January 11, 2026

ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವು – ವೈದ್ಯರ ನಿರ್ಲಕ್ಷ್ಯವೆಂದು ಕುಟುಂಬಸ್ಥರ ಆರೋಪ

ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವು – ವೈದ್ಯರ ನಿರ್ಲಕ್ಷ್ಯವೆಂದು ಕುಟುಂಬಸ್ಥರ ಆರೋಪ

ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಣಂತಿಯೊಬ್ಬರು ಸಾವನ್ನಪ್ಪಿದ್ದು, ಇದು ವೈದ್ಯರ ನಿರ್ಲಕ್ಷ ಎಂದು ಕುಟುಂಬ ಆರೋಪಿಸಿದೆ. ಆದರೆ ಈ ಬಗ್ಗೆ  ಸ್ಪಷ್ಟೀಕರಣ ನೀಡಿದ ಡಿಹೆಚ್ ಒ ಡಾ.ನಟರಾಜ್ ಇಲ್ಲಿ ವೈದ್ಯರ ನಿರ್ಲಕ್ಷ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ 2024 ರಲ್ಲಿ ಮದುವೆಯಾಗಿದ್ದ ಸೀಗೆಹಳ್ಳದ ನಿವಾಸಿ ಮಂಜುಳ(25) ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಹೆರಿಗೆ ಹಿನ್ನಲೆಯಲ್ಲಿ ದಾಖಲಾಗಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ ಬಾಣಂತಿಗೆ ಆರೋಗ್ಯದಲ್ಲಿ ಉಲ್ಬಣವಾಗಿದೆ. ಲೀವರ್, ಕಿಡ್ನಿ ವೈಫಲ್ಯತೆ ಕಂಡು ಇಂದು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಜೆಸಿ ಆಸ್ಪತ್ರೆಯಲ್ಲಿ ಫೆ.9 ರಂದು ದಾಖಲಾಗಿದ್ದ ಮಂಜುಳರಿಗೆ ಅಂದೇ ಹೆರಿಗೆಯಾಗಿ ಗಂಡು ಮಗಿವಿಗೆ ಜನ್ಮ ನೀಡಿದ್ದರು.  ಫೆ.14 ರವರೆಗೆ ಅಲ್ಲೇ ಚಿಕಿತ್ಸೆ ನೀಡಲಾಗಿತ್ತು. ಫೆ.14ರಿಂದ  ನಂತರ ಇವತ್ತಿನ ವರೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ತಂದು ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಬಾಣಂತಿ ಸಾವನ್ನಪ್ಪಿದ್ದಾರೆ. ಈ ಸಾವಿಗೆ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ ಎಂಬುದು ಕುಟುಂಬಸ್ಥರ ಆರೋಪಿಸಿದೆ.

ಆದರೆ ಈ ಬಗ್ಗೆ ಸ್ಪಷ್ಠೀಕರಣ ನೀಡಿದ ಡಿಹೆಚ್ ಒ ಡಾ.ನಟರಾಜ್  ವೈದ್ಯರ ನಿರ್ಲಕ್ಷವನ್ನ ಅಲ್ಲಗೆಳೆದಿದ್ದಾರೆ. ಮಹಿಳೆಗೆ ಹೆರಿಗೆ ವೇಳೆ ಗರ್ಭಕೋಶ ಹಿಗ್ಗದೆ ಇರುವ ಕಾರಣ ಸಾವಾಗಿದೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ಯಾವುದೇ ಕಾರಣಕ್ಕೂ ವೈದ್ಯರ ನಿರ್ಲಕ್ಷ ತೋರಿಲ್ಲ. ಕೊನೆ ಹಂತದ ವರೆಗೂ ಮಹಿಳೆಯನ್ನ ಬಜಾವ್ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರ ಸಾವು ಈ ವರ್ಷದಲ್ಲಿ ಮೂರನೆಯದಾಗಿದೆ. ಜ.04 ರಂದು ಕವಿತ ಎಂಬ ಮಹಿಳೆ ಮೆಗ್ಗಾನ್ ನಲ್ಲಿ ಸಾವಾಗಿತ್ತು. ಜ.28 ರಂದು ಹೊಸನಗರದ ದುಬಾರತಟ್ಟಿಯ ಅಶ್ವಿನಿ ಎಂಬುವರ ಗರ್ಭಿಣಿ ಸಾವಾಗಿತ್ತು, ಇಂದು ಮಂಜುಳರವರ ಸಾವಾಗಿದೆ.

About The Author

Leave a Reply

Your email address will not be published. Required fields are marked *