WhatsApp Channel Join Now
Telegram Channel Join Now
 ಹೊಸನಗರ : ಇಂದು ಪಂಡಿತ್ ದಿನದಯಳ್ ಉಪಾಧ್ಯಾಯರ ಜಯಂತಿ ಯನ್ನು ತಾಲೂಕು   ಬಿಜೆಪಿ ಘಟಕ  ವತಿಯಿಂದ ಹೊಸನಗರ ರಿಪ್ಪನಪೇಟೆ ಹುಂಚ  ಮತ್ತು ನಗರ ದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು ಈ ಕಾರ್ಯಕ್ರಮವು  ಹೊಸನಗರ ತಾಲ್ಲೂಕಿನ ಎಲ್ಲಾ ಶಕ್ತಿ ಕೇಂದ್ರದಲ್ಲಿ ನಡೆಯಿತು ಮತ್ತು ಈ ಕಾರ್ಯಕ್ರಮವು ಪ್ರತಿ ಬೂತಿನಲ್ಲೂ ನಡೆಯಿತು.

 ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ ಆರ್ ದೇವಾನಂದ್ ಪಂಡಿತ್ ದೀನದಯಾಳ ಉಪಾಧ್ಯಾಯರು ಒಬ್ಬ ಉದಾತ್ತ ಆದರ್ಶವ್ಯಕ್ತಿ ಮತ್ತು ಪ್ರಚಂಡ ಸಂಘಟನಾ ಸಾಮಾರ್ಥ್ಯವನ್ನು ಹೊಂದಿದ್ದವರಾಗಿದ್ದರು. ಅವರು ಕೇವಲ ವ್ಯಕ್ತಿಯಾಗಿರದೇ ಪ್ರತಿಯೊಂದು ರಂಗದಲ್ಲೂ ಅತ್ಯದ್ಭುತ ಪ್ರತಿಭೆಯನ್ನು ಹೊಂದಿದ್ದರು. ಅವರು ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ, ರಾಜಕಾರಣಿ, ಬರಹಗಾರ, ಪತ್ರಕರ್ತ, ವಾಗ್ಮಿ, ಸಂಘಟನ ಚತುರರು ಮುಂತಾದ ಹಲವು ಸರ್ವಶ್ರೇಷ್ಠ ಗುಣಗಳ ಆಕರವಾಗಿದ್ದರು ಎಂದರು.
 ಈ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿಯನ್ನು ಕಾರ್ಯಕರ್ತರಿಗೆ ಬಿಡಿಸಲಾಯಿತು ಹಾಗೂ ಈ ಕಾರ್ಯಕ್ರಮದಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯರ ಸಾಧನೆಯನ್ನು ಕಾರ್ಯಕರ್ತರಿಗೆ ತಿಳಿಸಿದರು


ಈ ಕಾರ್ಯಕ್ರಮದಲ್ಲಿ ದೀನ ದಯಾಳ ಉಪಾಧ್ಯಾಯ ಜಯಂತಿಯ  ಸಂಚಾಲಕರಾದ R T ಗೋಪಾಲ್, ಹಿರೇಮಣತಿ ಶಿವಾನಂದ,ಮ್ಯಾಮ್ಕೋಸ್ ನಿರ್ದೇಶಕರಾದ K V ಕೃಷ್ಣಮೂರ್ತಿ, ನಗರ ಶಕ್ತಿ ಕೇಂದ್ರದ ಅಧ್ಯಕ್ಷರಾದ  N Y ಸುರೇಶ್, ನಗರ ಶಕ್ತಿ ಕೇಂದ್ರದ ಕಾರ್ಯದರ್ಶಿ ರಾಮಕಾಂತ್, ರಮೇಶ್, ಬಂಕ್ರಿಬಿಡು ಮಂಜುನಾಥ್, ಕೊಣೆಮನೆ  ಶಿವಕುಮಾರ್, ಶಕ್ತಿ ಕೇಂದ್ರ ಸಂಘಚಾಲಕರಾದ N ಸತೀಶ್, ಮಹಾ ಶಕ್ತಿ ಕೇಂದ್ರದ ಪ್ರಮುಖರಾದ ಮಂಜು ಪಟ್ಟಣ ಪಂಚಾಯಿತಿ ಸದಸ್ಯರು ಪಕ್ಷದ  ಕಾರ್ಯಕರ್ತರು ಭಾಗವಹಿಸಿದ್ದರು

Leave a Reply

Your email address will not be published. Required fields are marked *