಷತ್ ನ ಅಧ್ಯಕ್ಷರಾಗಿ ಆನಂದ್ ಮೆಣಸೆ ರವರು ಆಯ್ಕೆಯಾಗಿದ್ದಾರೆ.  ಪ್ರಧಾನ ಕಾರ್ಯದರ್ಶಿಗಳಾಗಿ ಮಹೇಶ್ ದೇವರಸಲಕಿ,ದೇವು ಹುಳಿಗದ್ದೆ,ಲೋಕೇಶ್ ಶುಂಠಿಕೊಪ್ಪ,ಖಜಾಂಚಿಯಾಗಿ ಚಂದ್ರಶೇಖರ್ ಹಾಲುಗುಡ್ಡೆ,ಉಪಾದ್ಯಕ್ಷರುಗಳಾಗಿ ಜಗದೀಶ್ ಕುಕ್ಕಳಲೆ,ದಯಾಕರ್,ವಿಶ್ವನಾಥ್ ಹೊನ್ನೆಬೈಲು,ಪ್ರವೀಣ್ ಎಂ.ಗುಡ್ಡೆಕೊಪ್ಪ,ಕಮಲಾಕರ್ ಕಮದೂರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಸಚಿನ್ ಗೌಡ ಗರ್ತಿಕೆರೆ,ನಿರಂಜನ್ ರಿಪ್ಪನ್ ಪೇಟೆ,ಟಿ.ಎಲ್ ಷಣ್ಮುಖ,ಶಿವಮೂರ್ತಿ ಹರತಾಳು,ಸುದಾಕರ್ ಬೆನವಳ್ಳಿ.ಹಾಗೂ 26 ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಹಾಗೂ ವೀರಶೈವ-ಲಿಂಗಾಯತ ಕಾವಲು ಪರಿಷತ್ತು,ಕಾನೂನು‌‌ ಪರಿಷತ್ತು,ಪ್ರಚಾರ ಪರಿಷತ್ತು ಗಳನ್ನು…

Read More

ದಲಿತ ರೈತರ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ : ಗ್ರಾಮಸ್ಥರಿಂದ ತೀವ್ರ ಪ್ರತಿಭಟನೆ:

ಶಿವಮೊಗ್ಗ: ದರಕಾಸ್ತಿನಿಂದ ದಲಿತರಿಗೆ ಮಂಜೂರಾಗಿದ್ದ ಜಮೀನನ್ನು ವಶಕ್ಕೊಪ್ಪಿಸಲು ಬಿಡದ ಅರಣ್ಯಾಧಿಕಾರಿಗಳ ಅಧಿಕಾರಿಗಳು ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಲ್ಲದೇ ನಾಲ್ವರ ಮೇಲೆ ಏಳೆಂಟು ಸುಳ್ಳು ಮೊಕದ್ದಮೆ ದಾಖಲಿಸಿರುವ‌ ಬಗ್ಗೆ ತಾಲೂಕಿನ ದೇವಕಾತಿಕೊಪ್ಪ‌ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಇಂದು ಮದ್ಯಾಹ್ನದಿಂದ ಪ್ರತಿಭಟನೆಗಿಳಿದಿದ್ದಾರೆ. ದೇವಕಾತಿಕೊಪ್ಪ ಹೊರವಲಯದ ಸರ್ವೇ ನಂ115ರಿಂದ 126ರ ವರೆಗಿನ ಭೂಮಿಯಲ್ಲಿ 12ದಲಿತರಿಗೆ 1979ರಲ್ಲಿ ಅಂದಿನ ಸರ್ಕಾರ ತಲಾ 2ಎಕರೆಯಂತೆ 24 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಕಂದಾಯ ಇಲಾಖೆ ಈ ಭೂಮಿಗೆ ಪಹಣಿ ಹಾಗೂ ಖಾತೆ ಮಾಡಿ…

Read More

ಹೊಸನಗರ : ಮಾರುತಿಪುರ ಗ್ರಾಪಂ ಮಾಜಿ ಅಧ್ಯಕ್ಷರಾದ ಓಂಕೇಶ್ ಗೌಡ್ರು ನಿಧನ :

ಹೊಸನಗರ : ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಓಂಕೇಶ್ ಗೌಡ್ರು ಸಂಪಳ್ಳಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.  ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಓಂಕೇಶ್ ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದು. ಶ್ರೀಯುತರು 20 ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ,ಸತತ 2 ಬಾರಿ ಮಾರುತಿಪುರ ಪಂಚಾಯತ್ ಸಂಪಳ್ಳಿ ಕ್ಷೇತ್ರದಿಂದ ಸದಸ್ಯರಾಗಿ, ಪಂಚಾಯತ್ ಅಧ್ಯಕ್ಷರು ಆಯ್ಕೆಯಾಗಿದ್ದರು. ಓಂಕೇಶ  ಗೌಡ್ರು  ಸಂಪಳ್ಳಿ ಅವರ ಅಕಾಲಿಕ ನಿಧನಕ್ಕೆ  ಸಂಬಂಧಿಕರು,ಸ್ನೇಹಿತರೂ…

