ರಿಪ್ಪನ್ ಪೇಟೆ: ಸರ್ಕಾರಿ ಸಮುದಾಯ ಆಸ್ಪತ್ರೆಗೆ ಮಂಜೂರಾದ ಜಾಗವನ್ನು ಒತ್ತುವರಿದಾರರಿಂದ ರಕ್ಷಿಸಿ : ಗ್ರಾಪಂ ಸದಸ್ಯ ಆಸಿಫ಼್ ಭಾಷಾಸಾಬ್

ರಿಪ್ಪನ್ ಪೇಟೆ: ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿರುವ ಜಾಗವನ್ನು ಒತ್ತುವರಿದಾರರಿಂದ ರಕ್ಷಿಸುವಂತೆ ಹಾಗೂ ಪೋಡಿ ಮಾಡಿಕೊಡುವಂತೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಆಸೀಫ಼್ ಜಿಲ್ಲಾಧಿಕಾರಿಗಳಿಗೆ ರಿಪ್ಪನ್ ಪೇಟೆ ಉಪ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಿದರು.

ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಗವಟೂರು ಗ್ರಾಮದ ಸರ್ವೇ ನಂಬರ್ 59 ರಲ್ಲಿ ರಿಪ್ಪನ್ ಪೇಟೆ ಜನತೆಯ ಬಹುದಿನಗಳ ಕನಸಿನ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಈ ಹಿಂದೆ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ರವರ ಅವಧಿಯಲ್ಲಿ 5 ಎಕರೆ ಜಾಗ ಮಂಜೂರಾಗಿದ್ದು, ಆರೋಗ್ಯ ಇಲಾಖೆಯ ಹೆಸರಿನಲ್ಲಿ ಪಹಣಿ ಕೂಡ ಬಂದಿರುತ್ತದೆ ಆದರೆ ಸದರಿ ಜಾಗವನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ಅಡಿಕೆ ಸಸಿ ನೆಟ್ಟಿದ್ದಾರೆ.

ಈ ಬಗ್ಗೆ ಕೆಲ ದಿನಗಳ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಪ್ರವೇಶ ಹಾಗೂ ಒತ್ತುವರಿ ಮಾಡಿರುವ ಜಾಗವನ್ನು ಖುಲ್ಲಾಗೊಳಿಸಿ ರಿಪ್ಪನ್ ಪೇಟೆ ಜನತೆಯ ಬಹುದಿನಗಳ ಕನಸಾದ ಸಮುದಾಯ ಆಸ್ಪತ್ರೆಗೆ ಮಂಜೂರಾದ ಜಾಗವನ್ನು ಉಳಿಸಿಕೊಡಬೇಕು ಹಾಗೇಯೆ ಈ ಕೂಡಲೇ ಸದರಿ ಜಾಗವನ್ನು ಪೋಡಿ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ,ಮಂಜುನಾಥ್,ಕುಮಾರ್ ಹಾಗೂ ಇಬ್ರಾಹಿಂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *