
ತೀರ್ಥಹಳ್ಳಿಯ ತಹಶೀಲ್ದಾರ್ ಹೃದಯಘಾತದಿಂದ ನಿಧನ!
ತೀರ್ಥಹಳ್ಳಿಯ ತಹಶೀಲ್ದಾರ್ ಹೃದಯಘಾತದಿಂದ ನಿಧನ! ತೀರ್ಥಹಳ್ಳಿ : ತಾಲೂಕು ದಂಡಾಧಿಕಾರಿಗಳಾದ ಜಕ್ಕಣ್ಣ ಗೌಡರ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇವರು ನ್ಯಾಯಾಲಯದ ಕೆಲಸದ ನಿಮಿತ್ತವಾಗಿ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನ ನರ್ತಕಿ ಚಿತ್ರಮಂದಿರ ಎದುರು ಇರುವ ವೈಭವ ಲಾಡ್ಜ್ ನಲ್ಲಿ ತಂಗಿದ್ದರು. ಬುಧವಾರ ರಾತ್ರಿ 10 ಗಂಟೆಯ ಸಮಯದಲ್ಲಿ ತೀವ್ರ ತರದ ಎದೆ ನೋವು ಕಂಡು ಬಂದಿದ್ದು ಹೃದಯಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಹೈಕೋರ್ಟ್ ಕೆಲಸದ ನಿಮಿತ್ತ…