ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ಜನ ಪ್ರತಿನಿಧಿಗಳಾದ ನಮ್ಮ ಕರ್ತವ್ಯ: ಬಿ ವೈ ರಾಘವೇಂದ್ರ

ಶಿವಮೊಗ್ಗ : ಜಿಲ್ಲೆಯ ವಿವಿಧ ಹಳೆಯ ಕೈಗಾರಿಕೆಗಳು ಕೆಲವು ಕಾರಣಕ್ಕೆ ಮುಚ್ಚುವ ಸ್ಥಿತಿ ಬಂದಿದೆ ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜಿಲ್ಲೆಯಿಂದ ಕೈಗಾರಿಕಾ ಉದ್ಯಮಿಗಳ ಸಹಕಾರದಿಂದ ಉತ್ಪನ್ನಗಳು ತಲುಪುತ್ತಿದೆ, ಇಲ್ಲಿನ ಉದ್ಯಮಿಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ಜನ ಪ್ರತಿನಿಧಿಗಳಾದ ನಮ್ಮ ಕರ್ತವ್ಯವಾಗಿದೆ ಆದ್ದರಿಂದ ನಮ್ಮ ಸೇವೆ
ಮತ್ತು ಕೆಲಸಗಳು ಉತ್ತಮ ಗುಣಮಟ್ಟದಾಗಿರಲಿ ಎಂದು ಸಂಸದರಾದ ಬಿ.ವೈ ರಾಘವೇಂದ್ರ ಅವರು ತಿಳಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಶಿವಮೊಗ್ಗ ಸಾಗರ ರಸ್ತೆಯಲ್ಲಿ ಕೈಗಾರಿಕಾ ವಸಹತು ಪ್ರದೇಶದಲ್ಲಿ ಸುಮಾರು 10 ಕೋಟಿ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಸಂಸದರಾದ
ಬಿ. ವೈ ರಾಘವೇಂದ್ರ ಅವರು ಭಾಗವಹಿಸಿ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ಎಸ್ ದತ್ತಾತ್ರಿ, ಸುಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮಹಾನಗರ ಪಾಲಿಕೆ ಮಹಾಪೌರರದ ಸುನೀತ ಅಣ್ಣಪ್ಪ. ಚಿದಾನಂದ ವಠಾರೆ,ಉದ್ಯಮಿಗಳಾದ ಸತ್ಯನಾರಾಯಣ್.
ಉಮೇಶ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *