ಸಾಗರ : ಗಾಂಜಾ ಸೇವನೆ ಮಾಡಿದ್ದ ಮೂವರ ಬಂಧನ : ವಿಶೇಷ ಟೆಸ್ಟಿಂಗ್ ಕಿಟ್ ಮೂಲಕ ಪತ್ತೆ :

ಸಾಗರ: ಗಾಂಜಾ ಸೇವಿಸಿದ ಮೂವರನ್ನು ತಪಾಸಣೆಗೆ ಒಳಪಡಿಸಿದ್ದು, ಅವರು ಮಾದಕ ವಸ್ತು ಸೇವಿಸಿದ ವಿಚಾರ ದೃಢಪಟ್ಟಿದ್ದು, ಅವರನ್ನು ಎನ್.ಡಿ.ಪಿ.ಎಸ್.ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ತಾಲೂಕಿನ ಆವಿನಹಳ್ಳಿ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಯುವಕರನ್ನು ಸಾಗರ ಗ್ರಾಮಾಂತರ ಪೊಲೀಸರು ಸೋಮವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ಆಗ ಗಾಂಜಾ ಸೇವಿಸಿರಬಹುದು ಎಂಬ ಅನುಮಾನ ಮೂಡಿದೆ.  ನಂತರ ಅವರನ್ನು ಗಾಂಜಾ ಟೆಸ್ಟಿಂಗ್ ಕಿಟ್ ಮೂಲಕ ಪರೀಕ್ಷಿಸಲಾಗಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಸೊರಬ ಮೂಲದ ಶಶಾಂಕ್, ಸುಮಂತ್, ಶಿಕಾರಿಪುರದ ಮಹೇಶ್ ಎಂಬುವವರನ್ನು…

Read More

ರಿಪ್ಪನ್‌ಪೇಟೆ ಆರೋಗ್ಯ ಕೇಂದ್ರದಲ್ಲಿ 108 ಆಂಬುಲೆನ್ಸ್ ಸೌಲಭ್ಯವಿಲ್ಲದೆ ನರಳಾಡಿದ ಅಪಘಾತಗೊಂಡ ಗಾಯಾಳುಗಳು :

ಹೊಸನಗರ ತಾಲೂಕಿನ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂದು ಹೆಗ್ಗಳಿಕೆಯನ್ನು ಹೊಂದಿರುವ  ರಿಪ್ಪನ್ ಪೇಟೆ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ  108 ಆಂಬುಲೆನ್ಸ್ ಸೌಲಭ್ಯವಿಲ್ಲದೆ  ಕಳೆದ ಮೂರು ತಿಂಗಳುಗಳಾಗಿವೆ.  ಈ ಬಗ್ಗೆ ಸ್ಥಳೀಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಸಂಬಂಧ  ಪಟ್ಟ ಹಿರಿಯ ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಹಲವಾರು ಬಾರಿ ಸಾರ್ವಜನಿಕರು ಮನವಿ ಸಲ್ಲಿಸಿದರೂ ಸಹ ಯಾವುದೇ ರೀತಿಯ ಸ್ಪಂದನೆಯನ್ನು ನೀಡಿರಲಿಲ್ಲ. ರಸ್ತೆ ಅಪಘಾತದಲ್ಲಿ ಬೈಕುಗಳ ಮುಖಾಮುಖಿ ಡಿಕ್ಕಿಯಿಂದ ತಂದೆ ಸ್ಥಳದಲ್ಲೇ ಮೃತಪಟ್ಟರೆ ಬದುಕುಳಿದ ಮಗನಿಗೆ…

Read More

ರಿಪ್ಪನ್ ಪೇಟೆ : ದಯಾಮರಣದ ಮೊರೆ ಹೋದ ಎಂಬತ್ತರ ವೃದ್ದೆ :

ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಅರಸಾಳು ಎಂಬಲ್ಲಿ ವಯೋವೃದ್ಧೆಯೋರ್ವರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದು, ಜೀವನ ನಡೆಸಲು ಆಸರೆಯಾಗಬೇಕಿದ್ದ ಪತಿಯು ಇಹಲೋಕ ತ್ಯಜಿಸಿದ್ದಾರೆ. ಒಬ್ಬಂಟಿಯಾಗಿರುವ ಭಾಗ್ಯಲಕ್ಷ್ಮಿ ಎಂಬ ವೃದ್ದೆಯು ಸುಮಾರು 80 ವರ್ಷದವರಾಗಿದ್ದಾರೆ.ಹಳೆಯ ಜೋರಾಗಿ ಮಳೆ ಬಂದರೆ ಬಿದ್ದು ಹೋಗುವಂತಹ ಮನೆಯಲ್ಲಿ ವಾಸಿಸುತ್ತಿದ್ದಾರೆ.ಯಾರೂ ನೆರವಿಗೆ ಬಾರದೇ ಇರುವ ಕಾರಣ ದಯಮರಣಕ್ಕೆ ಸರ್ಕಾರದ ಬಳಿ ಮೊರೆಹೋಗುವತ್ತ ಚಿಂತಿಸಿದ್ದಾರೆ. ತಮ್ಮ ಪತಿಯು ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದು,ಕೆಲವು  ಕೌಟುಂಬಿಕ ಸಮಸ್ಯೆಯಿಂದ ಬರಬೇಕಾಗಿದ್ದ ಸರ್ಕಾರದ ಪಿಂಚಣಿ ಹಣ ಈ ವಯೋವೃದ್ದೆಯ ಕೈ ಸೇರುತ್ತಿಲ್ಲ.ಈ ವೃದ್ದೆಯು…

