Headlines

ರಾಜ್ಯ ವಿಧಾನಸಭೆಯಿಂದ 18 ಬಿಜೆಪಿ ಶಾಸಕರು ಅಮಾನತು: ಹೊತ್ತೊಯ್ದು ಹೊರ ಹಾಕಿದ ಮಾರ್ಷಲ್ಸ್

ರಾಜ್ಯ ವಿಧಾನಸಭೆಯಿಂದ 18 ಬಿಜೆಪಿ ಶಾಸಕರು ಅಮಾನತು: ಹೊತ್ತೊಯ್ದು ಹೊರ ಹಾಕಿದ ಮಾರ್ಷಲ್ಸ್

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಪೀಠಕ್ಕೆ ಅಗೌರವ ತಂದಂತ ಆರೋಪದ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ಆರು ತಿಂಗಳುಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಅಲ್ಲದೇ ತಕ್ಷಣವೇ ಹೊರ ನಡೆಯುವಂತೆ ಸ್ಪೀಕರ್ ಸೂಚಿಸಿದರು.

ಆದರೇ ಸ್ಪೀಕರ್ ಸೂಚನೆಗೆ ಧಿಕ್ಕರಿಸಿ ಸದನದಲ್ಲೇ ಇದ್ದಂತ 18 ಬಿಜೆಪಿಯ ಅಮಾನತು ಶಾಸಕರನ್ನು ಮಾರ್ಷಲ್ ಗಳು ಹೊತ್ತೊಯ್ದು ಹೊರ ಹಾಕಿದರು.

ಇಂದು ವಿಧಾನಸಭೆಯ ಕಲಾಪ ಮಧ್ಯಾಹ್ನ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕರಿಂದ ಗಲಾಟೆ, ಕೋಲಾಹಲ ಏಳಿಸಲಾಯಿತು. ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ಬಿಜೆಪಿಯ ಶಾಸಕರು ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ವಿಧಾನಸಭೆಯ ಕಲಾಪದಿಂದ 6 ತಿಂಗಳವರೆಗೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ ಮಾಡಿದ್ದಾರೆ.

