ವೀರಶೈವ ಲಿಂಗಾಯತ ಮಹಾಸಭಾದಿಂದ ಬ್ರಹ್ಮೇಶ್ವರದಲ್ಲಿ ಜ.08 ರಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರಿಗೆ ಸನ್ಮಾನ ಕಾರ್ಯಕ್ರಮ|bsy

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕ್ ಘಟಕ ಹಾಗೂ ಬ್ರಹ್ಮೇಶ್ವರ ವೀರಭದ್ರೇಶ್ವರ ಸೇವಾ ಸಮಿತಿಯವರು ಜನವರಿ 8 ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮೇಶ್ವರದ ವೀರಶೈವ ಸಭಾಭವನದಲ್ಲಿ ದಣಿವರಿಯದ ಜನನಾಯಕ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಅಖಿಲಾ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಬಿ.ಯುವರಾಜ್ ತಿಳಿಸಿದರು. ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಸನ್ಮಾನ ಸಮಾರಂಭದ ದಿವ್ಯಸಾನಿಧ್ಯವನ್ನು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸುವರು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ…

Read More

Ripponpete | ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ ಕ್ರೀಡಾಪಟುಗಳಿಗೆ ರಿಪ್ಪನ್ ಪೇಟೆಯಲ್ಲಿ ಅದ್ದೂರಿ ಸನ್ಮಾನ

ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ  ಕ್ರೀಡಾಪಟುಗಳಿಗೆ ರಿಪ್ಪನ್ ಪೇಟೆಯಲ್ಲಿ ಅದ್ದೂರಿ ಸನ್ಮಾನ ರಿಪ್ಪನ್‌ಪೇಟೆ : ರಾಷ್ಟ್ರಮಟ್ಟದ  ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ  ಮಲೆನಾಡಿಗೆ ಕೀರ್ತಿಯನ್ನು ತಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ    ಪ್ರೋ ಕಬ್ಬಡಿ ಹತ್ತನೇ ಸೀಸನ್ ನ ಯುಪಿ ಯೋಧ ತಂಡದ ಆಟಗಾರ ಯುವ ಪ್ರತಿಭೆ ಗಗನ್ ಗೌಡ ಹಾಗೂ ಖೇಲೋ ಇಂಡಿಯಾ ಕಬ್ಬಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದ ಪ್ರಜ್ವಲ್ ಶ್ರೀಧರ್ ರವರಿಗೆ  ಅದ್ದೂರಿ ಸ್ವಾಗತ ಕೋರಲಾಯಿತು. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿ…

Read More

ರಿಪ್ಪನ್‌ಪೇಟೆ : ಪಾದಚಾರಿಗೆ ಬೈಕ್ ಡಿಕ್ಕಿ – ಗಂಭೀರ ಗಾಯಗೊಂಡ ಪಾದಚಾರಿ ಮೆಗ್ಗಾನ್ ಗೆ ದಾಖಲು |Accident

ರಿಪ್ಪನ್‌ಪೇಟೆ : ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ಪಟ್ಟಣದ ವಿನಾಯಕನಗರದ ಬಾಲಕಿಯರ ಹಾಸ್ಟೆಲ್ ಮುಂಭಾಗದಲ್ಲಿ ನಡೆದಿದೆ. ಶಿವಮೊಗ್ಗ ರಾಮನಗರ ನಿವಾಸಿ ಸೈಯದ್ ಮುಜಾಹಿದ್ (34) ಗಂಭೀರ ಗಾಯಗೊಂಡಿದ್ದಾರೆ. ವಿನಾಯಕನಗರದಿಂದ ರಿಪ್ಪನ್‌ಪೇಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಿಪ್ಪನ್‌ಪೇಟೆ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಡಗಾಲು ಮುರಿದಿದ್ದು ,ತಲೆ ಹಾಗೂ ಎಡಪಕ್ಕೆಗೆ ತೀವ್ರತರವಾದ ಪೆಟ್ಟಾಗಿದ್ದು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ರಾಮನಗರ ನಿವಾಸಿ ಸೈಯದ್ ಮುಜಾಹಿದ್…

