Headlines
GridArt 20250213 201834427.jpg

ಎಟಿಎಂ ಕಾರ್ಡ್ ಬದಲಿಸಿ ಹಣ ವಂಚಿಸುತಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ

ಎಟಿಎಂ ಕಾರ್ಡ್ ಬದಲಿಸಿ ಹಣ ವಂಚಿಸುತಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ ಸಾಗರ: ಅಕ್ಟೋಬರ್  ೨೦೨೪ರಲ್ಲಿ ಕಾರ್ಗಲ್ ಟೌನ್ ಕೆನರಾ ಬ್ಯಾಂಕ್ ಎಟಿಎಂ ನಲ್ಲಿ  ವೃದ್ದನನ್ನು ವಂಚಿಸಿ, ಅವರಿಂದ ಎಟಿಎಂ ಕಾರ್ಡ್ ನ ಪಿನ್ ಪಡೆದು ರೂ ೧,೪೯,೯೯೯ ಹಣವನ್ನು ಡ್ರಾ ಮಾಡಿಕೊಂಡ ಪ್ರಕರಣದ ಆರೋಪಿಗಳನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ರಾಜ್ಯದ ರೋಹನ್ ತಲ್ ಜಿಲ್ಲೆಯ  ಜೋಗಿಂದರ್ ಮತ್ತು  ಮುಖೇಶ್ (೪೮) ಇವರನ್ನು  ದಸ್ತಗಿರಿ ಮಾಡಿ, ಆರೋಪಿಗಳಿಂದ ಕಾರ್ಗಲ್ ಪೊಲೀಸ್ ಠಾಣೆ…

Read Full News
GridArt 20250210 163042002.jpg

ಯುವ ಕಾಂಗ್ರೆಸ್ ಸಾಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಮಹೇಂದ್ರ ಆಯ್ಕೆ

ಯುವ ಕಾಂಗ್ರೆಸ್ ಸಾಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಮಹೇಂದ್ರ ಆಯ್ಕೆ ಹೊಸನಗರ ತಾಲೂಕ್ ಅಧ್ಯಕ್ಷರಾಗಿ ವಿಜಯ್ ಮಳವಳ್ಳಿ ಆಯ್ಕೆ ಸಾಗರ ವಿಧಾನಸಭಾ ಕ್ಷೇತ್ರದ ಬಹು ನಿರೀಕ್ಷಿತ ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಇಬ್ಬರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಲವು ತಿಂಗಳಿನಿಂದ ಗೊಂದಲದ ಗೂಡಾಗಿದ್ದ ಕಾಂಗ್ರೆಸ್ ಪಕ್ಷದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಹೇಂದ್ರ ಬುಕ್ಕಿವರೆ ಆಯ್ಕೆಯಾಗಿದ್ದಾರೆ. ಹೊಸನಗರ ತಾಲೂಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ವಿಜಯ್ ಮಳವಳ್ಳಿ ಆಯ್ಕೆಯಾಗಿದ್ದಾರೆ….

Read Full News
GridArt 20250128 171946319.jpg

ಹೊಸನಗರ ಮೂಲದ ಗರ್ಭಿಣಿ ವೈದ್ಯರ ನಿರ್ಲಕ್ಶ್ಯಕ್ಕೆ ಸಾವು | ಸಾಗರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ದ ಕುಟುಂಬಸ್ಥರ ಆಕ್ರೋಶ

ಹೊಸನಗರ ಮೂಲದ ಗರ್ಭಿಣಿ ವೈದ್ಯರ ನಿರ್ಲಕ್ಶ್ಯಕ್ಕೆ ಸಾವು | ಸಾಗರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ದ ಕುಟುಂಬಸ್ಥರ ಆಕ್ರೋಶ ಹೊಸನಗರ ತಾಲೂಕಿನ ನಗರ ಮೂಲದ ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಹೊಸನಗರ ತಾಲೂಕಿನ ನಗರ ಹೋಬಳಿಯ ದುಬಾರತಟ್ಟಿ ಗ್ರಾಮದಲ್ಲಿ ಶಿಕ್ಷಕಿಯಾಗಿದ್ದ ಅಶ್ವಿನಿ ಕೆ.ಆರ್ ಎಂಬುವರು ಒಂದುವರೆ ವರ್ಷದ ಹಿಂದೆ  ಪ್ರಕಾಶ್ ಎಂಬುವರ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು.ಇವರು ಎಂಸಿಎ ಸ್ನಾತಕೋತ್ತರ ಪದವಿಯಲ್ಲಿ…

Read Full News
GridArt 20250124 194815037.jpg

ANANDAPURA | ಹೆದ್ದಾರಿ‌ ಮೇಲೆ ಆನೆಗಳ ಪುಂಡಾಟ – ಟ್ರಾಫಿಕ್ ಜಾಮ್

ANANDAPURA | ಹೆದ್ದಾರಿ‌ ಮೇಲೆ ಆನೆಗಳ ಪುಂಡಾಟ – ಟ್ರಾಫಿಕ್ ಜಾಮ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರಂ ಸಮೀಪ ಕೋಣೆ ಹೊಸೂರು ಬಳಿ ಆನೆಗಳ ಹಿಂಡು ಹೊನ್ನಾವರ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ಬಳಿ ಪ್ರತ್ಯಕ್ಷವಾಗಿದ್ದ ಪರಿಣಾಮ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹೆದ್ದಾರಿ ಮೇಲೆ ಬಂದಿರುವ ಕಾಡಾನೆಗಳ ಹಿಂಡನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು, ಅಲ್ಲದೆ ಕಾಡಾನೆಗಳನ್ನು…

Read Full News
IMG 20250116 WA0023.jpg

ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ: ಹರತಾಳು ಹಾಲಪ್ಪ

ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರಕಲ್ಪಿಸುವಂತೆ  ಕೇಂದ್ರ ಸರ್ಕಾರಕ್ಕೆ ಮನವಿ: ಹರತಾಳು ಹಾಲಪ್ಪ ಜನವರಿ 18ರಂದು ಸಾಗರದಲ್ಲಿ ಅಡಿಕೆ ಬೆಳೆಗಾರರ ಬೃಹತ್  ಸಮಾವೇಶ. ರಿಪ್ಪನ್‌ಪೇಟೆ;- ಜನವರಿ 18ರಂದು ಸಾಗರ ಸಂತೆ ಮೈದಾನದಲ್ಲಿಏರ್ಪಡಿಸಲಾಗಿದ್ದು ಆಡಿಕೆ ಬೆಳೆಗಾರರ ಸಮಾವೇಶಕ್ಕೆ ಸಾಗರ-ಹೊಸನಗರತಾಲ್ಲೂಕಿನಅಡಿಕೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಡಿಕೆ ಬೆಳೆಗಾರ ಸಮಸ್ಯೆ ಪರಿಹಾರಕ್ಕೆ ಬೆಂಬಲಿಸುವಂತೆ ಮಾಜಿ ಮಂತ್ರಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು. ಪಟ್ಟಣದ ರಾಮಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಲೆನಾಡಿನ ವ್ಯಾಪ್ತಿಯಲ್ಲಿ ಹವಾಮಾನ ವೈಪರಿತ್ಯದಿಂದಾಗಿಆಡಿಕೆ ಬೆಳೆಯಲ್ಲಿ…

Read Full News
Screenshot 20250115 150327 Chrome.jpg

ಅಯ್ಯಪ್ಪಸ್ವಾಮಿ ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು – ಓರ್ವ ಯುವತಿ ಸಾವು 08 ಜನರಿಗೆ  ಗಂಭೀರ ಗಾಯ

ಅಯ್ಯಪ್ಪಸ್ವಾಮಿ ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು – ಓರ್ವ ಯುವತಿ ಸಾವು 08 ಜನರಿಗೆ  ಗಂಭೀರ ಗಾಯ ಸಿದ್ದಾಪುರ:  ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ ದಲ್ಲಿ  ಭಕ್ತರ ಮೇಲೆ  ಕಾರು ಹರಿದ ಪರಿಣಾಮ   ಓರ್ವ ಯುವತಿ ಸಾವಿಗೀಡಾಗಿ  08 ಭಕ್ತರಿಗೆ ದಲ್ಲಿ ಗಂಭೀರ ಗಾಯ ಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ  ಸಿದ್ದಾ ಪುರದಲ್ಲಿ ನಿನ್ನೆ ಸಂಭವಿಸಿದೆ. ಕಾರು ಚಾಲಕ ರೋಶನ್ ಫರ್ನಾಂಡಿಸ್ ನನ್ನು ಪೊಲೀಸರು ಬಂಧಿಸಿದ್ದಾರೆ.ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಈತ ಜಾತ್ರೆಗೆ ನುಗ್ಗಿಸಿದ್ದಾನೆ….