ಹೀಗಿದೆ ವಿಧಾನಸಭೆ ಕಲಾಪದಿಂದ 6 ತಿಂಗಳುಗಳ ಕಾಲ ಅಮಾನತುಗೊಂಡ 18 ಬಿಜೆಪಿ ಶಾಸಕರ ಪಟ್ಟಿ

ದೊಡ್ಡನಗೌಡ ಪಾಟೀಲ್

ಅಶ್ವಥನಾರಾಯಣ

ಎಸ್ ಆರ್ ವಿಶ್ವನಾಥ್

ಬೈರತಿ ಬಸವರಾಜು

ಎಮ್ ಆರ್ ಪಟೇಲ್

ಚನ್ನಬಸಪ್ಪ

ಉಮಾನಾಥ್ ಕೋಟ್ಯನ್

ಸುರೇಶ್ ಗೌಡ

ಶೈಲೇಂದ್ರ ಬೆಲ್ದಾಳೆ

ಶರಣು ಸಲಗಾರ್

ಸಿಕೆ ರಾಮಮೂರ್ತಿ

ಯಶ್ಪಾಲ್ ಸುವರ್ಣ

ಹರಿಶ್ ಬಿ ಪಿ

ಭರತ್ ಶೆಟ್ಟಿ

ಬಸವರಾಜ ಮತ್ತಿಮೂಡ್

ಧೀರಜ್ ಮುನಿರಾಜು

ಮುನಿರತ್ನ

ಚಂದ್ರು ಲಮಾಣಿ

ಸ್ಪೀಕರ್ ಪೀಠದಲ್ಲಿ ಕುಳಿತಿರುವ ಯು.ಟಿ ಖಾದರ್ ನಿಮ್ಮನ್ನು ಕ್ಷಮಿಸಬಹುದು. ಆದರೇ ಸ್ಪೀಕರ್ ಪೀಠಕ್ಕೆ ಅಗೌರವ ತೋರುವುದನ್ನು ಸಹಿಸುವುದಿಲ್ಲ ಎಂಬುದಾಗಿ ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಆದೇಶದ ಸಂದರ್ಭದಲ್ಲಿ ಹೇಳಿದ್ದಾರೆ. ಅಲ್ಲದೇ ಕೂಡಲೇ ಹೊರ ಹೋಗುವಂತೆ ಸೂಚಿಸಿದರು. ಆದರೇ ಸದನದಲ್ಲೇ ಉಳಿದಂತ ಅಮಾನತುಗೊಂಡ ಶಾಸಕರನ್ನು ಮಾರ್ಷಲ್ ಗಳು ಹೊತ್ತೊಯ್ದು ಹೊರ ಹಾಕಿದರು.

ಅಮಾನತುಗೊಂಡ ಶಾಸಕರಿಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಅಮಾನತು ಆದಂತಹ ಸದಸ್ಯರು ತಕ್ಷಣ ಸದನದಿಂದ ಹೊರ ನಡೆಯಬೇಕು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಆದೇಶ ಹೊರಡಿಸಿದರು.

ವಿಧಾನಸಭೆಯಿಂದ ಈ ವೇಳೆ ಶಾಸಕರನ್ನು ಮಾರ್ಷಲ್ ಗಳು ಎತ್ತಿಕೊಂಡು ಹೊರ ನಡೆದರು. ಒಬ್ಬೊಬ್ಬರನ್ನು ಎತ್ತಿಕೊಂಡು ಬಂದು ಮಾರ್ಷಲ್ ಗಳು ಹೊರಹಾಕಿದ್ದಾರೆ. ಬಿಜೆಪಿ ಶಾಸಕರಾದ ಮುನಿರತ್ನ, ಚನ್ನಬಸಪ್ಪ, ಬೈರತಿ ಬಸವರಾಜು, ಬಿ ಸುರೇಶ್ ಗೌಡ, ಡಾ. ಭರತ್ ಶೆಟ್ಟಿ, ಧೀರಜ್ ಮುನಿರಾಜು, ಸಿ ಕೆ ರಾಮಮೂರ್ತಿಯನ್ನು ಸದನದಿಂದ ಮಾರ್ಷಲ್ ಗಳು ಎತ್ತಿಕೊಂಡು ಹೊರ ಹಾಕಿದ್ದಾರೆ.ಮೊದಲ ಬಾರಿ ಆರು ತಿಂಗಳ ಕಾಲ ಬಿಜೆಪಿಯ 18 ಶಾಸಕರು ಅಮಾನತುಗೊಂಡಿದ್ದಾರೆ.

ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ 6 ತಿಂಗಳುಗಳ ಕಾಲ ಅಮಾನತು ಮಾಡಲಾಗಿದೆ. ಮುಂದಿನ ಆರು ತಿಂಗಳು ಕಾಲ ವಿಧಾನಸಭೆ ಪ್ರಾಂಗಣ ಪ್ರವೇಶಕ್ಕೆ ಅವಕಾಶ ಇಲ್ಲ. ಅಮಾನತಾದ ಶಾಸಕರಿಗೆ ಯಾವುದೇ ರೀತಿಯಾದ ಟಿಎ ಡಿಎ ನಡೆದಂತೆ ಆದೇಶ ನೀಡಲಾಗಿದೆ.ಅಲ್ಲದೆ ಸ್ಥಾಯಿ ಸಮೀತಿ ಸಭೆಗಳಿಗೂ ಕೂಡ ಅವಕಾಶ ಇಲ್ಲ. ಅಮಾನತಿನ ಅವಧಿಯಲ್ಲಿ ಶಾಸಕರು ನೀಡುವ ಸೂಚನೆಗೆ ಮಾನ್ಯತೆ ಇಲ್ಲ ಶಾಸಕರ ದಿನದ ಭತ್ಯೆಗೂ ಸಹ ಕೊಕ್ ನೀಡಲಾಗಿದೆ.

Leave a Reply

Your email address will not be published. Required fields are marked *