ಸಾಗರ : ಸದ್ಯದ ಪರಿಸ್ಥಿತಿಯಲ್ಲಿ ಜನ ಸಾಮಾನ್ಯವಾಗಿ ಕಸವನ್ನು ಅಥವಾ ಕೈಯಲ್ಲಿರುವ ಚೀಟಿ ,ಪೇಪರ್ ಗಳನ್ನು ಅಲ್ಲಿ ಇಲ್ಲಿ ಬಿಸಾಡುವುದು ಸಾಮಾನ್ಯ.ಸ್ವಚ್ಚತೆ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದು ಕಡಿಮೆ ಆದರೆ ಇಲ್ಲೊಂದು ಯುವಕರ ತಂಡ ಕಸವನ್ನು ಕಂಡರೆ ಕೆಂಡಾಮಂಡಲವಾಗುತ್ತಾರೆ ಆ ಗ್ರಾಮದಲ್ಲಿ ಕಸವನ್ನು ನಿರ್ಮೂಲನೆ ಮಾಡಬೇಕೆಂಬ ಪಣ ತೊಟ್ಟಿದ್ದಾರೆ ಸ್ವಚ್ಚತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಐಗಿನಬೈಲು ಗ್ರಾಮದ ಯುವಕರು ಇದೀಗ ಸ್ವಚ್ಚತೆಗಾಗಿ ಗ್ರಾಮದಲ್ಲಿ ಪಣತೊಟ್ಟಿದ್ದಾರೆ.ಗ್ರಾಮದ ಶಾಲೆ ಅಂಗನವಾಡಿ ಹಾಗೂ ದೇವಸ್ಥಾನಗಳ ಸುತ್ತಮುತ್ತ ಸ್ವಚ್ಚತೆಗಾಗಿ ಯುವಕರು ತಂಡವನ್ನು ಕಟ್ಟಿ ಮುಂಜಾನೆ ಮತ್ತು ಸಂಜೆ ಶ್ರಮದಾನವನ್ನು ಮಾಡುತ್ತಾ ಗ್ರಾಮದಲ್ಲಿ ಸ್ವಚ್ಚತೆಗೆ ಮುಖ್ಯ ಧ್ಯೇಯ ಎಂಬ ಧೋರಣೆಯನ್ನು ಅನುಸರಿಸಿ ಇದೀಗ ಗ್ರಾಮದ ಸ್ವಚ್ಚತೆಗಾಗಿ ಶ್ರಮಿಸುತ್ತಿದ್ದಾರೆ.
ಗ್ರಾಮಸ್ಥರು ಸಹ ಕಸವನ್ನು ಎಲ್ಲೆಂದರಲ್ಲಿ ಬಿಸಾಕುವಂತಿಲ್ಲ ಹಾಗೇನಾದರೂ ಕಂಡು ಬಂದರೆ ಯುವಕರು ಕೆಂಡಾಮಂಡಲವಾಗುತ್ತಾರೆ.
ಇದೀಗ ಐಗಿನಬೈಲು ಗ್ರಾಮವನ್ನು ಸ್ವಚ್ಛತೆಯಲ್ಲಿ ಮುಖ್ಯ ಗ್ರಾಮವನ್ನಾಗಿಸುವ ಉದ್ದೇಶವನ್ನು ಹೊಂದಿದ್ದು ರಾಜ್ಯದಲ್ಲಿಯೇ ಸ್ವಚ್ಚ ಗ್ರಾಮ ಎಂಬ ಹೆಗ್ಗಳಿಕೆ ಪಡೆಯುವಂತೆ ಶ್ರಮಿಸುತ್ತೇವೆ ಎನ್ನುತ್ತಾರೆ ಆ ಗ್ರಾಮದ ಯುವಕರು.
ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ಹರಟೆ ಅವರ ನೇತೃತ್ವದಲ್ಲಿ ಈ ತಂಡ ಕೆಲಸ ನಿರ್ವಹಿಸುತ್ತಿದ್ದು
ಇಂದಿನ ಎಲ್ಲಾ ಯುವ ಪೀಳಿಗೆಯು ಇವರಂತೆಯೇ ಸ್ವಚ್ಛತೆಗಾಗಿ ಪಣತೊಟ್ಟರೆ ನಮ್ಮ ದೇಶ ಸ್ವಚ್ಛತೆಯಲ್ಲಿ ನಂಬರ್ ಒನ್ ಆಗುವುದರಲ್ಲಿ ಅನುಮಾನವೇ ಇಲ್ಲ.
ವರದಿ : ಪವನ್ ಕುಮಾರ್ ಕಠಾರೆ.