Read More

ಶಿವಮೊಗ್ಗದಲ್ಲಿ ಚಿರತೆ ದಾಳಿ : ದನ-ಕರು ಸಾವು

ಶಿವಮೊಗ್ಗ: ಚಿರತೆ ದಾಳಿಯಿಂದ ದನ ಹಾಗೂ ಕರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಉಂಬ್ಳೇಬೈಲು ಸಮೀಪದ ಸಾಲಿಗೆರೆ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಸಾಲಿಗೆರೆ ಗ್ರಾಮದ ಕೃಷ್ಣಮೂರ್ತಿ ಎಂಬುವರ ಮನೆಯ ಕೊಟ್ಟಿಗೆಗೆ ನುಗ್ಗಿದ ಚಿರತೆ ದನ ಹಾಗೂ ಕರು ಮೇಲೆ ದಾಳಿ ಮಾಡಿದೆ. ಈ ಘಟನೆಯಿಂದ ಗ್ರಾಮದಲ್ಲಿ ಚಿರತೆ ದಾಳಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದಷ್ಟೇ ಸಾಲಿಗೆರೆಯ ಗ್ರಾಮಸ್ಥರು ಕಾಡಾನೆ ದಾಳಿಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದರು. ಉಂಬ್ಳೇಬೈಲು, ಸಾಲಿಗೆರೆ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚಿಗೆ…

Read More

ಭದ್ರಾವತಿಯ ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ರವರಿಗೆ ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ:

ಭದ್ರಾವತಿ : ತಾಲ್ಲೂಕಿನ ಕಡದಕಟ್ಟೆಯ ನವಚೇತನ ಕನ್ನಡ ಹಿ.ಪ್ರಾ.ಶಾಲೆಯ ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ರವರಿಗೆಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ ಲಭಿಸಿದೆ. ಧಾರವಾಡದ ಚೇತನ್ ಫೌಂಡೇಶನ್  ವತಿಯಿಂದ ಡಾ.ಪಾಟೀಲ್ ಪುಟ್ಟಪ್ಪ  ಸಭಾಭವನದ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದ್ದ ದಸರಾ ಉತ್ಸವದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಹಾಗೂ ಕನ್ನಡ ಸಾಹಿತ್ಯದ ಸೇವೆ ಸಾಧನೆ ಪರಿಗಣಿಸಿ ಸಿ.ಎಚ್.ನಾಗೇಂದ್ರಪ್ಪರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Read More

ಅವಿದ್ಯಾವಂತರು ದೇಶಕ್ಕೆ ಹೊರೆ ಎಂಬ ಅಮಿತ್ ಶಾ ಹೇಳಿಕೆಗೆ ಖಂಡನೆ:

ರಿಪ್ಪನ್ ಪೇಟೆ: ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆಯಾಗುತ್ತಾರೆ. ಅನಕ್ಷರಸ್ಥರು ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ ಎಂಬ ಗೃಹ ಸಚಿವ ಅಮಿತ್‌ ಶಾ ಹೇಳಿಕೆಯನ್ನು ಜೆಡಿಎಸ್ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ಖಂಡಿಸಿದ್ದಾರೆ. ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಸದ್‌ ಟಿವಿಗೆ ಅಮಿತ್‌ ಶಾ ಸಂದರ್ಶನದ ವೇಳೆ ಅನಕ್ಷರಸ್ಥ ವ್ಯಕ್ತಿ ದೇಶಕ್ಕೆ ಹೊರೆ. ಆತನಿಗೆ ಸಂವಿಧಾನ ನೀಡಿದ ಹಕ್ಕುಗಳು ತಿಳಿಯುವುದಿಲ್ಲ. ಅಥವಾ ಆತನಿಗೆ ಮಾಡಬೇಕಾದ ಕರ್ತವ್ಯಗಳು ಗೊತ್ತಿರುವುದಿಲ್ಲ….

Read More

ಲಖಿಂಪುರದ ರೈತರ ಹತ್ಯೆ ಖಂಡಿಸಿ ಸಾಗರ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಹಾಗು ‘ಮೌನಚಾರಣೆ …!

