ರಿಪ್ಪನ್ ಪೇಟೆ: ಇಂದು ಪಟ್ಟಣದ ಗ್ರಾಮ ಪಂಚಾಯಿತಿಯ ರಾಷ್ಟ್ರಕವಿ ಕುವೆಂಪು ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್ ಎಂ ಮಂಜುನಾಥ ಗೌಡರು ರಾಜಕಾರಣದಲ್ಲಿರಿ ಇಲ್ಲವೇ ಸಹಕಾರಿ ಕ್ಷೇತ್ರದಲ್ಲಿ ಮುಂದುವರೆಯಿರಿ ಎರಡು ದೋಣಿಯ ಮೇಲೆ ಕಾಲಿಡದಂತೆ ಡಿಕೆ ಶಿವಕುಮಾರ್ ರವರು ಹೇಳಿದ್ದಾರೆ ಎಂದರು.
ಇದಕ್ಕಿಂತ ಮೊದಲೇ ನಾನು ಸಹಕಾರಿ ಕ್ಷೇತ್ರಕ್ಕೆ ರಾಜಿನಾಮೆ ನೀಡುವವನಾಗಿದ್ದೆ.ನಮ್ಮ ಅಭಿಮಾನಿಗಳು ಪಕ್ಷದ ತೀರ್ಮಾನಕ್ಕಾಗಿ ಅಲ್ಲಿ ಕೆಲಕಾಲ ಮುಂದುವರೆಯ ಬೇಕಾಯಿತು.
ಅವರು ನನ್ನನ್ನು ಚುನಾವಣೆಯಲ್ಲಿ ಸೋಲಿಸಲಿ.ಕಾನೂನುಬಾಹಿರವಾಗಿ ನನ್ನನ್ನು ಅನರ್ಹಗೊಳಿಸಿರುವುದಕ್ಕೆ ಹೈಕೋರ್ಟ್ ಮೂರು ಬಾರಿ ಚೀಮಾರಿ ಹಾಕಿದೆ. ಮಂಜುನಾಥ ಗೌಡರನ್ನು ತೆಗೆದು ಹಾಕಿರುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಹೇಳಿದೆ.
ಪ್ರಜಾಪ್ರಭುತ್ವದಲ್ಲಿ ಬಿಜೆಪಿ ಗೆ ನಂಬಿಕೆಯಿಲ್ಲ.ಹಿಂಬಾಗಿಲಿನ ರಾಜಕಾರಣದಿಂದ ಅಧಿಕಾರದಿಂದ ಇಳಿಸುವಂತಹದು ಕಾನೂನುಬಾಹಿರ ಹಾಗೂ ಪ್ರಜಾಪ್ರಭುತ್ವದ ಮಾದರಿಯಲ್ಲ.ಮುಂದಿನ ದಿನಗಳಲ್ಲಿ ಇಂತಹ ಗೊಂದಲಗಳಿಗೆ ಉತ್ತರ ಸಿಗುತ್ತದೆ ಎಂದು ಡಾ.ಆರ್ ಎಂ ಮಂಜುನಾಥ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್,ಮಾಜಿ ಜಿಪಂ ಸದಸ್ಯ ಬಂಡಿ ರಾಮಚಂದ್ರ,ಅಮೀರ್ ಹಂಜ, ಉಭೇದುಲ್ಲಾ ಶರೀಫ್,ಆಸೀಪ್,ರಮೇಶ್ ಫ್ಯಾನ್ಸಿ ಮತ್ತಿತರು ಉಪಸ್ಥಿತರಿದ್ದರು.
ವರದಿ: ದೇವರಾಜ್ ರಿಪ್ಪನ್ ಪೇಟೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..