Read Full News
Screenshot 20250114 190258 Chrome.jpg

ಸಂಕ್ರಾಂತಿಯ ನಂತರ ಸಚಿವ ಸಂಪುಟದಲ್ಲಿ ಬದಲಾವಣೆ – ಶಾಸಕ ಬೇಳೂರು ಗೋಪಾಲಕೃಷ್ಣ

ಸಂಕ್ರಾಂತಿಯ ನಂತರ ಸಚಿವ ಸಂಪುಟದಲ್ಲಿ ಬದಲಾವಣೆ – ಶಾಸಕ ಬೇಳೂರು ಗೋಪಾಲಕೃಷ್ಣ ಸಂಕ್ರಾಂತಿಯ ನಂತರ ಸಚಿವ ಸಂಪುಟದಲ್ಲಿ ಎರಡು ಮೂರು ಸ್ಥಾನ ಬದಲಾವಣೆಗಳು ಆಗುವ ನಿರೀಕ್ಷೆಯಿದೆ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಹೇಳಿದರು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿಗಂದೂರು ದೇವಿ ದರ್ಶನ ಮಾಡಿಕೊಂಡು ಬಂದ ಶಾಸಕರು ಮಾಧ್ಯಮಗಳ ಜೊತೆ ಮಾತನಾಡಿ, ಸಂಕ್ರಾಂತಿ ಹಬ್ಬದ ನಂತರ ಯಾವುದೇ ಬದಲಾವಣೆಗಳು ಇಲ್ಲ. ಬದಲಿಗೆ ನಾಗೇಂದ್ರ ಅವರ ಸ್ಥಾನ ಸೇರಿದಂತೆ ಎರಡು ಮೂರು ಸಚಿವರ ಸ್ಥಾನ ಬದಲಾಗುವ ನಿರೀಕ್ಷೆ ಇದೆ…

Read Full News
N64645148417361722884912002c788420d18d492030a4dc8e0700ca50a31d7881a7b6e575a3d769ba8a54f.jpg

ಹಿರಿಯ ಸಾಹಿತಿ ನಾ ಡಿಸೋಜಾ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಶಾಸಕ ಬೇಳೂರು ಗೋಪಾಲಕೃಷ್ಣ

ಹಿರಿಯ ಸಾಹಿತಿ ನಾ ಡಿಸೋಜಾ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಶಾಸಕ ಬೇಳೂರು ಗೋಪಾಲಕೃಷ್ಣ ಭಾನುವಾರ ಅನಾರೋಗ್ಯದಿಂದ ನಿಧನರಾದಂತ ಹಿರಿಯ ಸಾಹಿತಿ ನಾ.ಡಿಸೋಜ(87) ಅವರ ಪಾರ್ಥೀವ ಶರೀರವನ್ನು ಸಾಗರಕ್ಕೆ ಮಂಗಳೂರಿನಿಂದ ತರಲಾಗಿತ್ತು. ಇಂತಹ ನಾ.ಡಿಸೋಜ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪಡೆದರು. ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ನಗರದ ಸ್ವಗೃಹಕ್ಕೆ ನಿನ್ನೆ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ನಿಧನರಾದಂತ ಹಿರಿಯ ಸಾಹಿತಿ ನಾ.ಡಿಸೋಜಾ ಅವರ ಪಾರ್ಥೀವ ಶರೀರವನ್ನು ತರಲಾಗಿತ್ತು….

