Headlines

ಪೆಟ್ರೋಲ್‌ ಬಂಕ್‌ ಪಾಲುದಾರಿಕೆ ಕೊಡುವುದಾಗಿ 17 ಜನರಿಗೆ ಮೋಸ!? – ತೀರ್ಥಹಳ್ಳಿಯ ಮಹಿಳೆ ವಿರುದ್ಧ ಕೇಸ್ ದಾಖಲು !

ಪೆಟ್ರೋಲ್‌ ಬಂಕ್‌ ಪಾಲುದಾರಿಕೆ ಕೊಡುವುದಾಗಿ 17 ಜನರಿಗೆ ಮೋಸ!? – ತೀರ್ಥಹಳ್ಳಿಯ ಮಹಿಳೆ ವಿರುದ್ಧ ಕೇಸ್ ದಾಖಲು !

ತೀರ್ಥಹಳ್ಳಿ : ಪೆಟ್ರೋಲ್‌ ಬಂಕ್‌ ಪಾರ್ಟ್ನರ್‌ಶಿಪ್‌ ಕೊಡುವುದಾಗಿ ಹೇಳಿ ಕೋಟಿ, ಕೋಟಿ ಲೂಟಿ ಮಾಡಿದ ಆರೋಪ ತೀರ್ಥಹಳ್ಳಿಯ ಆರತಿ ಮತ್ತು ಆಕೆಯ ಪತಿಯ ವಿರುದ್ಧ ಕೇಳಿ ಬಂದಿದೆ.ತೀರ್ಥಹಳ್ಳಿಯ ಗೋಮತಿ ಪೆಟ್ರೋಲ್ ಬಂಕ್ ಓನರ್ ಆರತಿ ಮೇಲೆ ದೂರು ದಾಖಲಾಗಿದೆ.

ಗೋಮತಿ ಪೆಟ್ರೋಲ್ ಬಂಕ್ ಓನರ್ ಆಗಿರುವ ಆರತಿ ಅವರು ಬಂಕ್ ತೋರಿಸಿ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ಪೆಟ್ರೋಲ್ ಬಂಕ್​​ನಲ್ಲಿ ಪಾರ್ಟ್ನರ್​ಶಿಪ್ ಕೊಡುತ್ತೇನೆಂದು ನಂಬಿಸಿ 4 ಲಕ್ಷದಿಂದ 50 ಲಕ್ಷ ರೂಪಾಯಿ ತನಕ ವಂಚಿಸಿರುವ ಆರೋಪ ಕೇಳಿ ಬಂದಿದೆ.

ತೀರ್ಥಹಳ್ಳಿ ತಾ. ಲಿಂಗಾಪುರ ಮುಡುಬ ಮೂಲದ ಆರತಿ ವಿಶಾಲ್ ಮತ್ತು ಆಕೆಯ ಪತಿ ಕಳೆದ 2 ವರ್ಷಗಳಿಂದ ತೀರ್ಥಹಳ್ಳಿ & ಶಿವಮೊಗ್ಗದಲ್ಲಿ 17 ಜನರಿಗೆ ವಂಚಿಸಿದ್ದಾರೆ. ಬ್ಯಾಂಕ್ ಖಾತೆ ಮೂಲಕ ಹಣ ಸ್ವೀಕರಿಸಿ ವಂಚಿಸಿದ್ದಾರೆ. ಪಡೆದ ಹಣಕ್ಕೆ ಚೆಕ್ ಮತ್ತಿತರ ದಾಖಲೆಗಳನ್ನು ನೀಡಿದ್ದಾರೆ. ಹಣ ಪಾವತಿ ಸಂಬಂಧ ವಿಚಾರಿಸಿದವರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಜನರು ತಾವು ಹಣ ಕೊಟ್ಟಿದ್ದಲ್ಲದೆ, ತಮ್ಮ ಸ್ನೇಹಿತರಿಂದಲೂ ಹಣ ಕೊಡಿಸಿದ್ದ್ದು, ಮರುಪಾವತಿಗೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಂಚನೆಗೆ ಒಳಗಾದವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇದೀಗ ಆರತಿ ಮತ್ತು ಪತಿಯ ವಿರುದ್ಧ ವಿವಿಧ ಠಾಣೆಗಳಲ್ಲಿ FIR ದಾಖಲಾಗಿದೆ.

Leave a Reply

Your email address will not be published. Required fields are marked *