Read More

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ : ₹65 ಸಾವಿರ ಮೌಲ್ಯದ 1 ಕೆಜಿ 261 ಗ್ರಾಂ ಗಾಂಜಾ ವಶ

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ : ₹65 ಸಾವಿರ ಮೌಲ್ಯದ 1 ಕೆಜಿ 261 ಗ್ರಾಂ ಗಾಂಜಾ ವಶ Shivamogga Doddapete Police arrested a man for illegally selling ganja and seized 1.261 kg of cannabis worth around ₹65,000 during a raid near Palak Shadi Mahal. ಶಿವಮೊಗ್ಗ: ನಗರದಲ್ಲಿ ಕಾನೂನುಬಾಹಿರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲದ ವಿರುದ್ಧ ದೊಡ್ಡಪೇಟೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಓರ್ವ…

Read More

ಸಹಸ್ರಾರು ಜನರ ಸಮ್ಮಿಲನಕ್ಕೆ ಸಾಕ್ಷಿಯಾದ ರಿಪ್ಪನ್‌ಪೇಟೆಯ ಹಿಂದೂ ಸಂಗಮ ಶೋಭಾಯಾತ್ರೆ

A grand Hindu Sangama Shobha Yatre was held in Rippanpete with the participation of thousands of devotees from surrounding villages, showcasing unity, culture, and tradition. ರಿಪ್ಪನ್‌ಪೇಟೆಯಲ್ಲಿ ಭವ್ಯ ‘ಹಿಂದೂ ಸಂಗಮ’ ಶೋಭಾ ಯಾತ್ರೆ; ಸಹಸ್ರಾರು ಜನರ ಭಾಗಿ ರಿಪ್ಪನ್‌ಪೇಟೆ: ಪಟ್ಟಣದ ಹಿಂದೂಪರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ ಶೋಭಾ ಯಾತ್ರೆ ಅತ್ಯಂತ ಅದ್ದೂರಿಯಾಗಿ ಜರುಗಿತು. ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಬಾಳೂರು ಹಾಗೂ ಜೇನಿ ಗ್ರಾಮ…

Read More

ರಿಪ್ಪನ್‌ಪೇಟೆ ಸೇರಿದಂತೆ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ (09/02/2025) ವಿದ್ಯುತ್ ವ್ಯತ್ಯಯ

ರಿಪ್ಪನ್‌ಪೇಟೆ ಸೇರಿದಂತೆ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ (09/02/2025) ವಿದ್ಯುತ್ ವ್ಯತ್ಯಯ ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 09/02/25 ರಂದು ಬೆಳಿಗ್ಗೆ 08-00 ರಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ರಿಪ್ಪನ್‌ಪೇಟೆ ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿಯ ನಿಮಿತ  ನಾಳೆ ಬೆಳಿಗ್ಗೆ 08-00 ರಿಂದ ಸಂಜೆ 6-00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ರಿಪ್ಪನ್‌ಪೇಟೆ ಮೆಸ್ಕಾಂ ಇಲಾಖೆಯ…

Read More

ಶಿವಮೊಗ್ಗ : ಅನ್ನದಾತರನ್ನು ಕೊಂದವರು ಅಧಿಕಾರದಲ್ಲಿರೋದು ಬೇಡ : ಕಾಂಗ್ರೆಸ್ ಮೌನ ಪ್ರತಿಭಟನೆ

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗದ ಪಾರ್ಕ್‌ನಲ್ಲಿರೋ ಗಾಂದಿ ಪ್ರತಿಮೆಯ ಮುಂದೆ ಮೌನ ಪ್ರತಿಭಟನೆಯನ್ನ ನಡೆಸಲಾಯಿತು.  ಉತ್ತರ ಪ್ರದೇಶದ ಲಿಕ್ಕಿಂಪೂರ ಖೇರಿಯಲ್ಲಿ ನಡೆದ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ರವರ ಮಗ ಆಶಿಶ್ ಮಿಶ್ರಾ ಜೀಪನ್ನು ಹಾಯಿಸಿ ಹತ್ಯೆಗೈದವರ ವಿರುದ್ಧ ಮೌನ ಪ್ರತಿಭಟನೆ ಮಾಡಲಾಯಿತು. ಕೇಂದ್ರದಲ್ಲಿ ಅಧಿಕಾರದಲಿ ಮೋದಿ ನೇತೃತ್ವದ ಬಿ.ಜೆ.ಪಿ ಸರ್ಕಾರ ಇಷ್ಟು ದೊಡ್ಡ ಕೃತ್ಯದಲ್ಲಿ ಆರೋಪಿಯಾಗಿರೋ ಅಜಯ್‌ ಮಿಶ್ರ…

