ಸಾಹಿತಿ ನಯನ ಕೋಟ ರವರಿಗೆ ಒಲಿದ ರಾಜ್ಯಮಟ್ಟದ ಗುರುಕುಲ ಸಾರ್ವಭೌಮ ಕವಿತಾ ಕೃಷ್ಣ ಪ್ರಶಸ್ತಿ:

ಚಿತ್ರದುರ್ಗ: ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಪ್ರಶಸ್ತಿ “ಗುರುಕುಲ ಕಲಾ ಸಾರ್ವಭೌಮ ಕವಿತಾಕೃಷ್ಣ” ಪ್ರಶಸ್ತಿಗೆ ಚಿತ್ರದುರ್ಗದ ಸಾಹಿತಿಯಾದ ನಯನ ಕೋಟ ರವರು ಆಯ್ಕೆಯಾಗಿದ್ದಾರೆ.  ಈ ಕುರಿತು ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಶ್ರೀ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಯನ ಕೋಟ ರವರು ಮೂಲತಃ ಉಡುಪಿ ಜಿಲ್ಲೆಯ ಕೋಟದವರು.ಪ್ರಸ್ತುತ  25 ವರ್ಷದಿಂದ ಚಿತ್ರದುರ್ಗದ ನಿವಾಸಿ. ಇವರ ತಾಯಿ ಸಾಹಿತಿ ನಾಗರತ್ನ ಬಿ(ವನಸುಮ ವಡ್ಡರ್ಸೆ) ಅವರಿಂದ ಪ್ರೇರಣೆ ಪಡೆದು 20 ವರ್ಷಗಳಿಂದ ಎಲೆಮರೆಯ ಕಾಯಿಯಂತೆ ಇದ್ದ ಇವರಿಗೆ ಹಲವಾರು ಬಳಗಗಳು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಲು ಅನುವು ಮಾಡಿಕೊಟ್ಟವು.

ಸಾಹಿತ್ಯದ ಹಲವಾರು ಪ್ರಕಾರಗಳಾದ ಕಥೆ,ಕವನ,ಲೇಖನ, ಗಜಲ್ ಹೀಗೆ ಇನ್ನೂ ಹಲವು ಪ್ರಕಾರಗಳಲ್ಲಿ ಬರೆದು ಬೆನ್ನು ತಟ್ಟಿಸಿಕೊಂಡವರು. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದವರು.ಹಾಗೆಯೇ ರಾಷ್ಟ್ರಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು.

ಪ್ರಸ್ತುತ ಗುರುಕುಲ ಕಲಾ ಪ್ರತಿಷ್ಠಾನದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸದಭಿರುಚಿಯ ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವರು.

ರಾಜ್ಯ ಮಟ್ಟದ ಗುರುಕುಲ ಕಲಾ ಸಾರ್ವಭೌಮ ಕವಿತಾಕೃಷ್ಣ ಪ್ರಶಸ್ತಿಗೆ ಆಯ್ಕೆಯಾದ ನಯನ ಕೋಟ ರವರಿಗೆ ಗುರುಕುಲ ಕಲಾ ಪ್ರತಿಷ್ಠಾನದ ಶಿವಮೊಗ್ಗ ಘಟಕದ ಅಧ್ಯಕ್ಷರಾದ ರಫಿ ರಿಪ್ಪನ್ ಪೇಟೆ ಹಾಗೂ ಬಂಧುಗಳು, ಹಿತೈಷಿಗಳು ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *