ರಿಪ್ಪನ್ ಪೇಟೆ : ಪಟ್ಟಣದ ಬಹುದಿನಗಳ ಬೇಡಿಕೆಯಾದ ಸುಸಜ್ಜಿತ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಪಕ್ಕದ ಜಾಗದ ಕೆಲ ಖಾಸಗಿ ವ್ಯಕ್ತಿಗಳು ಅಡ್ಡಿಪಡಿಸುತ್ತಿರುವುದರಿಂದ ಕಾಮಗಾರಿ ಕುಂಠಿತವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಶೌಚಾಲಯ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪಿಲ್ಲರ್ ಗಾಗಿ ಗುಂಡಿಯನ್ನು ತೋಡಿದ್ದು ಇಂದು ಬೆಳಿಗ್ಗೆ ಏಕಾಏಕಿ ಬಂದ ಪಕ್ಕದ ಜಾಗದ ಖಾಸಗಿ ವ್ಯಕ್ತಿಗಳು ಗುಂಡಿಯನ್ನು ಮುಚ್ಚಿದ್ದಾರೆ.ಈ ಸಂಬಂಧ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿರಾವ್ ಹಾಗೂ ಗ್ರಾಪಂ ಸದಸ್ಯರುಗಳು ಸ್ಥಳಕ್ಕೆ ಆಗಮಿಸಿ ಮಾತನಾಡುತ್ತಿರುವಾಗ ಪರಿಸ್ಥಿತಿ ಕೈಮೀರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಸಮಸ್ಯೆಗಳಿದ್ದರೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಾತನಾಡಬೇಕೇ ಹೊರತು ಏಕಾಏಕಿ ಬಂದು ಕಾಮಗಾರಿಗೆ ಅಡ್ಡಿಪಡಿಸುವುದು ಸರಿ ಅಲ್ಲ ಎಂದು ಪಕ್ಕದ ಜಾಗದ ಖಾಸಗಿ ವ್ಯಕ್ತಿಗಳ ಮೇಲೆ ಗ್ರಾಮ ಪಂಚಾಯತಿ ಸದಸ್ಯ ಆಸೀಪ್ ಗರಂ ಆದ ಪ್ರಸಂಗವು ನಡೆದಿದೆ.
ಈ ಸಂಬಂಧ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ನಲ್ಲಿ ತುರ್ತುಸಭೆ ಕರೆಯಲಾಗಿದೆ.
ಒಟ್ಟಾರೆಯಾಗಿ ರಿಪ್ಪನ್ ಪೇಟೆ ಜನತೆಯ ಬಹುದಿನಗಳ ಬೇಡಿಕೆ ಹೈಟೆಕ್ ಶೌಚಾಲಯ ಕಾಮಗಾರಿ ಕುಠಿತವಾಗುತ್ತಿರುವುದು ಬೇಸರದ ಸಂಗತಿಯಾಗಿದೆ.