Headlines

ಕುಮುಟಾದ ಬಾಡ ಬೀಚ್ ನಲ್ಲಿ ಶಿವಮೊಗ್ಗದ ಗುಪ್ತ ಆಟೋಮೊಬೈಲ್ ನ ಪ್ರಶಾಂತ್ ಗುಪ್ತ ಸಾವು|kumuta

ಕುಮುಟಾದ ಬಾಡ ಬೀಚ್ ನಲ್ಲಿ ಶಿವಮೊಗ್ಗದ ಗುಪ್ತ ಆಟೋಮೊಬೈಲ್ ನ ಪ್ರಶಾಂತ್ ಗುಪ್ತ ಸಾವು ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಪ್ರವಾಸಕ್ಕೆಂದು ಕುಮಟಾಕ್ಕೆ ತೆರಳಿದ್ದವರು, ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬಗ್ಗೆ ವರದಿಯಾಗಿದೆ.   ಶಿವಮೊಗ್ಗ ನಗರದ ರಾಯಲ್ ಆರ್ಕಿಡ್ ಹಿಂಭಾಗದಲ್ಲಿರುವ ಗುಪ್ತಾ ಆಟೋಮೊಬೈಲ್​​ ನ ಪಾಲುದಾರರಾದ ಪ್ರಶಾಂತ್ ಗುಪ್ತ  ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಶಿವಮೊಗ್ಗದಿಂದ ಇವರು 11 ಜನರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಆಯುಧ ಪೂಜೆಯ ದಿನ ಕುಮಟಾದ ಬಾಡ ಕಡಲ ತೀರದಲ್ಲಿ ‌ಸಮುದ್ರಕ್ಕೆ ಇಳಿದಿದ್ಧಾರೆ. ಈ ವೇಳೆ ಸಮುದ್ರದ ಅಲೆಗಳಿಗೆ…

Read More

ಬೆಂಗಳೂರಿನಲ್ಲಿ ಮಳೆಯಿಂದ ಕಾರುಗಳಿಗೆ ಹಾನಿ: ಅರ್ಧ ರೇಟ್ ಗೆ ಕಾರು ಮಾರಾಟ ಮಾಡುತ್ತಿರುವ ಮಾಲೀಕರು

ಬೆಂಗಳೂರಿನಲ್ಲಿ ಮಳೆಯಿಂದ ಕಾರುಗಳಿಗೆ ಹಾನಿ: ಅರ್ಧ ರೇಟ್ ಗೆ ಕಾರು ಮಾರಾಟ ಮಾಡುತ್ತಿರುವ ಮಾಲೀಕರು ಗಳೂರು, ಮೇ 28: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಎರಡು ದಿನಗಳ ಹಿಂದೆ ಸುರಿದ ಮಳೆ ಮಹಾನಗರ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿತ್ತು. ರಸ್ತೆಗಳ ಮೇಲೆ ನೀರು ನಿಂತಿತ್ತು. ವಾಹನ ಸವಾರರು ಪರದಾಡಿದ್ದರು. ಮನೆಯೊಳಗೆ ನೀರು ನುಗ್ಗಿತ್ತು. ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್​ ಸೇರಿದಂತೆ ಹಲವು…

Read More

ಮಾರ್ಚ್ 6ರಿಂದ ಬಾಲ್ಯ ವಿವಾಹ ನಿಷೇಧ ಅಭಿಯಾನ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

 ಬಾಲ್ಯ ವಿವಾಹ ನಿಷೇಧ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾರ್ಚ್ 6ರಿಂದ ಜಿಲ್ಲೆಯಾದ್ಯಂತ `ವೀಡಿಯೋ ಆನ್ ವೀಲ್ಸ್’ ಅಭಿಯಾನ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ತಿಳಿಸಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಭಿಯಾನದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು. ಅಭಿಯಾನ ಜಿಲ್ಲೆಯ 41 ಹೋಬಳಿಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಂಚಾರಿ ವಾಹನದ ಮೂಲಕ ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ವಿಡಿಯೋಗಳನ್ನು ಪ್ರದರ್ಶಿಸಲಾಗುವುದು. ಎಲ್ಲಾ ಹೋಬಳಿ ಹಂತಗಳಲ್ಲಿ ಅಭಿಯಾನದ…