Read More

ಶಾಸಕನ ಪುತ್ರನ ಹತ್ಯೆಗೆ ಜೈಲ್ ನಲ್ಲಿ ಸ್ಕೆಚ್ – ದೂರು ದಾಖಲು

ಶಾಸಕನ ಪುತ್ರನ ಹತ್ಯೆಗೆ ಜೈಲ್ ನಲ್ಲಿ ಸ್ಕೆಚ್ – ದೂರು ದಾಖಲು ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪುತ್ರ ಬಸವೇಶ್ ರನ್ನ ಹತ್ಯೆಗೆ ಜೈಲಿನಲ್ಲಿ ಸ್ಕೆಚ್ ನಡೆದಿರುವ ಬಗ್ಗೆ ಎಫ್ಐಆರ್ ದಾಖಲಾಗಿರಿವ ಘಟನೆ ನಡೆದಿದೆ. ಭದ್ರಾವತಿ ನಗರದ ಜಟ್ ಪಟ್ ನಗರದ ವಾಸಿಯಾದ ಮುಬಾರಕ್ ಮುಬ್ಬು ಕಳೇದ 17 ನೇ ತಾರೀಖು ಗುತ್ತಿಗೆದಾರನ ಬಳಿ ಬಂದು ಬಸಣ್ಯ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಆ ಬಳಿಕ ಆತ ಡಿಚ್ಚಿ ಮುಬಾರಕ್‌ ಜೈಲಿನಿಂದ  ಎರಡು ಪ್ರತ್ಯೇಕ ಫೋನ್‌ ನಂಬರ್‌ನಿಂದ ಕರೆ ಮಾಡಿ,…

Read More

Hombuja | ಧರ್ಮಸಾಮರಸ್ಯ, ಸ್ವಾವಲಂಬನೆ, ಕರ್ತವ್ಯ ತತ್ಫರತೆಯಿಂದ ಭಾರತ ರಾಷ್ಟ್ರದ ಔನತ್ಯ ಶತಃಸಿದ್ಧ | ಹೊಂಬುಜ ಶ್ರೀಗಳು

ಧರ್ಮಸಾಮರಸ್ಯ, ಸ್ವಾವಲಂಬನೆ, ಕರ್ತವ್ಯ ತತ್ಫರತೆಯಿಂದ ಭಾರತ ರಾಷ್ಟ್ರದ ಔನತ್ಯ ಶತಃಸಿದ್ಧ | ಹೊಂಬುಜ ಶ್ರೀಗಳು ಪ್ರತಿಯೋರ್ವರೂ ಭಾರತದ ಸಂವಿಧಾನದ ಪರಿವ್ಯಾಪ್ತಿಯಲ್ಲಿ ರಾಷ್ಟ್ರದ ಭಾವೈಕ್ಯತೆ, ಸಮಗ್ರತೆಯನ್ನು ಗೌರವಯುತವಾಗಿ ಸಂರಕ್ಷಿಸಬೇಕು. ಪ್ರಜಾಪ್ರಭುತ್ವವು ರಾಷ್ಟ್ರದ ಆಡಳಿತ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೇ ಧರ್ಮ ಸಹಿಷ್ಣುತೆ, ಅಹಿಂಸಾತ್ಮಕ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಲು ದಾರಿದೀಪವಾಗಿದೆ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶುಭ ಸಂದೇಶ ನೀಡಿದರು. ದೇಶದ ಸಮಗ್ರತೆ, ಸಶಕ್ತ ಭಾರತೀಯರೆಲ್ಲರ ಆರೋಗ್ಯದಾಯಕ ಸಾಮಾಜಿಕ,…

Read More

ಅರಸಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಉಮಾಕರ್ ರಾಜೀನಾಮೆ |arasalu

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಕರ್ ರಾಜೀನಾಮೆ ಸಲ್ಲಿಸಿದ್ದಾರೆ. ಅರಸಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ 20 ತಿಂಗಳ ಕಾಲ ಕಾರ್ಯನಿರ್ವಹಿಸಿದ ಹೂವಪ್ಪ ಯಾನೆ ಉಮಾಕರ್ ಸಾಗರದ ಉಪ ವಿಭಾಗ ಅಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಕೆಲಸದ ಒತ್ತಡ ಹಾಗೂ ಕಾರಣಾಂತರದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಗರ ನಗರಸಭೆಯ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಆಸಿಫ್ ಭಾಷಾಸಾಬ್,…

Read More

Hosanagara | ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಶಾಲೆಯನ್ನು ಉಳಿಸುವ ಜವಬ್ದಾರಿ ಪೋಷಕರದ್ದು : ಸಿಪಿಐ ಗುರಣ್ಣ ಹೆಬ್ಬಾಳ್ಕರ್