Read Full News
GridArt 20250105 212426132.jpg

ನಾಡಿನ ಹಿರಿಯ ಸಾಹಿತಿ ನಾ ಡಿಸೋಜ ನಿಧನ

ನಾಡಿನ ಹಿರಿಯ ಸಾಹಿತಿ ನಾ ಡಿಸೋಜ ನಿಧನ ಸಾಗರ | ಹಿರಿಯ ಸಾಹಿತಿ ನಾ.ಡಿಸೋಜ ಅವರ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಾ.ಡಿಸೋಜ ಅವರ ಪುತ್ರ ನವೀನ್‌ ಡಿಸೋಜ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಂದೆಯ ನಿಧನದ ಸುದ್ದಿಯನ್ನು ಪ್ರಕಟಿಸಿದ್ದಾರೆ. ಮಂಗಳೂರಿನಿಂದ ನಾಳೆ ಮೂರುಗಂಟೆಗೆ ಸಾಗರಕ್ಕೆ ನಾ ಡಿಸೋಜ ಅವರ ಪಾರ್ಥೀವ ಶರೀರ ತಲುಪಲಿದೆ. ಸಾಗರದ ನಗರಸಭೆ ಆವರಣದಲ್ಲಿರುವಂತ ಗಾಂಧಿ ಮೈದಾನದಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ…

Read Full News
GridArt 20241227 152235315.jpg

ಅಕ್ರಮ ಬಂಧನದಲ್ಲಿರಿಸಿದ್ದ ಮುಶಿಯಾ (ಕಪ್ಪು ಮೂತಿಯ ಬುಕ್ಕ) ರಕ್ಷಣೆ – ಓರ್ವ ಬಂಧನ

ಅಕ್ರಮ ಬಂಧನದಲ್ಲಿರಿಸಿದ್ದ ಮುಶಿಯಾ (ಕಪ್ಪು ಮೂತಿಯ ಬುಕ್ಕ) ರಕ್ಷಣೆ – ಓರ್ವ ಬಂಧನ ಅಕ್ರಮವಾಗಿ ಬಂಧನದಲ್ಲಿರಿಸಿದ್ದ ಮುಶಿಯಾ ( ಗ್ರೇ ಲಂಗೂರು) ನನ್ನು ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ಪತ್ತೆ ಹಚ್ವಿ ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಸಾಗರ ತಾಲೂಕಿನ ಗಡಿಕಟ್ಟೆ ಬಳಿಯಲ್ಲಿ ನಡೆದಿದೆ. ಅಕ್ರಮವಾಗಿ ಕಾಡಿನಿಂದ ಸೆರೆ ಹಿಡಿದು ಬಂಧನದಲ್ಲಿ ಇರಿಸಿದ್ದ  ಗ್ರೇ ಲಂಗೂರ್ (Semnopythecus Entellus) ಶೆಡ್ಯೂಲ್ ll ಸಸ್ತನಿ ಯನ್ನು ಆರೋಪಿಯ ಬಂಧನದಿಂದ ರಕ್ಷಿಸಿ, ವನ್ಯಜೀವಿ ಪ್ರಕರಣ ದಾಖಲಿಸಿ ಓರ್ವ ಆರೋಪಿಯನ್ನು…

Read Full News
GridArt 20241215 174253027.jpg

ಮಂಗಳೂರಿನಿಂದ ಜೋಗಕ್ಕೆ ತೆರಳುತಿದ್ದ ಪ್ರವಾಸಿ ಬಸ್ ಮಗುಚಿ ಹಲವರಿಗೆ ಗಂಭೀರ ಗಾಯ – ಮಣಿಪಾಲ್ , ಮಂಗಳೂರಿಗೆ ಗಾಯಾಳುಗಳ ರವಾನೆ

ಮಂಗಳೂರಿನಿಂದ ಜೋಗಕ್ಕೆ ತೆರಳುತಿದ್ದ ಪ್ರವಾಸಿ ಬಸ್ ಮಗುಚಿ ಹಲವರಿಗೆ ಗಂಭೀರ ಗಾಯ – ಮಣಿಪಾಲ್ , ಮಂಗಳೂರಿಗೆ ಗಾಯಾಳುಗಳ ರವಾನೆ ಶಿವಮೊಗ್ಗ : ಮಂಗಳೂರಿನಿಂದ ಜೋಗಕ್ಕೆ ಹೊರಟಿದ್ದ ಖಾಸಗಿ ಬಸ್ ಸಾಗರದ ಮುಪ್ಪಾನೆ ಬಳಿ ಪಲ್ಟಿಯಾಗಿ ಬಸ್ ನಲ್ಲಿದ್ದ 27 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಮಂಗಳೂರಿನಿಂದ ಭಟ್ಕಳ ಮತ್ತು ಜೋಗಕ್ಕೆ ಬರುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಸಾಗರದ ಮುಪ್ಪಾನೆ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪ್ರಯಾಣಿಕರೆಲ್ಲಾರೂ ಮಂಗಳೂರು ಮೂಲದವರೆಂದು ತಿಳಿದುಬಂದಿದ್ದು ಬಸ್…