Read More

ಹೊಸನಗರ ತಾಲ್ಲೂಕಿನ ಅತ್ಯುತ್ತಮ 20 ಶಿಕ್ಷಕರ ಪಟ್ಟಿ ಪ್ರಕಟ

ಹೊಸನಗರ ತಾಲ್ಲೂಕಿನ ಅತ್ಯುತ್ತಮ 20 ಶಿಕ್ಷಕರ ಪಟ್ಟಿ ಪ್ರಕಟ ಹೊಸನಗರ ತಾಲ್ಲೂಕಿನ ಅತ್ಯುತ್ತಮ ಶಿಕ್ಷಕರ ಮತ್ತು ಶಿಕ್ಷಕಿಯರ ಪಟ್ಟಿ ಪ್ರಕಟಗೊಂಡಿದೆ. ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಬ್ಲಾಕ್‌ ಸಮನ್ವಯ ಯೋಜನಾಧಿಕಾರಿಗಳ ಕಚೇರಿಯು ಆಯ್ಕೆಯಾದ ಶಿಕ್ಷಕರ ಹೆಸರುಗಳನ್ನು ಬಹಿರಂಗಪಡಿಸಿದ್ದು, ಸೆಪ್ಟೆಂಬರ್ 6ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಯ್ಕೆಯಾದ ಶಿಕ್ಷಕರು: ಮೋಹಿನಿ ಕೆ.ವಿ – ಸ.ಹಿ.ಪ್ರಾ.ಶಾಲೆ ಕೋಟೆಶಿರೂರು, ಸಂಪೆಕಟ್ಟೆ ಗಾಯತ್ರಿ ಶೆಣೈ – ಸ.ಕಿ.ಪ್ರಾ.ಶಾಲೆ ಹೊಸೂರು, ನಗರ ಚಂದ್ರಶೇಖರ ಹೆಚ್ – ಸ.ಕಿ.ಪ್ರಾ.ಶಾಲೆ ಕೊಡಸೆ,…

Read More

ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ಜನ ಪ್ರತಿನಿಧಿಗಳಾದ ನಮ್ಮ ಕರ್ತವ್ಯ: ಬಿ ವೈ ರಾಘವೇಂದ್ರ

ಶಿವಮೊಗ್ಗ : ಜಿಲ್ಲೆಯ ವಿವಿಧ ಹಳೆಯ ಕೈಗಾರಿಕೆಗಳು ಕೆಲವು ಕಾರಣಕ್ಕೆ ಮುಚ್ಚುವ ಸ್ಥಿತಿ ಬಂದಿದೆ ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜಿಲ್ಲೆಯಿಂದ ಕೈಗಾರಿಕಾ ಉದ್ಯಮಿಗಳ ಸಹಕಾರದಿಂದ ಉತ್ಪನ್ನಗಳು ತಲುಪುತ್ತಿದೆ, ಇಲ್ಲಿನ ಉದ್ಯಮಿಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ಜನ ಪ್ರತಿನಿಧಿಗಳಾದ ನಮ್ಮ ಕರ್ತವ್ಯವಾಗಿದೆ ಆದ್ದರಿಂದ ನಮ್ಮ ಸೇವೆ ಮತ್ತು ಕೆಲಸಗಳು ಉತ್ತಮ ಗುಣಮಟ್ಟದಾಗಿರಲಿ ಎಂದು ಸಂಸದರಾದ ಬಿ.ವೈ ರಾಘವೇಂದ್ರ ಅವರು ತಿಳಿಸಿದರು. ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ…

Read More

Ripponpete | ವಯನಾಡು ಜಲದುರಂತ – ಕ್ರೀಡಾ ವೇತನವನ್ನು ದೇಣಿಗೆಯಾಗಿ ನೀಡಿದ ರಾಷ್ಟ್ರೀಯ ಕಬ್ಬಡಿ ಆಟಗಾರ್ತಿ ರಿಪ್ಪನ್‌ಪೇಟೆಯ ಶ್ರೇಯಾ

Ripponpete | ವಯನಾಡು ಜಲದುರಂತ – ಕ್ರೀಡಾ ವೇತನವನ್ನು ದೇಣಿಗೆಯಾಗಿ ನೀಡಿದ ರಾಷ್ಟ್ರೀಯ ಕಬ್ಬಡಿ ಆಟಗಾರ್ತಿ ರಿಪ್ಪನ್‌ಪೇಟೆಯ ಶ್ರೇಯಾ | ಕೇರಳದ ವಯನಾಡಿನಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಭೂಕುಸಿತ ಉಂಟಾಗಿದೆ. ಹಳ್ಳಿಗಳಿಗೆ ಹಳ್ಳಿಗಳೇ ನಾಮಾವಶೇಷವಾಗಿವೆ! ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಣ್ಣಿನಡಿಯಲ್ಲಿ ಇನ್ನೂ ಅದೆಷ್ಟು ಮಂದಿ ಹುದುಗಿದ್ದಾರೋ, ಗೊತ್ತಿಲ್ಲ. ಎಡೆಬಿಡದೇ ಧಾರಕಾರವಾಗಿ ಸುರಿಯುತ್ತಿರುವ ಮಳೆಯಲ್ಲೇ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಮಗ್ನವಾಗಿವೆ.ಹಲವಾರು ಉದ್ಯಮಿಗಳು ಈಗಾಗಲೇ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ರಾಮಕೃಷ್ಣ…

