ಆನಂದಪುರ: ಕೊರೋನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದು ಮೊದಲನೇ ದಿನ ಯಶಸ್ವಿಯಾಗಿ ನೆರವೇರಿತು.
ಸರ್ಕಾರ ಪರೀಕ್ಷೆ ನಡೆಸಬೇಕೋ ನಡೆಸಬಾರದೋ ಎಂಬ ಗೊಂದಲದಿಂದ ಅಂತೂ ದಿನಾಂಕವನ್ನು ಫಿಕ್ಸ್ ಮಾಡಿ ಪರೀಕ್ಷೆಯನ್ನು ನಡೆಸಿತು.
ಸಾಗರ ತಾಲ್ಲೂಕ್ ಹಾಗೂ ಹೊಸನಗರ ತಾಲೂಕಿನಾದ್ಯಂತ ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯು ಯಶಸ್ವಿಯಾಗಿ ನೆರವೇರಿತು.
ವಿದ್ಯಾರ್ಥಿಗಳಿಗೆ ಬೆಳಿಗ್ಗೆನೇ ವೈದ್ಯಕೀಯ ಪರೀಕ್ಷೆ ನಡೆಸಿ ಥರ್ಮಲ್ ಸ್ಕ್ಯಾನಿಂಗ್ ನೊಂದಿಗೆ ಮಾಸ್ಕ್ ವಿತರಿಸಿ ಪ್ರತಿ ಕೊಠಡಿಗೆ ಹನ್ನೆರಡು ವಿದ್ಯಾರ್ಥಿಗಳಂತೆ ಪರೀಕ್ಷೆ ಬರೆಸಲಾಯಿತು.
ವಿಶೇಷವಾಗಿ ವಿದ್ಯಾರ್ಥಿಗಳಿಗೆ ನೀರಿನ ಬಾಟಲ್ ಹಾಗೂ ಬಿಸ್ಕತ್ ಗಳನ್ನು ಸಹ ನೀಡಿ ಹಸಿವನ್ನು ಸಹ ನೀಗಿಸಲಾಯಿತು
ಪರೀಕ್ಷೆ ಬರೆದ ನಂತರ ಬಂದಂತಹ ವಿದ್ಯಾರ್ಥಿಗಳು ಸುದ್ದಿಗಾರರೊಂದಿಗೆ ಮಾತನಾಡಿ ಪರೀಕ್ಷೆಯ್ನು ಯಶಸ್ವಿಯಾಗಿ ನೆರವೇರಿತು ಯಾವುದೇ ಆತಂಕ ಭಯವಿಲ್ಲದೆ ಪರೀಕ್ಷೆಯನ್ನು ಎದುರಿಸಿದ್ದೇವೆ ಎಂದು ಮಾತನಾಡಿದರು..
ವರದಿ:ದೇವರಾಜ್ ರಿಪ್ಪನ್ ಪೇಟೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..