Read Full News
GridArt 20241127 103150640.jpg

ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಸಾಗರ : ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ನೀಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಳಿಕೊಪ್ಪ ಗ್ರಾಮದ ಹಾನಂಬಿಯಲ್ಲಿ ನಡೆದಿದೆ. ಜನ್ನತ್ ನಗರದ ಪ್ರಕಾಶ್ ಶೆಟ್ಟಿ(36) ಮೃತ ದುರ್ಧೈವಿಯಾಗಿದ್ದಾನೆ. ಅರಳೀಕೊಪ್ಪ ಗ್ರಾಮದ ಹಾನಂಬಿ ಹೊಳೆಯ ಮೇಲ್ಭಾಗ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಯುವಕನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಪ್ರಕಾಶ್ ಶೆಟ್ಟಿ ಆತ್ಮಹತ್ಯೆಗೆ…

Read Full News
Screenshot 20241103 191657 Chrome.jpg

ಕರವೇ ತಾಲೂಕು ಅಧ್ಯಕ್ಷನ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ | Attack by Forest Officers on Karave Taluk President’s House

ಕರವೇ ತಾಲೂಕು ಅಧ್ಯಕ್ಷನ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಯರಾಂ ಸೂರನಗದ್ದೆ ಅವರ ಮನೆ ಮೇಲೆ ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ಸೂರನಗದ್ದೆ ಗ್ರಾಮದಲ್ಲಿ ವಾಸವಿರುವ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಯರಾಮ್ ಮನೆ ಮೇಲೆ ದಾಳಿ ಮಾಡಿದಾಗ ಜಿಂಕೆ ಬೇಟಿಯಾಡಿ ಮಾಂಸವನ್ನು ಸಾಂಬಾರು ಮಾಡಿ ಊಟ ಮಾಡುತ್ತಿದ್ದರು. ಜಿಂಕೆಯನ್ನು…

Read Full News
GridArt 20241111 204848533.jpg

ಸಾಗರದ ಪತ್ರಕರ್ತನ ಮೇಲಿನ ಸುಮೋಟೋ ಕೇಸ್ ಹಿಂಪಡಿಯುವಂತೆ ಡಿವೈಎಸ್ಪಿ ಮೂಲಕ ಗೃಹ ಸಚಿವರಿಗೆ ಮನವಿ

ಸಾಗರದ ಪತ್ರಕರ್ತನ ಮೇಲಿನ ಸುಮೋಟೋ ಕೇಸ್ ಹಿಂಪಡಿಯುವಂತೆ ಡಿವೈಎಸ್ಪಿ ಮೂಲಕ ಗೃಹ ಸಚಿವರಿಗೆ ಮನವಿ ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕನ್ನಡ ನ್ಯೂಸ್ ಇ-ಪೇಪರ್ ಸಂಪಾದಕರ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಸಾಗರ ತಾಲ್ಲೂಕು ಶಾಖೆಯಿಂದ ಡಿವೈಎಸ್ಪಿ ಮೂಲಕ ಗೃಹಸಚಿವರಿಗೆ ಮನವಿ ಮಾಡಲಾಯಿತು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರನ್ನು ಭೇಟಿ ಮಾಡಿದಂತ ಸಾಗರ ತಾಲ್ಲೂಕು ಕರ್ನಾಟಕ…

Read Full News
GridArt 20241025 194528019.jpg

ರಸ್ತೆ ಅಪಘಾತ – ಶಾಲಾ ಶಿಕ್ಷಕಿ ಸಾವು

ರಸ್ತೆ ಅಪಘಾತ – ಶಾಲಾ ಶಿಕ್ಷಕಿ ಸಾವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿರವಂತೆಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಕುಂತಲಾ (29),ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಶುಕ್ರವಾರ (ಅ.25) ಬೆಳಗ್ಗೆ ಮೃತಪಟ್ಟಿರುವ ಘಟನೆ ನಡೆದಿದೆ. ಶಿವಮೊಗ್ಗದಲ್ಲಿ ನಡೆಯುತ್ತಿದ್ದ ತರಬೇತಿಗೆ ಹೊರಟಿದ್ದ ಅವರು, ಚನ್ನಗಿರಿಯ ಮಾವಿನಕಟ್ಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು.ಈ ವೇಳೆ ಲಾರಿಯೊಂದು ಶಕುಂತಲಾ ಅವರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಶಿಕ್ಷಕಿ ಸಾವನ್ನಪ್ಪಿದ್ದಾರೆ ಎಂದು…

