ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಬೈಕ್ ಗೆ ಬೆಂಕಿ ಹಚ್ಚಿದ ಯುವಕ
ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಬೈಕ್ ಗೆ ಬೆಂಕಿ ಹಚ್ಚಿದ ಯುವಕ ದೂರು ಸಲ್ಲಿಸಲು ತೆರಳಿದ್ದ ತನ್ನ ತಾಯಿಗೆ ಪೊಲೀಸರು ಬೈದಿದ್ದಾರೆ ಎಂಬ ಕೋಪಕ್ಕೆ ತನ್ನ ಬೈಕ್‌ಗೆ ಯುವಕನೊಬ್ಬ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ವಿಧಾನಸೌಧದ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮೂಲದ ಪೃಥ್ವಿರಾಜ್ ಎಂಬಾತ ಕೃತ್ಯವೆಸಗಿದ್ದಾನೆ. ಬೆಂಗಳೂರಿನ ವಿಧಾನಸೌಧ ಹಾಗು ಹೈಕೋರ್ಟ್ ನಡುವಿನ ರಸ್ತೆಯಲ್ಲಿ ಬೈಕ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಬೆಂಕಿ ಹಚ್ಚಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರೋ ಪೃಥ್ವಿರಾಜ್ ನಾನು…