ಸಾಮಾನ್ಯ ಸಭೆಯಲ್ಲಿ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು

ಸಾಗರ : ಸಾಗರದ ನಗರಸಭೆಯಲ್ಲಿ ಬುಧವಾರ 2022-23 ನೇ ಸಾಲಿನ ಆಯವ್ಯಯ ಸಾಮಾನ್ಯ ಸಭೆಯನ್ನು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಈ ವೇಳೆ ಸಭೆಗೆ ಬಂದ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಸಭೆ ಆರಂಭವಾಗುತ್ತಿದ್ದಂತೆ ತಲೆಗೆ ಹೆಲ್ಮೆಟ್ ಧರಿಸಿಕೊಂಡು ಪ್ರತಿಭಟಿಸಿದರು.
ಇತ್ತೀಚೆಗೆ ಸಾಗರದ ಪ್ರತಿಷ್ಟಿತ ಎಲ್ ಬಿ ಕಾಲೇಜಿನ ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಹಾಲಪ್ಪ ಅವರ ಎದುರಲ್ಲೇ ಹಲ್ಲೆ ನಡೆದಿತ್ತು.

ಈ ಘಟನೆಯನ್ನು ಈ ರೀತಿಯಾಗಿ ಖಂಡಿಸಲಾಯಿತು. ಆಡಳಿತ ಪಕ್ಷದವರಿಂದ ನಮಗೆ ರಕ್ಷಣೆ ಇಲ್ಲಾ ಎಂದು ವಿಪಕ್ಷ ಕಾಂಗ್ರೇಸ್ ಸದಸ್ಯರು ಆರೋಪಿಸಿದರು.

ಇದರಿಂದಾಗಿ ಸಭೆಯಲ್ಲಿ ಆಡಳಿತ – ವಿರೋಧ ಪಕ್ಷಗಳ ನಡುವೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕೊನೆಗೆ ಸದಸ್ಯರು ತಲೆಗೆ ಹಾಕಿದ ಹೆಲ್ಮೆಟ್ ತೆಗೆದ ನಂತರವೇ ಸಭೆ ಮುಂದುವರಿಯಿತು.

Leave a Reply

Your email address will not be published. Required fields are marked *