Read Full News
GridArt 20241025 175920593.jpg

ANANDAPURA | ಬೈಕ್ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು

ANANDAPURA | ಬೈಕ್ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು TVS ಎಕ್ಸ್‌ಎಲ್‌ ಮತ್ತು ಅಶೋಕ ಲೇಲ್ಯಾಂಡ್‌ ಗೂಡ್ಸ್‌ ವಾಹನದ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಆನಂದಪುರ ವ್ಯಾಪ್ತಿಯ ಗೌತಮಪುರದಲ್ಲಿ ಸಂಭವಿಸಿದೆ. ಮೃತರನ್ನು ವಾಸಪ್ಪ (70) ಮತ್ತು ಸತೀಶ್‌ (40) ಎಂದು ಗುರುತಿಸಲಾಗಿದೆ. ಬೆಳಂದೂರು ಗ್ರಾಮದಿಂದ ಆನಂದಪುರದ ಕಡೆ ತೆರಳುತ್ತಿದ್ದ ಟಿವಿಎಸ್ ಎಕ್ಸೆಲ್ ಬೈಕ್ ಹಾಗೂ ಆನಂದಪುರದಿಂದ ತ್ಯಾಗರ್ತಿ ಕಡೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ…

Read Full News
GridArt 20241001 213013909.jpg

ಶಾಲಾ ಮಕ್ಕಳಿಗೆ ಆರು ದಿನ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ

ಶಾಲಾ ಮಕ್ಕಳಿಗೆ ಆರು ದಿನ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ಸಾಗರ : ನಮ್ಮ ಶಾಲೆ ನಮ್ಮ ಜವಾಬ್ದಾರಿ ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಿದೆ. ಈ ಯೋಜನೆಯಡಿ 500 ರೂಪಾಯಿಯಿಂದ 6.50 ಕೋಟಿ ರೂ. ವರೆಗೆ ಶಾಲಾಭಿವೃದ್ಧಿಗೆ ದೇಣಿಗೆ ಬಂದಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಆ.1ರ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್‌ಜೀ ಫೌಂಡೇಶನ್‌ನಿಂದ ನೀಡಲಾದ ಅನುದಾನದಲ್ಲಿ ಶಾಲಾ…

Read Full News
GridArt 20240925 150244893.jpg

ಬೈಕ್ ಅಪಘಾತದಲ್ಲಿ ಯುವಕ ಸಾವು

ಬೈಕ್ ಅಪಘಾತದಲ್ಲಿ ಯುವಕ ಸಾವು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಲ್ಲಿ ಸಂಭವಿಸಿದ ಅಪಘಾತದಲ್ಲಿ 22 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾಗರ ತಾಲ್ಲೂಕು ಸಾಗರ ಟೌನ್‌ ಗಾಂಧಿನಗರ ನಿವಾಸಿ ಸಮೀರ್‌ ಎಂಬುವವರು ನಿನ್ನೆ ದಿನ ಅಣಲೇಕೊಪ್ಪದಲ್ಲಿರುವ ಅವರ ಅಕ್ಕನ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸಮೀರ್‌ ಗೆ ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯ ಸಮೀಪ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣದ ಆಂಬುಲೆನ್ಸ್‌ ಮೂಲಕ ಸಮೀರ್‌ರವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ…

Read Full News
Screenshot 20240916 152252 Chrome.jpg

ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿ ಮೇಲೆ ದಾಳಿ – ಓರ್ವ ವಶಕ್ಕೆ

ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿ ಮೇಲೆ ದಾಳಿ – ಅಕ್ರಮ ಮದ್ಯ ವಶಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮರಸ ಗ್ರಾಮದಲ್ಲಿ ಅಂಗಡಿಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ, ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಬಕಾರಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ.ಮರಸ ಗ್ರಾಮದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಂತ ಮಾಹಿತಿ ಆಧರಿಸಿ ಅಬಕಾರಿ ಇನ್ಸ್ ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ….

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.