Read More

395 ಕೋಟಿ ರೂ. ವೆಚ್ಚದಲ್ಲಿ ಚಕ್ರಾ ಡ್ಯಾಂ ನಿಂದ ಸೂಡೂರುವರೆಗೆ ಶಾಶ್ವತ ಕುಡಿಯುವ ನೀರು ಹರಿಸುವ ಬಗ್ಗೆ ಚಿಂತನೆ : ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ : ಚಕ್ರಾ ಡ್ಯಾಂ ನಿಂದ ಸೂಡೂರು ಗ್ರಾಮದವರೆಗೂ ಬರುವ ಅನೇಕ ಹಳ್ಳಿಗಳಿಗೆ ಕುಡಿಯುವ ನೀರು ಹರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಅವರು ಕೆರೆಹಳ್ಳಿ ಹೋಬಳಿಯಲ್ಲಿ ಮಳೆಹಾನಿ ವೀಕ್ಷಿಸಿ ನಂತರ ಮಾದ್ಯಮದವರೊಂದಿಗೆ ಮಾತನಾಡಿ ಈಗಾಗಲೇ ಸಾಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶರಾವತಿ ನದಿಯಿಂದ ಮತ್ತು ಅಂಬ್ಲಿಗೊಳ ಡ್ಯಾಂ ನಿಂದ ನೂರಾರು ಹಳ್ಳಿಗಳ ರೈತ ನಾಗರೀಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಹೆಚ್ಚು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ 9 ಕಾಲೇಜು 4 ಶಾಲೆಗಳಿಗೆ ನಾಳೆ ರಜೆ ಘೋಷಣೆ

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಹೆಚ್ಚಳದ ಹಿನ್ನಲೆಯಲ್ಲಿ ನಾಳೆ ಜಿಲ್ಲೆಯ ಒಂಬತ್ತು ಕಾಲೇಜುಗಳು ಹಾಗೂ ನಾಲ್ಕು ಶಾಲೆಗಳಿ ರಜೆ ಘೋಷಿಸಲಾಗಿದೆ. ಮಕ್ಕಳಲ್ಲಿ ಕೊರೋನ ಹೆಚ್ಚಳವಾದರೆ ಕ್ಲಸ್ಟರ್ ರೀತಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊರೋನ ಪ್ರಗತಿ ಪರಿಶೀಲನ ಸಭೆಯಲ್ಲಿ ಸಚಿವ ಈಶ್ವರಪ್ಪ ಇಂದು ಸಂಜೆ ಯಾವ ಯಾವ ಶಾಲೆಗಳು ನಾಳೆ ರಜೆ ಘೋಷಿಸಲಿವೆ ಎಂದು ತಿಳಿಸಿದ್ದರು. ಅದರಂತೆ ರಾಗಿಗುಡ್ಡದ ಅಂಬೇಡ್ಕರ್ ವಸತಿ ಶಾಲೆ, ಮುರಾರ್ಜಿ ಶಾಲೆ, ಮುರಾರ್ಜಿ ಕಾಲೇಜು, ತೀರ್ಥಹಳ್ಳಿಯ ಬಸವಾನಿ,…

Read More

ಝಕಿಯಾ ಕೊಲೆ ಪ್ರಕರಣದಲ್ಲಿ ಶಾಕಿಂಗ್ ಟ್ವಿಸ್ಟ್: ಮದುವೆಯಾಗಬೇಕಿದ್ದವನೇ ಹಂತಕ!

Dharwad rural police solved the Zakia Mulla murder case. A shocking twist reveals the man she was supposed to marry strangled her following a dispute over marriage talks. ಧಾರವಾಡ (ಜ.22): ನಗರದ ಹೊರವಲಯದ ಮನಸೂರು ರಸ್ತೆಯಲ್ಲಿರುವ ಡೈರಿಯೊಂದರ ಬಳಿ ಪತ್ತೆಯಾಗಿದ್ದ 21 ವರ್ಷದ ಯುವತಿ ಝಕಿಯಾ ಮುಲ್ಲಾ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಪೊಲೀಸರು ಮಹತ್ವದ ಸುಳಿವು ಪತ್ತೆಹಚ್ಚಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿಯನ್ನು…

Read More