Read More

ಪ್ರೀತ್ಸೆ ಪ್ರೀತ್ಸೆ ಅಂತ ಕಾಟ ಕೊಟ್ಟ ಯುವಕ; ಅಪ್ರಾಪ್ತೆ ನೇಣಿಗೆ ಶರಣು!| Crime News

ಪ್ರೀತ್ಸೆ ಪ್ರೀತ್ಸೆ ಅಂತ ಕಾಟ ಕೊಟ್ಟ ಯುವಕ; ಅಪ್ರಾಪ್ತೆ ನೇಣಿಗೆ ಶರಣು! ತನ್ನನ್ನು ಪ್ರೀತಿಸು ಎಂದು ಬೆನ್ನು ಬಿದ್ದಿದ್ದ ಯುವಕನ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಗೊಂದಿಚಟ್ನಿ ಹಳ್ಳಿಯಲ್ಲಿ ನಡೆದಿದೆ. ವರ್ಷಿಣಿ (14) ಆತ್ಮಹತ್ಯೆಗೆ ಶರಣಾದ ಬಾಲಕಿ. ತ್ಯಾಗರಾಜ್ ಎಂಬ ಯುವಕ ಬಾಲಕಿಗೆ ತನ್ನನ್ನು ಪ್ರೀತಿಸು ಎಂದು ಬೆನ್ನುಬಿದ್ದಿದ್ದ. ಆದರೆ ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಸುಮಾರು ದಿನಗಳಿಂದ ತನ್ನನ್ನು ಪ್ರೀತಿಸುವಂತೆ ತ್ಯಾಗರಾಜ್ ಬಾಲಕಿಗೆ ಟಾರ್ಚರ್ ನೀಡಿದ್ದು,…

Read More

ರಿಪ್ಪನ್ ಪೇಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಸಂಭ್ರಮದಿಂದ ಆಚರಣೆ :

ರಿಪ್ಪನ್ ಪೇಟೆ : ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಇಂದು  ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಭಾರಿ ಮಳೆ ಸುರಿಯುತ್ತಿದ್ದರು ಮಹಿಳೆಯರು ಬೆಳಿಗ್ಗೆಯಿಂದಲೇ  ದೇವಾಲಯಗಳಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.  ಪಟ್ಟಣದ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ಆದೇಶದ ಅನ್ವಯ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆಯಿಂದ 11:30ರ ತನಕ ಮುತ್ತೈದೆಯರಿಗೆ ಅರಿಶಿನ–ಕುಂಕುಮ ನೀಡಲಾಯಿತು. ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Read More

ಕಸ್ತೂರಿ ಕನ್ನಡ ಸಂಘದ ಆರೋಪ ರಾಜಕೀಯ ಪ್ರೇರಿತ – ನಿರೂಪ್ ಕುಮಾರ್|Ripponpet

ರಿಪ್ಪನ್‌ಪೇಟೆ : ಪಟ್ಟಣದ ಕಸ್ತೂರಿ ಕನ್ನಡ ಸಂಘದವರು ಕಳೆದ 28 ವರ್ಷಗಳಿಂದ ನಾಡು- ನುಡಿ ಜಲಕ್ಕೆ ಶ್ರಮಿಸಿದ ಕಲಾ ಕೌಸ್ತುಭ ಕನ್ನಡ ಸಂಘದ ಮೇಲೆ ಆರೋಪಿಸಿರುವುದು ರಾಜಕೀಯ ಪ್ರೇರಿತ ಎಂದು ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ನಿರೂಪ್ ಕುಮಾರ್ ಹೇಳಿದರು.   ಇಂದು ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು‌ ಕಸ್ತೂರಿ ಕನ್ನಡ ಸಂಘದವರು ಇಂದು ಪತ್ರೀಕಾ ಗೋಷ್ಟಿ ನಡೆಸಿ ಕಲಾ ಕೌಸ್ತುಭ ಕನ್ನಡ ಸಂಘವು ಅನ್ಯ ಭಾಷೆಗಳ ವೈಭವಿಕರಿಸುತ್ತಿದೆ ಎಂದು ಹೇಳಿರುವುದು‌…

Read More