  ಸಾಗರ: ಇಲ್ಲಿನ  ಕಾಂಗ್ರೆಸ್ ಪಕ್ಷದ ಕಛೇರಿ ಮುಂಭಾಗದಲ್ಲಿ   ಸಾಗರ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ವತಿಯಿಂದ ಇಂದು ಸಂಜೆ ನಗರ ಅಧ್ಯಕ್ಷರಾದ  ಸುರೇಶ್ ಬಾಬು ರವರ ನೇತೃತ್ವದಲ್ಲಿ ಉತ್ತರ ಪ್ರದೇಶದ ಲಖೀಂಪುರ ಗ್ರಾಮದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅಜಯ್ ಮಿಶ್ರಾ ಅವರ ಪುತ್ರನಾದ ಆಶಿಶ್ ಮಿಶ್ರಾ ವಾಹನವನ್ನು ಚಲಾಯಿಸಿ ಹತ್ಯೆಯನ್ನು ಖಂಡಿಸಿ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಮೇಣದ ಬತ್ತಿ ಬೆಳಗಿಸಿ  ಶ್ರದ್ಧಾಂಜಲಿ ಹಾಗು ಮೌನಚಾರಣೆ …

Read More

ಸಾಗರ : ಶಾಸಕರು ಸಾಗರ ನಗರವನ್ನು ಎಣ್ಣೆ ಸಾಗರ ಮಾಡಲು ಹೊರಟಿದ್ದಾರೆ : ಗೋಪಾಲಕೃಷ್ಣ ಬೇಳೂರು

ಸಾಗರ : ನಗರಸಭೆಯಲ್ಲಿ ಒಂದು ವಾರದಿಂದ ನೀರು ಬಿಡಲು ಯಾಂತ್ರಿಕ ತೊಂದರೆ ಎಂಬ ಕಾರಣ ಕೊಟ್ಟಿದ್ದಾರೆ. ಹಿನ್ನೀರಿನಿಂದ ನೀರು ತರುವ ಕೆಲಸವನ್ನ ನನ್ನ ಅವಧಿಯಲ್ಲಿ ಮಾಡಿದ್ದೆ, ಅಲ್ಲಿನಿಂದ ನೀರನ್ನೇಕೆ ಸಾಗರದ ಜನತೆಗೆ ನೀಡಿಲ್ಲ. ಸಾಗರದಲ್ಲಿ ಬೀದಿ ನಾಯಿಗಳ ಹಾವಳಿ, ಬಿಡಾಡಿ ದನಗಳ ಹಾವಳಿ, ಹಂದಿಗಳ ಹಾವಳಿ ತಡೆಯಲು ನಗರಸಭೆ ಆಡಳಿತ ವಿಫಲವಾಗಿದೆ. ಶಾಸಕ ಹರತಾಳು ಹಾಲಪ್ಪ ಸಾಗರ ನಗರವನ್ನು ‘ಎಣ್ಣೆ’ ಸಾಗರ ಮಾಡಲು ಹೊರಟಿದ್ದಾರೆ ಎಂದರು. ಕಾರ್ಗಲ್ ಜೋಗ ಭಾಗಕ್ಕೆ ಇರುವ ಒಂದು ಪೋಲೀಸ್ ಠಾಣೆಯನ್ನು ತುಮರಿ ಭಾಗಕ್ಕೆ…

Read More

ಭದ್ರಾವತಿ : ಕಡಜದ ಹುಳಗಳ ದಾಳಿಗೆ ಮತ್ತೋರ್ವ ರೈತ ಬಲಿ !

ಭದ್ರಾವತಿ: ಕಳೆದ ಕೆಲವು ದಿನಗಳ ಹಿಂದೆ ಕಡಜದ ಹುಳುಗಳ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು.ಇದೀಗ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆಸೋಮವಾರ ನಡೆದಿದೆ. ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ ಕುಮಾರ್‌(38) ಮೃತಪಟ್ಟಿದ್ದು, ಇವರು ತಮ್ಮ ತೆಂಗಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಭಾನುವಾರ ಬೆಳಿಗ್ಗೆ ಕಡಜದ ಹುಳುಗಳು ದಾಳಿ ನಡೆಸಿವೆ. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Read More

ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೈಕಲ್ ನಲ್ಲಿ 3,500 ಕಿ ಮೀ ಏಕಾಂಗಿ ಯಾತ್ರೆ

ಶಿವಮೊಗ್ಗ  : ಬೆಂಗಳೂರಿನ ಬನ್ನೇರುಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಪ್ರಥಮ ಬಿ.ಎ. ವಿದ್ಯಾರ್ಥಿಯಾಗಿರುವ 19 ವರ್ಷದ ಕಿರಣ್ ಕುಮಾರ್, ದೇಶದಲ್ಲಿ ಆಗುತ್ತಿರುವ ಅತ್ಯಾಚಾರಗಳನ್ನು ಖಂಡಿಸಿ, ಅತ್ಯಾಚಾರಿಗಳಿಗೆ ಕಠಿಣ ಕಾನೂನು ರೂಪಿಸುವಂತೆ ಆಗ್ರಹಿಸಿ 3500 ಕಿ ಮೀ  ಸೈಕಲ್ ಮುಖಾಂತರ ಸಂಚರಿಸಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದಾರೆ. ಬೆಂಗಳೂರು ನಗರ, ತುಮಕೂರು, ಬಳ್ಳಾರಿ, ಬೆಳಗಾವಿ, ಗದಗ, ರಾಯಚೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಈಗಾಗಲೇ ಸೈಕಲ್ ಯಾತ್ರೆ ಮುಗಿಸಿದ್ದು, ನಾಳೆ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ…

Read More