ಸ್ಮಶಾನದ ಜಾಗ ಒತ್ತುವರಿ : ಮೃತದೇಹ ಇಟ್ಟು ಗ್ರಾಮಸ್ಥರ ಪ್ರತಿಭಟನೆ
ಸೊರಬ : ಸರ್ಕಾರದಿಂದ ಮಂಜೂರಾದ ರುದ್ರಭೂಮಿಯನ್ನು ಅತಿಕ್ರಮಣಕಾರರಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಊರಿನ ಗ್ರಾಮಸ್ಥರೆಲ್ಲಾ ಸೇರಿ ಮೃತದೇಹವನ್ನು ಇಟ್ಟು ಸೊರಬ ಮುಖ್ಯ ರಸ್ತೆಯಲ್ಲಿ ಪ್ರತಿಭಟಿಸಿದ ಘಟನೆ ನಡೆದಿದೆ. ತಾಲೂಕಿನ ಹೆಚ್ಚೆ ಗ್ರಾಮದಲ್ಲಿ ಮಂಜೂರಾದ ರುದ್ರಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಗಡಿ ಗುರುತಿಸುವಂತೆ ಹತ್ತಾರು ಬಾರಿ ಮನವಿ ನೀಡಿದರೂ ಸಂಬಂಧಪಟ್ಟವರು ಸ್ಪಂದಿಸಿಲ್ಲ ಹಾಗಾಗಿ ಈ ದಿನ ಹೆಚ್ಚೆ ಊರಿನಲ್ಲಿ ನಿಧನರಾದವರ ಮೃತದೇಹವನ್ನು ಸೊರಬ ಪಟ್ಟಣಕ್ಕೆ ತಂದು ಪ್ರತಿಭಟಿಸಿದ್ದಾರೆ. ಸರ್ಕಾರದಿಂದ 4 ಎಕರೆ ಜಾಗ ಮಂಜೂರಾಗಿದೆ ಆದರೆ…