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಶಾಲೆ ಉಳಿಸುವ ಜವಬ್ದಾರಿ ಪೋಷಕರದ್ದು : ಸಿಪಿಐ ಗುರಣ್ಣ ಹೆಬ್ಬಾಳ್ಕರ್ “ಸರ್ಕಾರಿ ಶಾಲೆ ಅಭಿಮಾನ – ಸುಣ್ಣಬಣ್ಣ ಅಭಿಯಾನದ ಮತ್ತೊಂದು ಶಾಲೆಗೆ ಚಾಲನೆ ನೀಡಿದ ಸಿಪಿಐ ಗುರಣ್ಣ ಹೆಬ್ಬಾಳ್ಕರ್ ಹೊಸನಗರ : ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ  ಶಾಲೆಗಳನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರ ಮೇಲಿದೆ. ಸರ್ಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳು ಲಭ್ಯವಾಗುತ್ತಿದ್ದು, ಇದರತ್ತ ಹೆಚ್ಚಿನ ಗಮನಹರಿಸಬೇಕೆಂದು ಸಿಪಿಐ ಗುರಣ್ಣ ಹೆಬ್ಬಾಳ್ಕರ್ ಹೇಳಿದರು. ಪಟ್ಟಣದ ಮಾವಿನಕೊಪ್ಪ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್…

Read More

ಗುಂಡು ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆಲುವಳ್ಳಿ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ|rpet news

ಗುಂಡು ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆಲುವಳ್ಳಿ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಸುರಕ್ಷಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಪ್ರದೇಶವಾದ ಆಲುವಳ್ಳಿ ಸರ್ಕಾರಿ…

Read More

‘ವರ್ಕ್ ಫ್ರಂ ಹೋಮ್’ ಆಫರ್ ನಂಬಿ ಮೋಸ ಹೋದ ಇಂಜಿನಿಯರ್ — ಒಂಬತ್ತು ದಿನಗಳಲ್ಲಿ 11 ಲಕ್ಷ ವಂಚನೆ!

‘ವರ್ಕ್ ಫ್ರಂ ಹೋಮ್’ ಆಫರ್ ನಂಬಿ ಮೋಸ ಹೋದ ಇಂಜಿನಿಯರ್ — ಒಂಬತ್ತು ದಿನಗಳಲ್ಲಿ 11 ಲಕ್ಷ ವಂಚನೆ! ಶಿವಮೊಗ್ಗ: ನಗರದ  ಕುವೆಂಪು ನಗರದಲ್ಲಿ ವಾಸಿಸುವ ಮಹಿಳಾ ಎಂಜಿನಿಯರ್‌ರೊಬ್ಬರಿಗೆ ಸೈಬರ್ ವಂಚಕರು ಒಂಬತ್ತು ದಿನದಲ್ಲ್ಲಿ ೧೧ ಲಕ್ಷಕ್ಕೂ ಅಧಿಕ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ.  ಈ  ಹಿನ್ನೆಲೆ ಮಹಿಳೆ  ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ನವೆಂಬರ್ ೨, ೨೦೨೫ ರಂದು ಮಹಿಳೆ ಮೊಬೈಲ್ ನೋಡುತ್ತಿದ್ದಾಗ, ವಂಚಕರು ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಮೂಲಕ ಅವರನ್ನು…

Read More

ಗಣಪತಿ ಹಬ್ಬ : ಶಾಂತಿ – ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಜ್ಜು , 80 ಕಿಡಿಗೇಡಿಗಳ ಗಡಿಪಾರು | ಎಸ್ಪಿ ಮಿಥುನ್ ಕುಮಾರ್  ಮಾಹಿತಿ

ಗಣಪತಿ ಹಬ್ಬ : ಶಾಂತಿ – ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಜ್ಜು , 80 ಕಿಡಿಗೇಡಿಗಳ ಗಡಿಪಾರು | ಎಸ್ಪಿ ಮಿಥುನ್ ಕುಮಾರ್  ಮಾಹಿತಿ ಶಿವಮೊಗ್ಗ: ಗೌರಿ ಮತ್ತು ಗಣೇಶ ಹಬ್ಬಗಳ ಹಿನ್ನಲೆಯಲ್ಲಿ ಗಣಪತಿ ಸಮಿತಿಗಳೊಂದಿಗೆ ಶಾಂತಿ ಸಭೆಗಳಿಗೆ ಚಾಲನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರು ಗಣಪತಿ ಸಮಿತಿಗಳಿಗೆ ಶಾಂತಿಯುತ ಮತ್ತು ವೈಭವದ ಹಬ್ಬ ಆಚರಣೆಗೆ ಸಲಹೆ ಸೂಚನೆಗಳನ್ನು ನೀಡಿದರು. ಕೋಟೆ ರಸ್ತೆಯ ಹಿಂದೂ ಮಹಾಸಭಾ ಸಮಿತಿಯೊಂದಿಗೆ ಶಾಂತಿಸಭೆ ಪ್ರಾರಂಭಿಸಿದ…

Read More